ripponpete news | ರಿಪ್ಪನ್’ಪೇಟೆ : ಕಾರಲ್ಲಿ ಜಾನುವಾರು ಕಳವು ಮಾಡಿದ್ದ ಶಿವಮೊಗ್ಗದ ಇಬ್ಬರು ಆರೋಪಿಗಳ ಬಂಧನ!

Rippan'pet: Two accused from Shivamogga arrested for stealing cattle from a car! | Hosanagar, July 19: Two accused from Shivamogga city have been arrested by the Rippan'pet police station in Hosanagar taluk on charges of stealing cattle from a car.

ಹೊಸನಗರ (hosanagara), ಜುಲೈ 19: ಕಾರೊಂದರಲ್ಲಿ ಜಾನುವಾರು ಕಳವು ಮಾಡಿದ್ದ ಆರೋಪದ ಮೇರೆಗೆ, ಶಿವಮೊಗ್ಗ ನಗರದ ಇಬ್ಬರು ಆರೋಪಿಗಳನ್ನು ಹೊಸನಗರ ತಾಲೂಕು ರಿಪ್ಪನ್’ಪೇಟೆ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಶಿವಮೊಗ್ಗದ ಹಳೇಮಂಡ್ಲಿ ನಿವಾಸಿಗಳಾದ ಮೆಕಾನಿಕ್ ಕೆಲಸ ಮಾಡುವ ಅಮೀರ್ ಸುಹೈಲ್ ಯಾನೆ ಅಯಾನ್ (26) ಹಾಗೂ ನರ್ಸರಿ ಕೆಲಸ ಮಾಡುವ ಮಹಮ್ಮದ್ ಇಸ್ರಾರುಲ್ ಖಾನ್ (21) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಜಾನುವಾರು ವಶಕ್ಕೆ ಪಡೆದು ಅದನ್ನು ಗೋಶಾಲೆಗೆ ಬಿಡಲಾಗಿದೆ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸರ್ಕಲ್ ಇನ್ಸ್’ಪೆಕ್ಟರ್ ಎಂ ಐ ಗೌಡಪ್ಪಗೌಡರ ಮಾರ್ಗದರ್ಶನದಲ್ಲಿ ಸಬ್ ಇನ್ಸ್’ಪೆಕ್ಟರ್ ರಾಜುರೆಡ್ಡಿ ಬಿ ಸಿಬ್ಬಂದಿಗಳಾದ ರಾಮಚಂದ್ರ, ಅಶೋಕ್, ವಿಶ್ವನಾಥ್, ನವೀನ್ ಕುಮಾರ್ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಪ್ರಕರಣದ ಹಿನ್ನೆಲೆ : 03-07-2026 ರ ಬೆಳಗಿನ ಜಾವ 3.15 ಗಂಟೆ ವೇಳೆ ರಿಪ್ಪನಪೇಟೆಯ ಸಾಗರ ರಸ್ತೆಯ ವೀರ ಸಾರ್ವಕರ್ ರಸ್ತೆ ತಿರುವಿನಲ್ಲಿದ್ದ ಜಾನುವಾರನ್ನು, ಕಾರೊಂದರಲ್ಲಿ ಆಗಮಿಸಿದ್ದ ಆರೋಪಿಗಳು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಪರಾರಿಯಾಗಿದ್ದರು. ಈ ಕುರಿತಂತೆ ರಿಪ್ಪನ್’ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Rippan’pet: Two accused from Shivamogga arrested for stealing cattle from a car! | Hosanagar, July 19: Two accused from Shivamogga city have been arrested by the Rippan’pet police station in Hosanagar taluk on charges of stealing cattle from a car.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *