Shivamogga: Marijuana and cigarettes found in biscuit packet brought to give to friend in jail: Two arrested! ಶಿವಮೊಗ್ಗ : ಜೈಲ್ ನಲ್ಲಿದ್ದ ಸ್ನೇಹಿತನಿಗೆ ನೀಡಲು ತಂದಿದ್ದ ಬಿಸ್ಕೆಟ್ ಪ್ಯಾಕೆಟ್ ನಲ್ಲಿ ಗಾಂಜಾ, ಸಿಗರೇಟ್ : ಇಬ್ಬರು ಅರೆಸ್ಟ್!

shimoga news | ಶಿವಮೊಗ್ಗ | ಜೈಲ್ ನಲ್ಲಿದ್ದ ಸ್ನೇಹಿತನಿಗೆ ನೀಡಲು ತಂದಿದ್ದ ಬಿಸ್ಕೆಟ್ ಪ್ಯಾಕೆಟ್ ನಲ್ಲಿ ಗಾಂಜಾ, ಸಿಗರೇಟ್ : ಇಬ್ಬರು ಅರೆಸ್ಟ್!

ಶಿವಮೊಗ್ಗ (shivamogga), ಅಕ್ಟೋಬರ್ 11: ಶಿವಮೊಗ್ಗ ಸೆಂಟ್ರಲ್ ಜೈಲ್ ನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಸ್ನೇಹಿತನಿಗೆ, ಬಿಸ್ಕೇಟ್ ಪ್ಯಾಕೆಟ್ ಗಳಲ್ಲಿ ಗುಪ್ತವಾಗಿ ಗಾಂಜಾ ಹಾಗೂ ಸಿಗರೇಟ್ ಪ್ಯಾಕೆಟ್ ಗಳಿಟ್ಟು ನೀಡಲು ಬಂದ ಯುವಕರಿಬ್ಬರು, ಜೈಲು ಸಿಬ್ಬಂದಿಗಳಿಗೆ ಸಿಕ್ಕಿ ಬಿದ್ದಿರುವ ಸಿನಿಮೀಯ ಶೈಲಿಯ ಘಟನೆ ಅಕ್ಟೋಬರ್ 10 ರಂದು ನಡೆದಿದೆ.

ಭದ್ರಾವತಿ ನಗರದ ನಿವಾಸಿಗಳಾದ ರಾಹಿಲ್ (19) ಹಾಗೂ ತಸೀರುಲ್ಲಾ (19) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಸೆಂಟ್ರಲ್ ಜೈಲ್ ಅಧೀಕ್ಷಕರಾದ ಡಾ. ರಂಗನಾಥ್ ಅವರ ದೂರಿನ ಆಧಾರದ ಮೇಲೆ, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಏನೀದು ಘಟನೆ? : ಶಿವಮೊಗ್ಗ ಸೆಂಟ್ರಲ್ ಜೈಲ್ ನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಮಹಮ್ಮದ್ ಗೌಸ್ ಯಾನೆ ಜಂಗ್ಲಿ ಎಂಬಾತನ ಸಂದರ್ಶನಕ್ಕೆಂದು ಸಂಜೆ 4.30 ಕ್ಕೆ ಆರೋಪಿಗಳಿಬ್ಬರು ಆಗಮಿಸಿದ್ದರು.

ಆರೋಪಿಗಳು ಮೂರು ಪ್ಯಾಕೆಟ್ ವೀಟಾ ಮಾರಿ ಗೋಲ್ಡ್ ಬಿಸ್ಕೆಟ್ ಪ್ಯಾಕೆಟ್ ಕೂಡ ಜೊತೆಯಲ್ಲಿ ತಂದಿದ್ದರು. ಅನುಮಾನದ ಮೇರೆಗೆ ಸದರಿ ಬಿಸ್ಕೆಟ್ ಪ್ಯಾಕೆಟ್ ಗಳನ್ನು ಕಾರಾಗೃಹದ ಸಿಬ್ಬಂದಿಗಳು ಪರಿಶೀಲಿಸಿದ್ದಾರೆ. ಈ ವೇಳೆ ಕಪ್ಪು ಗಮ್ ಟೇಪ್ ನಲ್ಲಿ ಸುತ್ತಿದ್ದ ಮೂರು ಕಪ್ಪು ಬಣ್ಣದ ವಸ್ತುಗಳು ಕಂಡುಬಂದಿವೆ.

ತಪಾಸಣೆ ವೇಳೆ ಅವುಗಳಲ್ಲಿ 1 ಗಾಂಜಾ ಪ್ಯಾಕೆಟ್ ಹಾಗೂ 2 ಸಿಗರೇಟ್ ಪ್ಯಾಕೆಟ್ ಗಳಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸದರಿ ಆರೋಪಿಗಳನ್ನು ಹಾಗೂ ನಿಷೇಧಿತ ವಸ್ತುಗಳನ್ನು ಕಾರಾಗೃಹ ಸಿಬ್ಬಂದಿಗಳು ವಶಕ್ಕೆ ಪಡೆದು, ತುಂಗಾನಗರ ಠಾಣೆ ಪೊಲೀಸರ ವಶಕ್ಕೊಪ್ಪಿಸಿದ್ದಾರೆ.

ಹದ್ದಿನ ಕಣ್ಣು! : ಬಿಸ್ಕೆಟ್ ಪ್ಯಾಕೆಟ್ ನಲ್ಲಿದ್ದ ಗಾಂಜಾ, ಸಿಗರೇಟ್ ಪ್ಯಾಕೆಟ್ ಗಳನ್ನು ಪತ್ತೆ ಹಚ್ಚುವ ಮೂಲಕ, ಜೈಲು ಸಿಬ್ಬಂದಿಗಳು ಚಾಣಾಕ್ಷತೆ ಮೆರೆದಿದ್ದಾರೆ. ಈ ಹಿಂದೆಯೂ ಕೂಡ ಗುಪ್ತವಾಗಿ ಜೈಲಿಗೆ ನಿಷೇಧಿತ ವಸ್ತುಗಳನ್ನು ತಂದಿದ್ದವರನ್ನು, ಜೈಲು ಸಿಬ್ಬಂದಿಗಳು ಪತ್ತೆ ಹಚ್ಚಿ ಪೊಲೀಸರಿಗೊಪ್ಪಿಸಿದ್ದರು.

A cinematic incident took place on October 10th when two young men who had come to Shivamogga Central Jail to secretly deliver marijuana and cigarette packets in biscuit packets to a friend who was an undertrial prisoner were caught by prison staff.

Shivamogga: Drinking water supply disrupted in various parts of the city on October 11th ಶಿವಮೊಗ್ಗ : ಅಕ್ಟೋಬರ್ 11 ರಂದು ನಗರದ ವಿವಿಧೆಡೆ ಕುಡಿಯುವ ನೀರು ವ್ಯತ್ಯಯ Previous post shimoga | ಶಿವಮೊಗ್ಗ : ಅಕ್ಟೋಬರ್ 11 ರಂದು ನಗರದ ವಿವಿಧೆಡೆ ಕುಡಿಯುವ ನೀರು ವ್ಯತ್ಯಯ
Shivamogga: Suspicious group roaming around Vidyanagar at night – locals? Outsiders? ಶಿವಮೊಗ್ಗ : ವಿದ್ಯಾನಗರದಲ್ಲಿ ರಾತ್ರಿ ವೇಳೆ ಅನುಮಾನಾಸ್ಪದ ಗುಂಪಿನ ಸಂಚಾರ – ಸ್ಥಳೀಯರೇ? ಹೊರಗಿನವರೇ? Next post shimoga | ಶಿವಮೊಗ್ಗ : ವಿದ್ಯಾನಗರದಲ್ಲಿ ರಾತ್ರಿ ವೇಳೆ ಅನುಮಾನಾಸ್ಪದ ಗುಂಪಿನ ಸಂಚಾರ – ಸ್ಥಳೀಯರೇ? ಹೊರಗಿನವರೇ?