ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜುಲೈ 18: ಸರ್ಕಾರಿ ನೌಕರರು ಮನಸ್ಸು ಮಾಡಿದರೆ ಆಡಳಿತದಲ್ಲಿ ಏನೆಲ್ಲ ಬದಲಾವಣೆ ತರಬಹುದು, ನಾಗರಿಕರಿಗೆ ತ್ವರಿತವಾಗಿ ಸ್ಪಂದಿಸಬಹುದು ಎಂಬುವುದಕ್ಕೆ ಕರ್ನಾಟಕ ಸಿಎಂ ಕಚೇರಿಯ ಸಾರ್ವಜನಿಕ ಕುಂದುಕೊರತೆ ವಿಭಾಗದ ಕಾರ್ಯನಿರ್ವಹಣೆ ಸಾಕ್ಷಿಯಾಗಿದೆ!
ಹೌದು. ಸಿಎಂ ಕಚೇರಿ ಕುಂದುಕೊರತೆ ವಿಭಾಗದ ತ್ವರಿತ ಸ್ಪಂದನೆಯು, ಇಡೀ ರಾಜ್ಯದ ಆಡಳಿತ ಯಂತ್ರವನ್ನು ಸದಾ ಎಚ್ಚರದಿಂದಿರುವಂತೆ ಮಾಡಿದೆ. ಸಾರ್ವಜನಿಕ ಸಮಸ್ಯೆಗಳಿಗೆ ಸಂಬಂಧಿಸಿದ ದೂರುಗಳಿಗೆ ತ್ವರಿತಗತಿಯಲ್ಲಿ ಪರಿಹಾರಗಳು ದೊರಕುತ್ತಿವೆ.
ಕಚೇರಿಯ ಕಾರ್ಯವೈಖರಿಯು ದಿನದಿಂದ ದಿನಕ್ಕೆ ಮತ್ತಷ್ಟು ಬದಲಾವಣೆಗೊಳ್ಳುತ್ತಿದ್ದು, ಪರಿಣಾಮಕಾರಿಯಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ನಾಗರಿಕರು ತಾವಿರುವ ಸ್ಥಳದಿಂದಲೇ ಸುತ್ತಮುತ್ತಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಇದರಿಂದ ಜನಸಾಮಾನ್ಯರ ವಲಯದಲ್ಲಿ ಸರ್ಕಾರಕ್ಕೂ ಉತ್ತಮ ಹೆಸರು ಬರುವಂತಾಗಿದೆ.
ಏನೀದು ವ್ಯವಸ್ಥೆ? : ಪ್ರಸ್ತುತ ಸಾಮಾಜಿಕ ಜಾಲತಾಣಗಳು ಸಾರ್ವಜನಿಕ ಜೀವನದಲ್ಲಿ ಸಂಚಲನ ಸೃಷ್ಟಿಸುವುದರ ಜೊತೆಗೆ, ವ್ಯಾಪಕ ಮಹತ್ವ ಪಡೆದುಕೊಂಡಿವೆ. ನಾಗರೀಕರ ಅಭಿವ್ಯಕ್ತಿಯ ಪರಿಣಾಮಕಾರಿ ವೇದಿಕೆಗಳಾಗುತ್ತಿವೆ. ಜೊತೆಗೆ ಆಡಳಿತ ವ್ಯವಸ್ಥೆ ಸಂಪರ್ಕಕ್ಕೂ ಸುಲಭ ಮಾರ್ಗಗಳಾಗುತ್ತಿವೆ.
ಆಡಳಿತಗಳು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ, ನಾಗರೀಕರಿಗೆ ಹಲವು ರೀತಿಯ ಸೇವೆ ಕಲ್ಪಿಸುತ್ತಿವೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆ, ಸಾಮಾಜಿಕ ಜಾಲತಾಣಗಳ ಮೂಲಕ ನಾಗರೀಕರು ವ್ಯಕ್ತಪಡಿಸುವ ಕುಂದುಕೊರತೆ ಪರಿಹಾರಕ್ಕೆ ಪ್ರತ್ಯೇಕ ವಿಭಾಗ ತೆರೆದಿದ್ದರು. ಸದರಿ ವಿಭಾಗವು ತನ್ನ ತ್ವರಿತಗತಿಯ ಕಾರ್ಯನಿರ್ವಹಣೆ ಮೂಲಕ, ರಾಜ್ಯದ ವಿವಿಧೆಡೆಯ ಮೂಲಸೌಕರ್ಯ ಹಾಗೂ ಆಡಳಿತಾತ್ಮಕ ಸಮಸ್ಯೆಗಳಿಗೆ ಕಾಲಮಿತಿಯೊಳಗೆ ಪರಿಹಾರ ಕಲ್ಪಿಸುವ ಕಾರ್ಯು ಮಾಡುತ್ತಿತ್ತು.
ಸಿಎಂ ಡಿ ಕೆ ಶಿವಕುಮಾರ್ ಅವರ ಅವಧಿಯಲ್ಲಿಯೂ ಕೂಡ ಸದರಿ ಕಚೇರಿಯ ಕಾರ್ಯನಿರ್ವಹಣೆ ಅದೇ ವೇಗದಲ್ಲಿದ್ದು, ಸಾಮಾಜಿಕ ಜಾಲತಾಣದ ಮೂಲಕ ನಾಗರೀಕರು ಸಲ್ಲಿಸುವ ಮೂಲಸೌಕರ್ಯ ಸೇರಿದಂತೆ ನಾನಾ ರೀತಿಯ ಅಹವಾಲುಗಳಿಗೆ, ಸಮರೋಪಾದಿಯಲ್ಲಿ ಸ್ಪಂದಿಸುತ್ತಿದೆ. ಸಂಬಂಧಿಸಿದ ಜಿಲ್ಲಾ ಕೇಂದ್ರಗಳ ಇಲಾಖೆಗಳನ್ನು ನೇರವಾಗಿ ಸಂಪರ್ಕಿಸಿ ದೂರಿನ ಸತ್ಯಾಸತ್ಯತೆ ಪರಿಶೀಲಿಸುತ್ತಿದೆ. ನಂತರ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುತ್ತಿದೆ.
ದಕ್ಷ ಅಧಿಕಾರಿಗಳ ತಂಡದ ಕಾರ್ಯನಿರ್ವಹಣೆ
*** ಸಿಎಂ ಕಚೇರಿ ಕುಂದುಕೊರತೆ ವಿಭಾಗದ ಖಡಕ್ ಕಾರ್ಯನಿರ್ವಹಣೆಯು, ಜಿಲ್ಲಾ ಕೇಂದ್ರಗಳಲ್ಲಿನ ಆಡಳಿತ ವ್ಯವಸ್ಥೆ ಚುರುಕುಗೊಳ್ಳುವಂತೆ ಮಾಡಿದೆ. ಸಿಎಂ ಸಾರ್ವಜನಿಕ ಕುಂದುಕೊರತೆ ವಿಭಾಗದ ವಿಶೇಷ ಅಧಿಕಾರಿಯಾಗಿರುವ ಡಾ. ವೈಷ್ಣವಿ ಮತ್ತವರ ಸಿಬ್ಬಂದಿಗಳ ಪರಿಣಾಮಕಾರಿ ಕಾರ್ಯನಿರ್ವಹಣೆ ನಾಗರೀಕರ ಮೆಚ್ಚುಗೆಗೆ ಪಾತ್ರವಾಗಿದೆ. ಡಾ. ವೈಷ್ಣವಿ ಅವರ ಜನಪರ ಕಾಳಜಿಯು ಎಲ್ಲರ ಗಮನ ಸೆಳೆದಿದೆ.
Shivamogga, July 18: The functioning of the Public Grievances Department of the Karnataka CM’s Office is proof that if government employees put their minds to it, they can bring about any change in the administration and respond quickly to the citizens! Yes. The quick response of the CM’s Office Grievances Department has made the entire state’s administrative machinery always alert. Complaints related to public issues are being resolved quickly.

