ಶಿವಮೊಗ್ಗ (shivamogga), ಜ.26: ಈ ದಿನ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕಾದ ದಿನ. ಇಂದು ವಿಶ್ವದ ಶ್ರೇಷ್ಠ ಸಂವಿಧಾನವು ಜಾರಿಗೆ ಬಂದ ಪವಿತ್ರ ದಿನವಾಗಿದ್ದು “ನಮ್ಮ ದೇಶ, ನಮ್ಮ ಸಂವಿಧಾನ ನಮ್ಮದೇ ಆಡಳಿತ” ಎಂದು ನಾವು ಸ್ವಾಭಿಮಾನದಿಂದ ಬದುಕಲು ಕಾರಣರಾದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಕೃತಜ್ಞತಾ ಪೂರ್ವಕ ನಮನಗಳು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರುತಿಳಿಸಿದ್ದಾರೆ.
ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವ ಸಂದೇಶ ನೀಡಿದರು.
ಈ ನಿಟ್ಟಿನಲ್ಲಿ ಸಂವಿಧಾನದ ಮಹತ್ವವನ್ನು ಅರಿತ ನಮ್ಮ ಸರ್ಕಾರವು ರಾಜ್ಯದ ಒಂದು ಕೋಟಿಗೂ ಹೆಚ್ಚು ಮಕ್ಕಳು ಪ್ರತಿದಿನ ಶಾಲೆಯಲ್ಲಿ ‘ಸಂವಿಧಾನದ ಪೀಠಿಕೆ’ಯನ್ನು ಓದುತ್ತಿದ್ದಾರೆ. ಎಳೆಯ ವಯಸ್ಸಿನಲ್ಲೇ ಮಕ್ಕಳಲ್ಲಿ ಸಂವಿಧಾನದ ಮೌಲ್ಯಗಳನ್ನು ಬೆಳಸುವುದು ನಮ್ಮ ಉದ್ದೇಶ ಹಾಗೂ ಇದು ಅವಶ್ಯಕತೆಯೂ ಹೌದು ಎಂದರು.
ಕರ್ನಾಟಕದ ಮತ್ತು ಭಾರತದ ಭೂಪಟದಲ್ಲಿ ಶಿವಮೊಗ್ಗಕ್ಕೆ ತನ್ನದೇ ಆದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವಿದ್ದು ರಾಷ್ಟ್ರಕವಿ ಕುವೆಂಪು ಅವರು ವಿಶ್ವಮಾನವ ಸಂದೇಶವನ್ನು ಸಾರಿದ್ದು ಇದೇ ಮಣ್ಣಿನಿಂದ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿಯವರು ಸಾಹಿತ್ಯ ಲೋಕದಲ್ಲಿ ಹೊಸ ‘ಅಲೆ ಎಬ್ಬಿಸಿದ್ದು ಇಲ್ಲಿಂದಲೇ. ಈ ನೆಲ ಕನ್ನಡವನ್ನು ಎತ್ತಿ ಹಿಡಿದ ಪುಣ್ಯಭೂಮಿ.
ಸಮಾಜವಾದಿ ಸಿದ್ಧಾಂತದ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸಿದ ದಿ. ಶಾಂತವೇರಿ ಗೋಪಾಲಗೌಡರಂತಹ ಮಹಾನ್ ಚೇತನರು ನಡೆದಾಡಿದ ನೆಲವಿದು. ಸಂವಿಧಾನದ ಬದ್ಧತೆ ಮತ್ತು ಸರ್ಕಾರದ ಧ್ಯೇಯವಾಗಿದ್ದು, ನಮ್ಮ ಸರ್ಕಾರವು ಸಂವಿಧಾನದ ಆಶಯಗಳಿಗೆ ಸಂಪೂರ್ಣವಾಗಿ ಬದ್ಧವಾಗಿದೆ.
“ಸರ್ವರಿಗೂ ಸಮಪಾಲು – ಸರ್ವರಿಗೂ ಸಮಬಾಳು” ಎಂಬ ತತ್ವವೇ ನಮ್ಮ ಆಡಳಿತದ ಮೂಲಮಂತ್ರ. ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ ಯೋಜನೆಗಳನ್ನು ಯಾವುದೇ ಮಧ್ಯವರ್ತಿಗಳು ಇಲ್ಲದೆ ನೇರವಾಗಿ ಫಲಾನುಭವಿಗಳಿಗೆ ದೊರೆಯುವಂತೆ ಮಾಡಿ, ನಮ್ಮ ಜಿಲ್ಲೆಗೆ 3024 ಕೋಟಿ ರೂಗಳನ್ನು ಹಾಗೂ ರಾಜ್ಯದಲ್ಲಿ 1.13 ಲಕ್ಷ ಕೋಟಿ (ಒಂದು ಲಕ್ಷ ಹದಿಮೂರು ಸಾವಿರ ಕೋಟಿ) ಹಣವನ್ನು ತಲುಪಿಸುವ ಮೂಲಕ ಪಾರದರ್ಶಕ ಆಡಳಿತಕ್ಕೆ ಹೊಸ ಅಧ್ಯಾಯ ಬರೆದು ರಾಜ್ಯದ ಜನರಿಗೆ ಆರ್ಥಿಕ ಶಕ್ತಿ ತುಂಬಿದೆ.
ಯೋಜನಾ ಆಯೋಗದ ಮೂಲಕ ರಾಜ್ಯದ ದೀರ್ಘಕಾಲೀನ ಬೆಳವಣಿಗೆಗೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಶಿಕ್ಷಣ, ಕೃಷಿ, ಆರೋಗ್ಯ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕವನ್ನು ದೇಶದ ನಂಬರ್ ಒನ್ ರಾಜ್ಯವನ್ನಾಗಿ ಮಾಡುವುದೇ ನಮ್ಮ ಸಂಕಲ್ಪ. ಜಿಲ್ಲೆಯಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗಿದ್ದು, ಮೆಗ್ಗಾನ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಕಿದ್ವಾಯಿ ಮಾದರಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ, ಹೈಟೆಕ್ ಶವಾಗಾರ, ಎಂ.ಸಿ.ಎ ಬ್ಲಾಕ್, ಕೇಂದ್ರ ಗ್ರಾಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಇಲ್ಲಿನ ಪರಿಶಿಷ್ಟಜಾತಿ/ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿನಿಲಯ ಕಟ್ಟಡ, ತುರ್ತು ನಿಗಾಘಟಕ ಕಟ್ಟಡದ ಕಾಮಗಾರಿಗಳು ಅನುಮೋದನೆಗೊಂಡಿರುತ್ತವೆ. ಹೊರ ರೋಗಿ ವಿಭಾಗ ಮತ್ತು ಡಾರ್ ಮೆಟ್ರಿ ಬ್ಲಾಕ್, ಟ್ರಮಾ ಸೆಂಟರ್ ನಿರ್ಮಾಣ ಕಾಮಗಾರಿಗಳು ಸರ್ಕಾರದ ಹಂತದಲ್ಲಿದ್ದು ಶೀಘ್ರವೇ ಅನುಮೊದನೆ ಪಡೆಯಲಾಗುವುದು.
ಆಸ್ಪತ್ರೆ, ಹೈಟೆಕ್ ಶವಾಗಾರ, ಎಂ.ಸಿ.ಎ ಬ್ಲಾಕ್, ಕೇಂದ್ರ ಗ್ರಾಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಇಲ್ಲಿನ ಪರಿಶಿಷ್ಟಜಾತಿ/ ಪರಿ ಶಿಷ್ಯ ಪಂಗಡಗಳ ವಿದ್ಯಾರ್ಥಿನಿಲಯ ಕಟ್ಟಡ, ತುರ್ತು ನಿಗಾಘಟಕ ಕಟ್ಟಡದ ಕಾಮಗಾರಿಗಳು ಅನುಮೋದನೆಗೊಂಡಿರುತ್ತವೆ. ಹೊರ ರೋಗಿ ವಿಭಾಗ ಮತ್ತು ಡಾರ್ ಮೆಟ್ರಿ ಬ್ಲಾಕ್, ಟ್ರಾಮಾ ಸೆಂಟರ್ ನಿರ್ಮಾಣ ಕಾಮಗಾರಿಗಳು ಸರ್ಕಾರದ ಹಂತದಲ್ಲಿದ್ದು ಶೀಘ್ರವೇ ಅನುಮೊದನೆ ಪಡೆಯಲಾಗುವುದು.
ಭೂಮಿ ಹಕ್ಕು: ದಶಕಗಳಿಂದ ಬಾಕಿ ಉಳಿದಿರುವ ಶರಾವತಿ ಮುಳುಗಡೆ ಸಂತ್ರಸ್ತರು ಹಾಗೂ ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ಇತ್ಯರ್ಥಕ್ಕೆ ನಾವು ವಿಶೇಷ ಆಸಕ್ತಿ ವಹಿಸಿದ್ದೇವೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಸಮೀಕ್ಷಾ ಕಾರ್ಯ ಮುಗಿದಿದ್ದು, ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಸಂತ್ರಸ್ತರಿಗೆ ಶಾಶ್ವತ ನ್ಯಾಯ ಒದಗಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ.
ಮೂಲ ಸೌಕರ್ಯಗಳ ಅಭಿವೃದ್ಧಿ: ಕುಡಿಯುವ ನೀರು, ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸಸೌಲಭ್ಯ ಸೇರಿದಂತೆ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮಾನ್ಯ ಮುಖ್ಯ ಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿಗೆ ನಮ್ಮ ಜಿಲ್ಲೆಗೆ ರೂ.225 ಕೋಟಿಗಳ ಕಾಮಗಾರಿಗೆ ಅನುಮೋದನೆ ನೀಡಿ, ಟೆಂಡರ್ ಕರೆಯಲಾಗಿರುತ್ತದೆ.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡಗಳ ಅಭಿವೃದ್ಧಿಗೆ “ಮಹಾತ್ಮಾ ಗಾಂಧೀ ನಗರ ವಿಕಾಸ ಯೋಜನೆ ಹಂತ-2″ ಅಡಿಯಲ್ಲಿ 127.50 ಕೋಟಿಗಳ ಕಾಮಗಾರಿಗೆ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ. ಪಶುಸಂಗೋಪನೆ ಇಲಾಖೆ ವತಿಯಿಂದ ಶಿವಮೊಗ್ಗ ಜಿಲ್ಲೆಗೆ 05 ಪಶುಆಸ್ಪತ್ರೆಗಳನ್ನು ನಿರ್ಮಾಣ ಮಾಡಲು ಆನುಮೋದನೆ ನೀಡಲಾಗಿದೆ.
ನನ್ನ ಪೂಜ್ಯ ತಂದೆಯವತು ಹಾಗೂ ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪನವರ ಸ್ಮಾರಕ ಸ್ಥಳವಾದ ‘ಬಂಗಾರಧಾಮ’ವೂ ಸೇರಿದಂತೆ ಜಿಲ್ಲೆಯ 64 ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಿದ್ದು, ಸಮಗ್ರ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲಾಗಿದ ಎಂದು ಹೇಳಿದರು.
Republic Day – A Day Every Indian Should Be Proud Of: Minister Madhu Bangarappa | Shivamogga, Jan. 26: This is a day every Indian should feel proud of. Today marks the sacred day when the world’s finest Constitution came into force. It is because of the Constitution’s architect, Dr. B.R. Ambedkar, that we live with dignity under the principle of “Our country, our Constitution, our own governance.” With heartfelt gratitude, School Education and Literacy Minister and Shivamogga District In-charge Minister Madhu Bangarappa offered his respects. On Monday, at the Nehru Stadium in the city, he hoisted the national flag during the Republic Day celebrations and delivered the Republic Day message.

