ಭದ್ರಾವತಿ (bhadravati), ಏಪ್ರಿಲ್ 26: ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಬೈಪಾಸ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡತ್ತಿದ್ದ ಆರೋಪದ ಮೇರೆಗೆ, ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಏಪ್ರಿಲ್ 24 ರಂದು ನಡೆದಿದೆ.
ಲವ (24), ಲೇಖಕ್ (20), ಮನೋಜ (27), ಕಿರಣ್ (24) ಹಾಗೂ ಗಿರೀಶ್ (28) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇವರಿಂದ 2.34 ಲಕ್ಷ ರೂ. ಮೌಲ್ಯದ 4 ಕೆಜಿ 690 ಗ್ರಾಂ ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವೊಂದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳು ಹೊಳೆಹೊನ್ನೂರು ಕಡೆಯಿಂದ ಶಿವಮೊಗ್ಗದೆಡೆಗೆ ತೆರಳುವ ರಾಷ್ಟ್ರೀಯ ಹೆದ್ದಾರಿ 369 ರ ಬೈಪಾಸ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು. ಖಚಿತ ವರ್ತಮಾನದ ಮೇರೆಗೆ ಇನ್ಸ್’ಪೆಕ್ಟರ್ ಶಿವಪ್ರಸಾದ್ ಎಂ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಸಫಲವಾಗಿದೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Ganja sale on the bypass road near Holehonnur: 5 people arrested!
Bhadravati, April 26: The police arrested five accused on the charge of selling ganja on the bypass road near Holehonnur in Bhadravati taluk on April 24.
The arrested accused have been identified as Lav (24), Raksha (20), Manoj (27), Kiran (24) and Girish (28). From them, the police have seized 4 kg 690 grams of ganja worth Rs 2.34 lakh and a two-wheeler used for the crime.
The accused were selling ganja on the bypass road of National Highway 369 leading from Holehonnur to Shivamogga. Based on the confirmed information, a police team led by Inspector Shivaprasad M conducted an operation and succeeded in arresting the accused. A case has been registered at Holehonnur police station in this regard.

