ಶಿವಮೊಗ್ಗ (shivamogga), ಜನವರಿ 08: ಪೊಲೀಸ್ ಹೆಡ್ ಕಾನ್ಸ್’ಟೇಬಲ್ ಓರ್ವರು ಪೊಲೀಸ್ ಠಾಣೆಯಲ್ಲಿಯೇ ನೇಣು ಬಿಗಿದುಕೊಂಡು ಆ*ತ್ಮಹ*ತ್ಯೆಗೆ ಶರಣಾದ ಘಟನೆ, ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಠಾಣೆಯಲ್ಲಿ ತಡರಾತ್ರಿ ನಡೆದಿದೆ.
ಜಕ್ರಿಯಾ (53) ಆ*ತ್ಮಹ*ತ್ಯೆಗೆ ಶರಣಾದ ಪೊಲೀಸ್ ಸಿಬ್ಬಂದಿ ಎಂದು ಗುರುತಿಸಲಾಗಿದೆ. ಇವರು ಆರ್.ಎಂ.ಎಲ್ ನಗರದ ನಿವಾಸಿಯಾಗಿದ್ದಾರೆ. ಪತ್ನಿ, ಇಬ್ಬರು ಪುತ್ರಿಯರು, ಓರ್ವರ ಪುತ್ರನಿದ್ದಾನೆ.
ರಾತ್ರಿ ಪಾಳೀಯ ಕರ್ತವ್ಯದಲ್ಲಿದ್ದ ಜಕ್ರಿಯಾ, ಸಹೋದ್ಯೋಗಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಮುಂಜಾನೆ 4 ಗಂಟೆ ಸರಿಸುಮಾರಿಗೆ ಸಹೋದ್ಯೋಗಿಯು ಶೌಚಾಲಯಕ್ಕೆಂದು ತೆರಳಿದ ವೇಳೆ, ಜಕ್ರಿಯಾ ಆ*ತ್ಮಹ*ತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.
ಜಕ್ರಿಯಾ ಡೆತ್ ನೋಟ್ ಬರೆದಿಟ್ಟಿದ್ದು, ಸಹ ಪೊಲೀಸ್ ಪೇದೆಯೋರ್ವರೊಂದಿಗಿನ ಮನಸ್ತಾಪದ ಕಾರಣದಿಂದ ಆ*ತ್ಮಹ*ತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ ಎಂದು ತಿಳಿದುಬಂದಿದ್ದು, ಸ್ಪಷ್ಟ ಕಾರಣಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಶವವನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.
Shimoga, January 08: A police head constable committed su*ici*de by hanging himself inside the police station. The incident took place late at night at the Shimoga City West Traffic Police Station.

