ದೆಹಲಿ (delhi), ಮಾರ್ಚ್ 17: ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ರೈಲ್ವೆ ಯೋಜನೆಗಳಿಗೆ ಅನುದಾನ ಹಾಗೂ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ಮಾರ್ಚ್ 16 ರಂದು ಲೋಕಸಭೆ ಕಲಾಪದಲ್ಲಿ ಶಿವಮೊಗ್ಗ ಕ್ಷೇತ್ರದ ಸಂಸದ ಬಿ ವೈ ರಾಘವೇಂದ್ರ ವಿಸ್ತೃತ ಚರ್ಚೆ ನಡೆಸಿ ಸರ್ಕಾರದ ಗಮನ ಸೆಳೆಯುವ ಕಾರ್ಯ ನಡೆಸಿದ್ದಾರೆ.
ಶಿವಮೊಗ್ಗವನ್ನು ರೈಲ್ವೆ ಸಂಪರ್ಕ ಕೇಂದ್ರವನ್ನಾಗಿ (Transit Hub) ಪರಿವರ್ತಿಸುವ ನಿಟ್ಟಿನಲ್ಲಿ, ಪ್ರಮುಖ ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಸದನದಲ್ಲಿ ಹಾಜರಿದ್ದ ರೈಲ್ವೆ ಸಚಿವರಿಗೆ ಒತ್ತಾಯಿಸಿದ್ದಾರೆ.
ಮಲೆನಾಡು ಹಾಗೂ ಉತ್ತರ ಕರ್ನಾಟಕ ಸಂಪರ್ಕಿಸುವ ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ರೈಲ್ವೆ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕು. ಶಿಕಾರಿಪುರದಿಂದ ರಾಣೆಬೆನ್ನೂರು ವರೆಗಿನ ಎರಡನೇ ಹಂತದ ಕಾಮಗಾರಿಗೆ ಕೂಡಲೇ ಟೆಂಡರ್ ಕರೆಯುವಂತೆ ಮನವಿ ಮಾಡಿದ್ದಾರೆ.
ಸದರಿ ಯೋಜನೆಯ ಸಾಕಾರಕ್ಕಾಗಿ ರಾಜ್ಯ ಸರ್ಕಾರದ ವತಿಯಿಂದ 50:50 ವೆಚ್ಚ ಹಂಚಿಕೆ ಹಾಗೂ ಭೂಸ್ವಾಧೀನ ಪ್ರಕ್ರಿಯೆಗೆ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕೊಡುಗೆಯನ್ನು ಸಂಸದರು ಇದೇ ವೇಳೆ ಸ್ಮರಿಸಿದ್ದಾರೆ.
ಶಿವಮೊಗ್ಗದ ಕೋಟೆಗಂಗೂರು ಕೋಚಿಂಗ್ ಟರ್ಮಿನಲ್‌ನ ಎರಡನೇ ಹಂತದ ಕಾಮಗಾರಿಗೆ ತಕ್ಷಣದ ಅನುಮೋದನೆ ನೀಡಬೇಕು. ಎರಡನೇ ಪೂರ್ಣ ಪ್ರಮಾಣದ ಪಿಟ್ ಲೈನ್ ಹಾಗೂ ಸ್ವಯಂಚಾಲಿತ ಕೋಚ್ ವಾಷಿಂಗ್ ಪ್ಲಾಂಟ್ ಸ್ಥಾಪಿಸಬೇಕು ಎಂದು ತಿಳಿಸಿದ್ದಾರೆ.
ಇವುಗಳ ಜೊತೆಗೆ ಶಿವಮೊಗ್ಗದಿಂದ ವಂದೇ ಭಾರತ್ ರೈಲುಗಳ ಕಾರ್ಯಾಚರಣೆ ಪ್ರಾರಂಭಿಸಲು ಈ ಟರ್ಮಿನಲ್ ಅಗತ್ಯವನ್ನು ಒತ್ತಿ ಹೇಳಿದ ಸಂಸದರು, ಇದರೊಂದಿಗೆ ಬೀರೂರು-ಶಿವಮೊಗ್ಗ ರೈಲ್ವೆ ಹಳಿ ಜೋಡಿ ಮಾರ್ಗ (Doubling) ಯೋಜನೆಗೆ ಕೂಡಲೇ ಆಡಳಿತಾತ್ಮಕ ಮಂಜೂರಾತಿ ನೀಡುವಂತೆ ಆಗ್ರಹಿಸಿದ್ದಾರೆ.
ಮಲೆನಾಡಿನ ಸಾಂಸ್ಕೃತಿಕ ಕೇಂದ್ರ, ಕುವೆಂಪು ಜನ್ಮಭೂಮಿ ತೀರ್ಥಹಳ್ಳಿಗೆ ರೈಲು ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಶಿವಮೊಗ್ಗ-ತೀರ್ಥಹಳ್ಳಿ-ಶೃಂಗೇರಿ-ಮಂಗಳೂರು ಹಾಗೂ ಶಿವಮೊಗ್ಗ-ತೀರ್ಥಹಳ್ಳಿ-ಶೃಂಗೇರಿ-ಚಿಕ್ಕಮಗಳೂರು ರೈಲು ಮಾರ್ಗದ ಸಮೀಕ್ಷೆಯನ್ನು ವೇಗಗೊಳಿಸಲು ಸಂಸದರು ವಿನಂತಿಸಿದ್ದಾರೆ.
ತಾಳಗುಪ್ಪ-ಸಿದ್ದಾಪುರ-ಶಿರಸಿ-ಹುಬ್ಬಳ್ಳಿ ಮಾರ್ಗವನ್ನು ಸೊರಬದ ಮೂಲಕವೇ ಹಾದುಹೋಗುವಂತೆ ಮಾಡುವ ಮೂಲಕ ಅರಣ್ಯ ನಾಶವನ್ನು ತಡೆಗಟ್ಟುವ ಮತ್ತು ಸೊರಬಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವ ಸಾರ್ವಜನಿಕರ0 ಬೇಡಿಕೆಯನ್ನು ಈಡೇರಿಸುವ ಮಹತ್ವಪೂರ್ಣ ಪ್ರಸ್ತಾಪವನ್ನು ಸಂಸದರು ಮುಂದಿಟ್ಟಿದ್ದಾರೆ.
ಇದರ ಜೊತೆಗೆ ಬೈಂದೂರಿಗೆ ಸಂಬಂಧಪಟ್ಟಂತೆ ಪ್ರಯಾಣಿಕರ ಅನುಕೂಲತೆ ಹೆಚ್ಚಿಸಲು ಮೂಕಾಂಬಿಕಾ ರಸ್ತೆ ಬೈಂದೂರು ರೈಲು ನಿಲ್ದಾಣದಲ್ಲಿ ಎರ್ನಾಕುಲಂ-ಪುಣೆ ಎಕ್ಸ್ ಪ್ರೆಸ್, ತಿರುವನಂತಪುರಂ-ನಿಜಾಮುದ್ದೀನ್ ಎಕ್ಸ್ ಪ್ರೆಸ್, ಕೊಚಿವೇಲಿ-ಹೃಷೀಕೇಶ್ ಎಕ್ಸ್ ಪ್ರೆಸ್, ಮಂಗಳ ಲಕ್ಷದ್ವೀಪ್ ಎಕ್ಸ್ ಪ್ರೆಸ್ – ಈ ನಾಲ್ಕು ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ಒದಗಿಸುವಂತ ರೈಲ್ವೆ ಸಚಿವರಿಗೆ ಸಂಸದ ಬಿ ವೈ ರಾಘವೇಂದ್ರ ಮನವಿ ಮಾಡಿದ್ದಾರೆ.
📰 Lok Sabha: MP B.Y. Raghavendra Raises Shivamogga Railway Projects
New Delhi, March 17: During the Lok Sabha session on March 16, Shivamogga MP B.Y. Raghavendra held an extensive discussion on railway projects concerning his constituency, drawing the government’s attention to the need for funding and speedy implementation. He emphasized transforming Shivamogga into a major railway transit hub and urged the Railway Minister present in the House to expedite key projects.
Key Highlights from His Address:
- Shivamogga–Shikaripura–Ranebennur Line: He pressed for early completion of this project, particularly calling for immediate tendering of the second phase between Shikaripura and Ranebennur. He also recalled the contribution of former CM B.S. Yediyurappa, who facilitated land acquisition and cost-sharing (50:50) with the state government.
- Koteganguru Coaching Terminal (Phase II): Raghavendra demanded swift approval for the second phase, including a full-scale pit line and an automatic coach washing plant, stressing its necessity for operating Vande Bharat trains from Shivamogga.
- Birur–Shivamogga Doubling Project: He urged immediate administrative clearance for this line to strengthen connectivity.
- Railway Survey for Malnad & Coastal Links: To connect cultural centers like Kuvempu’s birthplace Thirthahalli, he requested acceleration of surveys for routes:
- Shivamogga–Thirthahalli–Sringeri–Mangaluru
- Shivamogga–Thirthahalli–Sringeri–Chikkamagaluru
- Talaguppa–Siddapur–Sirsi–Hubballi Line: He proposed routing the line via Sorab to prevent forest destruction and simultaneously fulfill public demand for Sorab’s railway connectivity.
- Byndoor Passenger Facilities: He appealed for halts at Mookambika Road Byndoor station for four express trains:
- Ernakulam–Pune Express
- Thiruvananthapuram–Nizamuddin Express
- Kochuveli–Rishikesh Express
- Mangal Lakshadweep Express

