ಶಿವಮೊಗ್ಗ (shivamogga), ಮಾರ್ಚ್ 05: ಗಾಂಜಾ ಮಾರಾಟ ಮಾಡುತ್ತಿದ್ದ ಅಡ್ಡೆಯೊಂದರ ಮೇಲೆ ಶಿವಮೊಗ್ಗದ ದೊಡ್ಡಪೇಟೆ ಠಾಣೆ ಪೊಲೀಸರು ದಾಳಿ ನಡೆಸಿದ ಘಟನೆ, ಇಲಿಯಾಜ್ ನಗರದ ಫಾತಿಮಾ ರಸ್ತೆಯ ಮೌಂಟ್ ಹೀರಾ ಶಾಲೆ ಸಮೀಪದ ತುಂಗಾ ಚಾನಲ್ ಬಳಿ ಮಾರ್ಚ್ 01 ರಂದು ನಡೆದಿದೆ.
ಈ ಕುರಿತಂತೆ ಪೊಲೀಸ್ ಇಲಾಖೆ ಮಾರ್ಚ್ 05 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಇಬ್ಬರು ಆರೋಪಿಗಳು ಸ್ಕೂಟಿಯಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಕುರಿತಂತೆ ಪೊಲೀಸರಿಗೆ ಖಚಿತ ವರ್ತಮಾನ ಲಭ್ಯವಾಗಿತ್ತು.
ಇದರ ಆಧಾರದ ಮೇಲೆ ಪಿಎಸ್ಐ ನಾರಾಯಣ ಮಧುಗಿರಿ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿತ್ತು. ಈ ವೇಳೆ 2 ಕೆಜಿ 66 ಗ್ರಾಂ ತೂಕದ ಒಣ ಗಾಂಜಾ, ಸ್ಕೂಟಿಯನ್ನು ವಶಕ್ಕೆ ಪಡೆದುಕೊಂಡಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಟ್ಟೆ ವ್ಯಾಪಾರಿ ಸವಾಯಿಪಾಳ್ಯದ ಶಾದಾಬ್ ಶಾದಿ ಮಹಲ್ ಸಮೀಪದ ನಿವಾಸಿ ಮೊಹಮ್ಮದ್ ಹಮ್ಮದ್ ಅಜರುದ್ದೀನ್ ಯಾನೆ ಅಜರ್ ಯಾನೆ ಪುಕು (28) ಎಂಬಾತನನ್ನು ಪೊಲೀಸರು ಬಂಧಿಸಿ, ಈತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದ ಮತ್ತೋರ್ವ ಆರೋಪಿ ವಾದಿಹುದಾ ಬಡಾವಣೆ ನಿವಾಸಿ ವಸೀಂ ಅಕ್ರಂ ಯಾನೆ ಸೈಲೆಂಟ್ ಯಾನೆ ಗೋಗೋ (24) ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಕ್ರಮಕೈಗೊಂಡಿದ್ದಾರೆ.
ಪ್ರಕರಣದ ಮುಖ್ಯ ಆರೋಪಿ ಮೊಹಮ್ಮದ್ ಹಮ್ಮದ್ ಅಜರುದ್ದೀನ್ ವಿರುದ್ದ ಈ ಹಿಂದೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 5 ಹಾಗೂ ತುಂಗಾನಗರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
Shivamogga: Police Raid on Ganja Den!
Shivamogga, March 05: A police raid was carried out by Doddapete Police Station on a den selling ganja near Tunga Channel, close to Mount Heera School on Fatima Road in Ilyaz Nagar, on March 01.
According to a press release issued by the police department on March 05, officers received reliable information that two accused were selling ganja while carrying it on a scooter. Based on this tip-off, a police team led by PSI Madhugiri conducted the raid. During the operation, they seized 2 kg 66 g of dry ganja along with the scooter.
In connection with the case, police arrested Mohammad Hammad Azharuddin alias Azar alias Puku (28), a cloth merchant residing near Shadab Shadi Mahal in Savaipalaya. He has been remanded to judicial custody. Another accused, Waseem Akram alias Silent alias Gogo (24), a resident of Wadi Huda Layout, has absconded. Police have initiated steps to arrest him. The press release also stated that the main accused, Mohammad Hammad Azharuddin, already has five cases registered at Doddapete Police Station and one case at Tunganagar Police Station.

