ಬೆಂಗಳೂರು, ಮೇ 28: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಷಯ ಕ್ಲೈಮಾಕ್ಸ್ ಹಂತಕ್ಕೆ ತಲುಪಿದೆ. ಸಿಎಂ ಹುದ್ದೆಗೆ ಸಿದ್ದರಾಮಯ್ಯ ರಾಜೀನಾಮೆ ನಿಶ್ಚಿತವಾಗಿದೆ. ಡಿಸಿಎಂ ಡಿ ಕೆ ಶಿವಕುಮಾರ್ ಸಿಎಂ ಗದ್ದುಗೆಯೇರುವುದು ಖಚಿತವಾಗಿದೆ.
ಸಿಎಂ ಸಿದ್ದರಾಮಯ್ಯರವರು ಸಚಿವರಿಗೆ ಆಯೋಜಿಸಿದ್ದ ಉಪಹಾರ ಕೂಟವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಸಚಿವರುಗಳು ಮಾತನಾಡುವ ವೇಳೆ, ಸಿದ್ದರಾಮಯ್ಯ ಭಾವುಕರಾಗಿದ್ದಾರೆ.
‘ರಾಹುಲ್ ಗಾಂಧಿ ಸಲಹೆಯಂತೆ ಪದತ್ಯಾಗ ಮಾಡುತ್ತಿರುವ. ಡಿ ಕೆ ಶಿವಕುಮಾರ್ ಮುಂದಿನ ಸಿಎಂ ಆಗಲಿದ್ದಾರೆ’ ಎಂಬ ವಿಷಯವನ್ನು ಸಭೆಯಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜೀನಾಮೆ : ಮಧ್ಯಾಹ್ನ 2.30 ಕ್ಕೆ ರಾಜಭವನಕ್ಕೆ ತೆರಳಲಿರುವ ಸಿದ್ದರಾಮಯ್ಯ ಸಿಎಂ ಹುದ್ದೆಗೆ ಅದಿಕೃತವಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ. 3 ಗಂಟೆಗೆ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ.
ಹೆಚ್ ಕೆ ಪಾಟೀಲ್ ಹೇಳಿಕೆ : ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಮಾತನಾಡಿ, ಡಿ ಕೆ ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
D.K. Shivakumar to be the next CM: Siddaramaiah moved to tears in meeting!
Bengaluru, May 28: The issue of change in the Chief Minister’s post has reached its climax. It is certain that Siddaramaiah will resign from the CM position. Deputy CM D.K. Shivakumar is confirmed to ascend to the Chief Minister’s chair.
The farewell breakfast meeting organized by Siddaramaiah for ministers turned into an emotional moment. While ministers were speaking, Siddaramaiah became emotional.
He stated in the meeting: “As per Rahul Gandhi’s advice, I am resigning. D.K. Shivakumar will be the next Chief Minister.”
Resignation: At 2:30 PM, Siddaramaiah will go to Raj Bhavan to officially submit his resignation from the CM post. At 3 PM, he will address a press conference at his office, Krishna.
H.K. Patil’s statement: Parliamentary Affairs Minister H.K. Patil said that D.K. Shivakumar will be the next Chief Minister.

