ಶಿವಮೊಗ್ಗ (shivamogga), ಜನವರಿ 13: ಇತ್ತೀಚೆಗೆ ಸೈಬರ್ ಅಪರಾಧ ಚಟುವಟಿಕೆಗಳು ಮಿತಿಮೀರಿವೆ. ಈ ನಡುವೆ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರ ಫೋಟೋ ಹಾಗೂ ಹೆಸರು ಬಳಸಿಕೊಂಡು, ವಾಟ್ಸಾಪ್ ಸಂದೇಶದ ಮೂಲಕ ಸೈಬರ್ ವಂಚಕರು ಸಾರ್ವಜನಿಕರು ಹಾಗೂ ಅಧಿಕಾರಿಗಳಿಗೆ ಸಂದೇಶ ಕಳುಹಿಸಿ ವಂಚಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ!
ವಿದೇಶಿ ಮೊಬೈಲ್ ಸಂಖ್ಯೆಯ ಮೂಲಕ ವಾಟ್ಸಾಪ್ ಸಂದೇಶಗಳನ್ನು ಸೈಬರ್ ವಂಚಕರು ಕಳುಹಿಸುತ್ತಿದ್ದಾರೆ. ಸದರಿ ವಾಟ್ಸಾಪ್ ನಲ್ಲಿ ಡಿಸಿ ಪ್ರಭುಲಿಂಗ ಕವಳಿಕಟ್ಟಿ ಅವರ ಪೋಟೋ ಹಾಗೂ ಹೆಸರನ್ನು ಬಳಕೆ ಮಾಡಲಾಗಿದೆ. ಹಣಕ್ಕೆ ಹಾಗೂ ಸಹಾಯಕ್ಕೆ ಬೇಡಿಕೆಯಿಡುತ್ತಿದ್ದಾರೆ.
ತಮ್ಮ ಹೆಸರಿನಲ್ಲಿ ಬರುತ್ತಿರುವ ಸಂದೇಶಗಳು ಸಂಪೂರ್ಣ ನಕಲಿಯಾಗಿವೆ. ಸೈಬರ್ ವಂಚಕರ ಕೃತ್ಯಗಳಾಗಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಇಲಾಖೆಯ ಅಧಿಕಾರಿಗಳು ನಕಲಿ ವಾಟ್ಸಾಪ್ ಸಂದೇಶಕ್ಕೆ ಪ್ರತಿಕ್ರಿಯೆ ನೀಡಬಾರದು. ಹಣಕ್ಕೆ ಬೇಡಿಕೆ, ಸಹಾಯ ಕೋರಿದ ಸಂದೇಶಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಂದರೆ ನಿರ್ಲಕ್ಷ್ಯಿಸುವಂತೆ ಹಾಗೂ ಸದರಿ ಸಂಖ್ಯೆಯನ್ನು ಬ್ಲಾಕ್ ಮಾಡುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
Cyber Fraudsters’ Heinous Act: Fake WhatsApp Messages Using Shimoga DC’s Photo and Name! | Shimoga, January 13: Cybercrime activities have recently been on the rise. In this context, fraudsters have been found misusing the photo and name of Shimoga Deputy Commissioner Prabhuling Kavalikatti, sending fake WhatsApp messages to the public and officials in an attempt to deceive them.

