thirthahalli news | ತೀರ್ಥಹಳ್ಳಿ : ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿಗೆ ಭಾವಪೂರ್ಣ ಶ್ರದ್ಧಾಂಜಲಿ

Tirthahalli: Heartfelt tribute to police officer who died in accident ತೀರ್ಥಹಳ್ಳಿ : ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿಗೆ ಭಾವಪೂರ್ಣ ಶ್ರದ್ಧಾಂಜಲಿ

ತೀರ್ಥಹಳ್ಳಿ (thirthahalli), ಮಾರ್ಚ್ 16: ರಸ್ತೆ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿ ಸಚಿನ್ ವಿ (ಆರ್ ಎಸ್ ಐ) ಅವರ ಪಾರ್ಥಿವ ಶರೀರಕ್ಕೆ ಮಾರ್ಚ್ 16 ರಂದು ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಂತಿಮ ಗೌರವ ನಮನ ಸಲ್ಲಿಸಲಾಯಿತು.

ತೀರ್ಥಹಳ್ಳಿ ತಾಲೂಕಿನ ಕುಡುವಳ್ಳಿ ಗ್ರಾಮದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ ಸೇರಿದಂತೆ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳು ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಎಸ್ಪಿ ಅವರು ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಭೀಕರ ಅಪಘಾತ : 15-03-2026 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಅಧಿಕಾರಿಗಳಾದ ಅಮರೇಶ್ ಬಿ. (ಆರ್.ಎಸ್.ಐ), ಮಂಜುನಾಥ್ ದಾರಿಮನಿ (ಆರ್.ಎಸ್.ಐ) ಮತ್ತು ಶ್ರೀ ಸಚಿನ್ ವಿ. (ಆರ್.ಎಸ್.ಐ)  ರವರು ವಿಧಿವಶರಾಗಿದ್ದರು.

Tirthahalli: Heartfelt tribute to police officer who died in accident

Tirthahalli, March 16: On March 16, the District Police Department paid final respects to the mortal remains of Police Officer Sachin V. (RSI), who died in a road accident.

Arrangements were made at Kuduvalli village in Tirthahalli taluk for the final viewing of the mortal remains. District Defense Officer Nikhil B., along with police officers and staff, offered their final respects. On this occasion, the SP consoled the family members of the deceased.

Fatal accident: On 15-03-2026, in Chitradurga district, Karnataka State Police officers Amresh B. (RSI), Manjunath Darimani (RSI), and Shri Sachin V. (RSI) lost their lives in a road accident.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *