ಭದ್ರಾವತಿ (bhadravathi), ಜೂನ್ 14: ಜಲ ಜೀವನ್ ಮಿಷನ್ ಯೋಜನೆಯ ಕುಡಿಯುವ ನೀರು ಪೈಪ್ ಕಳ್ಳತನ ಮಾಡಿದ್ದ ಆರೋಪದ ಮೇರೆಗೆ, ಓರ್ವನನ್ನು ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸಿದ ಘಟನೆ ಜೂನ್ 13 ರಂದು ನಡೆದಿದೆ.
ಭದ್ರಾವತಿ ತಾಲೂಕು ನಾಗತಿಬೆಳಗಲು ಗ್ರಾಮದ ನಿವಾಸಿ ರಾಕೇಶ್ (30) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ 7.92 ಲಕ್ಷ ರೂ. ಮೌಲ್ಯದ 18 ಬಂಡಲ್ ಪೈಪ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಡಿವೈಎಸ್ಪಿ ಪ್ರಕಾಶ್ ರಾಥೋಡ್ ಮಾರ್ಗದರ್ಶನದಲ್ಲಿ ಇನ್ಸ್’ಪೆಕ್ಟರ್ ಶಿವಪ್ರಸಾದ್ ಎಂ ನೇತೃತ್ವದಲ್ಲಿ ಹೆಡ್ ಕಾನ್ಸ್’ಟೆಬಲ್ ಗಳಾದ ಅಣ್ಣಪ್ಪ, ಪ್ರಸನ್ನ, ಪ್ರಕಾಶ್ ನಾಯ್ಕ್, ಕಾನ್ಸ್’ಟೇಬಲ್ ಗಳಾದ ದೊಡ್ಡೇಶಪ್ಪ, ವಿಶ್ವನಾಥ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ಧಾರೆ.
ಪ್ರಕರಣದ ಹಿನ್ನೆಲೆ : ಗ್ರಾಮಗಳಿಗೆ ಶುದ್ದ ಕುಡಿಯುವ ನೀರು ಪೂರೈಕೆ ಮಾಡುವ ಜಲ ಜೀವನ್ ಮಿಷನ್ ಯೋಜನೆಯ ಕೆಲಸಕ್ಕೆ ತರಿಸಲಾಗಿದ್ದ 18 ಬಂಡಲ್ ಪೈಪ್ ಗಳನ್ನು ಕಳವು ಮಾಡಿದ ಕುರಿತಂತೆ ಜೂನ್ 11 ರಂದು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

