shimoga news | ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೇಸಿಗೆ ಶಿಬಿರ ಸಹಕಾರಿ

shimoga news | ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೇಸಿಗೆ ಶಿಬಿರ ಸಹಕಾರಿ

ಶಿವಮೊಗ್ಗ (shivamogga), may 08: ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಬೇಸಿಗೆ ಶಿಬಿರವು ಅತ್ಯಂತ ಸಹಕಾರಿಯಾಗುತ್ತದೆ ಎಂದು ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆಯ 2026ನೇ ಸಾಲಿನ ಅಧ್ಯಕ್ಷೆ ವಿಜಯಲಕ್ಷ್ಮೀ ಹೇಳಿದರು.

“ದಾನ್ 2026” ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಯಕ್ಷಗಾನದ ಅರಿವು ಮತ್ತು ಕಲಿಕೆ, ಯೋಗಾಭ್ಯಾಸ, ನೃತ್ಯ, ನೈತಿಕ ಕಥೆಗಳು ಹಾಗೂ ವಿವಿಧ ಆಟೋಟ ಸ್ಪರ್ಧೆಗಳ ಮೂಲಕ ಮಕ್ಕಳಲ್ಲಿ ಹೊಸ ಚೈತನ್ಯವನ್ನು ಮೂಡಿಸಿದೆ ಎಂದು ತಿಳಿಸಿದರು.

ವಿಶೇಷವಾಗಿ ಶಿಬಿರದಲ್ಲಿ ಪಾಲ್ಗೊಂಡ ಜೂನಿಯರ್ ಜೆಸಿ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಧನ್ಯವಾದಗಳು. ಮಕ್ಕಳ ಮುಖದ ಮೇಲಿನ ನಗು ಹಾಗೂ ಅವರು ಕಲಿತ ಹೊಸ ವಿದ್ಯೆಗಳೇ ಈ ಕಾರ್ಯಕ್ರಮದ ನಿಜವಾದ ಯಶಸ್ಸು ಎಂದರು.

ಶಿಬಿರದ ಸಮಾರೋಪ ಸಮಾರಂಭ “ದಾನ್ 2026” ಹಬ್ಬದಂತೆ ಯಶಸ್ವಿಯಾಗಿ ಜರುಗಿತು. ಶಿಬಿರದ ಮಕ್ಕಳಿಗೆ ರುಚಿಕರವಾದ ಲಘು ಉಪಹಾರವನ್ನು ಹೋಟೆಲ್ ಶುಭಂನ ಉದಯ್ ಕಡಂಬ, ಚಂದ್ರಹಾಸ ಕಡಂಬ ಒದಗಿಸಿದ್ದರು. ಸ್ಟೈಲ್ ಡ್ಯಾನ್ಸ್ ಅಕಾಡೆಮಿಯ ಶಶಿ ಕಾರ್ಯಕ್ರಮಕ್ಕೆ ಸುಸಜ್ಜಿತ ವೇದಿಕೆ ಕಲ್ಪಿಸಿಕೊಟ್ಟು, ಅಕಾಡೆಮಿಯ ಪ್ರತಿಯೊಬ್ಬ ಸದಸ್ಯರ ಸಹಕಾರದೊಂದಿಗೆ ಶಿಬಿರದ ಯಶಸ್ಸಿಗೆ ಶ್ರಮಿಸಿದರು.

ಕಾರ್ಯಕ್ರಮದ ರೂವಾರಿಗಳಾದ ಕಾರ್ಯದರ್ಶಿ ಶ್ವೇತಾ ಸಚಿನ್, ಸುಚಿತಾ ಪ್ರವೀಣ್ ಹಾಗೂ ಸಂಸ್ಥೆಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *