NEET exam news | ನೀಟ್ ಪರೀಕ್ಷೆ ರದ್ದು : ಕೇಂದ್ರದ ವಿರುದ್ದ ಸಚಿವ ಮಧು ಬಂಗಾರಪ್ಪ ಆಕ್ರೋಶ!

NEET-UG exam cancellation: Minister Madhu Bangarappa outraged against the Center!ನೀಟ್ - ಯುಜಿ ಪರೀಕ್ಷೆ ರದ್ದು : ಕೇಂದ್ರದ ವಿರುದ್ದ ಸಚಿವ ಮಧು ಬಂಗಾರಪ್ಪ ಆಕ್ರೋಶ!

ಬೆಂಗಳೂರು (bangalore), ಮೇ 12: ಪ್ರಶ್ನೆಪತ್ರಿಕೆ ಬಹಿರಂಗ ಹಾಗೂ ಅಕ್ರಮದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೀಟ್- ಯುಜಿ 2026 ಪರೀಕ್ಷೆಯನ್ನು ರದ್ದುಗೊಳಿಸಿ, ಮರುಪರೀಕ್ಷೆಗೆ ಆದೇಶಿಸಿದೆ. ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಸೂಚಿಸಿದೆ. ಇದು ತೀವ್ರ ಕಳವಳಕಾರಿ ಸಂಗತಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರೀಕ್ಷಾ ವ್ಯವಸ್ಥೆಯು ಪದೇ ಪದೇ ಹಳ್ಳ ಹಿಡಿಯುತ್ತಿರುವುದು ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವರ್ಷಗಟ್ಟಲೆ ಹಗಲಿರುಳು ಶ್ರಮಪಟ್ಟು ಪರೀಕ್ಷೆ ಬರೆದಿದ್ದ ಲಕ್ಷಾಂತರ ಮಕ್ಕಳ ಮೇಲೆ ಈ ದಿಢೀರ್ ‘ಮರುಪರೀಕ್ಷೆ’ಯ ನಿರ್ಧಾರವು ಗದಾಪ್ರಹಾರದಂತಿದೆ ಎಂದು ಹೇಳಿರುವ ಅವರು,

“ನಾವು ಶಾಲಾ ಮಟ್ಟದಲ್ಲಿ ಮಕ್ಕಳ ಶೈಕ್ಷಣಿಕ ಹಾಗೂ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಆದರೆ, ಕೇಂದ್ರ ಸರ್ಕಾರದ ಇಂತಹ ಬೇಜವಾಬ್ದಾರಿಯುತ ನಿರ್ಧಾರಗಳು ಮಕ್ಕಳನ್ನು ಮತ್ತು ಪೋಷಕರನ್ನು ಹತಾಶೆಯ ಕೂಪಕ್ಕೆ ತಳ್ಳುತ್ತಿವೆ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಆದ್ಯತೆಗಳ ಕುರಿತು ತೀವ್ರ ಅಸಮಾಧಾನ ಹೊರಹಾಕಿದ ಸಚಿವರು, “ದೇಶದ ಜನರಿಗೆ ಮನೆಯಿಂದಲೇ ಕೆಲಸ ಮಾಡಿ (Work from Home) ಅಥವಾ ಸಾರ್ವಜನಿಕ ಸಾರಿಗೆ ಬಳಸಿ ಇಂಧನ ಉಳಿಸಿ ಎಂದು ದೊಡ್ಡ ದೊಡ್ಡ ಬುದ್ಧಿಮಾತುಗಳನ್ನು ಹೇಳುವ ಕೇಂದ್ರ ಸರ್ಕಾರಕ್ಕೆ, ಮೊದಲು ತನ್ನ ಮೂಲ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವೇ? ದೇಶದ ಜನರಿಗೆ ಜೀವನಶೈಲಿಯ ಪಾಠ ಮಾಡುವ ಮೊದಲು, ಕನಿಷ್ಠ ಒಂದು ನೀಟ್ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ನಡೆಸುವ ಪ್ರಾಥಮಿಕ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ತೋರಲಿ,” ಎಂದು ಅವರು ಹೇಳಿದರು.

ಈ ಗಂಭೀರ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರ ಮೌನವನ್ನೂ ಅವರು ಇದೇ ವೇಳೆ ಕಟುವಾಗಿ ಟೀಕಿಸಿದ್ದಾರೆ.

“ರಾಜ್ಯದಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ರಾಷ್ಟ್ರೀಯ ಹಿತಾಸಕ್ತಿಯ ಬಗ್ಗೆ ಭಾಷಣ ಮಾಡುವ ಸ್ಥಳೀಯ ಬಿಜೆಪಿ ನಾಯಕರು, ಕೇಂದ್ರದ ಈ ಬೃಹತ್ ವೈಫಲ್ಯದ ಬಗ್ಗೆ ಈಗೇಕೆ ದನಿ ಎತ್ತುತ್ತಿಲ್ಲ? ಪ್ರಶ್ನೆಪತ್ರಿಕೆ ಸೋರಿಕೆಯಂತಹ ಹಗರಣಗಳು ಪದೇ ಪದೇ ಸರಣಿಯಂತೆ ನಡೆಯುತ್ತಿದ್ದರೂ, ಕೇಂದ್ರದ ಮೇಲೆ ಒತ್ತಡ ತರುವಲ್ಲಿ ಸ್ಥಳೀಯ ಬಿಜೆಪಿ ನಾಯಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇದು ಕೇವಲ ಒಂದು ಪರೀಕ್ಷೆಯ ವಿಚಾರವಲ್ಲ, ಬದಲಾಗಿ ರಾಜ್ಯದ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಾಗಿದೆ,” ಎಂದು ಅವರು ಗುಡುಗಿದ್ದಾರೆ.

“ಕೇಂದ್ರ ಸರ್ಕಾರವು ಕೇವಲ ಸಿಬಿಐ ತನಿಖೆಗೆ ಆದೇಶಿಸಿ ಕೈತೊಳೆದುಕೊಂಡರೆ ಸಾಲದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಭದ್ರವಾದ ಹಾಗೂ ಪಾರದರ್ಶಕವಾದ ಪರೀಕ್ಷಾ ವ್ಯವಸ್ಥೆಯೊಂದನ್ನು ರೂಪಿಸಬೇಕು. ಇಲ್ಲವಾದರೆ ಇಡೀ ಪರೀಕ್ಷಾ ಪದ್ಧತಿಯ ಮೇಲೆಯೇ ಜನಸಾಮಾನ್ಯರಿಗೆ ಇರುವ ನಂಬಿಕೆ ಸಂಪೂರ್ಣವಾಗಿ ನಾಶವಾಗಲಿದೆ” ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

NEET-UG exam cancellation: Minister Madhu Bangarappa outraged against the Center!

Bengaluru, May 12: The Central Government has canceled the NEET-UG 2026 exam and ordered a re-examination in the wake of question paper disclosure and irregularities. The CBI has been asked to investigate the irregularities. This is a matter of grave concern, School Education and Literacy Minister S. Madhu Bangarappa has expressed his anger.

He has launched a strong attack on the Central Government, saying that the repeated cheating of the examination system is having a serious impact on the mental state of the students.

He said that this sudden ‘re-examination’ decision is like a blow to lakhs of children who have written the exam day and night for years.

“We are constantly trying to reduce the academic and mental stress of children at the school level. However, such irresponsible decisions of the Central Government are pushing children and parents into a pit of despair,” he expressed his sadness.

Expressing deep dissatisfaction over the priorities of the central government, the minister said, “Isn’t the central government, which keeps giving big advice to the people of the country like working from home or using public transport to save fuel, first able to properly perform its basic duties? Before teaching the people of the country a lesson in lifestyle, the central government should show primary responsibility by conducting at least one NEET exam without question paper leaks,” he said.

He also harshly criticized the silence of the state BJP leaders on this serious issue.

“Why are the local BJP leaders, who make speeches about national interest even on small issues in the state, not raising their voices about this huge failure of the center? Despite the repeated series of scandals like question paper leaks, the local BJP leaders have completely failed to put pressure on the center. This is not just a matter of an exam, but a question of the future of thousands of talented students of the state,” he thundered.

“The central government should not just order a CBI investigation and wash its hands of the matter. It should create a robust and transparent examination system to prevent such incidents from recurring in the future. Otherwise, the public’s trust in the entire examination system will be completely destroyed,” the minister warned.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *