shimoga job fair | ಶಿವಮೊಗ್ಗ : ಏಪ್ರಿಲ್ 28 ರಂದು ಉದ್ಯೋಗ ಮೇಳ

Shivamogga : Job fair on April 28 ಶಿವಮೊಗ್ಗ : ಏಪ್ರಿಲ್ 28 ರಂದು ಉದ್ಯೋಗ ಮೇಳ

ಶಿವಮೊಗ್ಗ (shivamogga), ಏಪ್ರಿಲ್ 24: ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಏಪ್ರಿಲ್ 28 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ಉದ್ಯೋಗ ಮೇಳದಲ್ಲಿ ಆದಿಶಕ್ತಿ ಕಾರ‍್ಸ್ ಪ್ರೈ.ಲಿ., ನೆಕ್ಸ್ಚೆರ್ ಬಿಸಿನೆಸ್ ಸೆಲೂಷನ್ಸ್ ಪ್ರೈ.ಲಿ., ಕರಾವಳಿ ಟೀ‍ಚರ್ಸ್, ಸ್ವಮಾನ್ ಫೈನಾನ್ಸ್ ಪ್ರೈ.ಲಿ., ಮತ್ತು ಎಲ್ & ಟಿ ಫೈನಾನ್ಸ್ ಕಂಪನಿಗಳು ಭಾಗವಹಿಸಲಿವೆ. ತಮ್ಮಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಮತ್ತು ಯಾವುದೇ ಡಿಗ್ರಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಬಯೋಡೆಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು. ಉಚಿತ ಪ್ರವೇಶ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, 2ನೇ ಕ್ರಾಸ್, ಪಂಪನಗರ, ಸಾಗರ ರಸ್ತೆ, ಶಿವಮೊಗ್ಗ ಇವರನ್ನು ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆ 9380663606/ 9108235132 ಗಳನ್ನು ಸಂಪರ್ಕಿಸುವಂತೆ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Shivamogga : Job fair on April 28

Shivamogga, April 24: A job fair has been organized by the Shivamogga District Employment Exchange Office on April 28 at 10 am at the District Employment Exchange Office.

Companies like Adishakti Cars Pvt. Ltd., Nextcare Business Solutions Pvt. Ltd., Karavali Teachers, Swaman Finance Pvt. Ltd., and L&T Finance will participate in the job fair. Candidates will be selected through direct interviews for the vacant posts.

Candidates between the ages of 18 to 35 who have passed SSLC, PUC, ITI, Diploma and any degree can participate in the interview with biodata and Aadhaar card copy. There will be free admission.

For more information, the employment officers have asked to contact the District Employment Exchange Office, Guthyappa Colony, 2nd Cross, Pampanagar, Sagar Road, Shivamogga in person or on mobile numbers 9380663606/ 9108235132.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *