ದೆಹಲಿ (delhi), ಜೂನ್ 07: ಸಾಮಾನ್ಯ ಜನರಿಗೆ ಇಂಧನ ಕಂಪನಿಗಳು ಮತ್ತೊಂದು ಶಾಕ್ ನೀಡಿವೆ. ದೇಶಾದ್ಯಂತ 14.2 ಕೆಜಿ ತೂಕದ ಗೃಹಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯಲ್ಲಿ 29 ರೂ. ಏರಿಕೆ ಮಾಡಿವೆ. ಪರಿಷ್ಕೃತ ದರಗಳು ಜೂನ್ 7 ರಿಂದಲೇ ಜಾರಿಗೆ ಬಂದಿವೆ.
ಕಳೆದ ಮೂರು ತಿಂಗಳ ಅವಧಿಯಲ್ಲಿ ಇಂಧನ ಕಂಪನಿಗಳು ಸಿಲಿಂಡರ್ ದರ ಹೆಚ್ಚಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ ಮಾರ್ಚ್ ತಿಂಗಳ ಆರಂಭದಲ್ಲಿ ಸಿಲಿಂಡರ್ ದರವನ್ನು 60 ರೂ. ಹೆಚ್ಚಿಸಲಾಗಿತ್ತು.
ಇಂದಿನ ದರ ಏರಿಕೆಯ ಬಳಿಕ ದೇಶದ ಪ್ರಮುಖ ನಗರಗಳಲ್ಲಿ 14.2 ಕೆಜಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಈ ಮುಂದಿನಂತಿದೆ. ದೆಹಲಿ: 913 ರೂ. ಇದ್ದ ಸಿಲಿಂಡರ್ ಬೆಲೆ ಈಗ 942 ರೂ.ಗೆ ತಲುಪಿದೆ.
ಮುಂಬೈ: ಹಳೆಯ ದರ 912.5 ರೂ. ಇತ್ತು, ಇಂದಿನಿಂದ 941.5 ರೂ. ಆಗಿದೆ. ಚೆನ್ನೈ: 928.5 ರೂ.ಗಳಿಂದ ನೇರವಾಗಿ 957.5 ರೂ.ಗೆ ಏರಿಕೆಯಾಗಿದೆ. ಕೋಲ್ಕತಾ: 939 ರೂ.ಗಳಿದ್ದ ದರವು ಈಗ 968 ರೂ.ಗೆ ಹೆಚ್ಚಳ ಕಂಡಿದೆ.
ವಾಣಿಜ್ಯ ಸಿಲಿಂಡರ್ : ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಬಳಸುವ 19 ಕೆಜಿ ವಾಣಿಜ್ಯ (Commercial) ಸಿಲಿಂಡರ್ ಬೆಲೆಯನ್ನು ಸಹ ಇತ್ತೀಚೆಗಷ್ಟೆ 42 ರೂ. ಹೆಚ್ಚಿಸಲಾಗಿತ್ತು. ಇದರಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ದರ 3,100 ರೂ.ಗಳ ಗಡಿ ದಾಟಿದೆ.
ಕಾರಣವೇನು? : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅನಿಲದ ಪೂರೈಕೆ ವೆಚ್ಚ ದುಬಾರಿಯಾಗಿರುವುದು ಹಾಗೂ ಸೌದಿ ಕಾಂಟ್ರಾಕ್ಟ್ ಪ್ರೈಸ್ (Saudi CP) ಶೇಕಡಾ 50 ರಷ್ಟು ಹೆಚ್ಚಾಗಿರುವುದೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ.
Domestic gas cylinder price hiked by Rs 29! | delhi, June 07: Energy companies have given another shock to the common man. They have increased the price of a 14.2 kg domestic LPG cylinder across the country by Rs 29. The revised rates have come into effect from June 7 itself.

