ಭದ್ರಾವತಿ (bhadravati), ಜುಲೈ 19: ಮಾರಾಟ ಮಾಡಲು ಗಾಂಜಾ ಕೊಂಡೊಯ್ಯುತ್ತಿದ್ದ ಆರೋಪದ ಮೇರೆಗೆ, ಇಬ್ಬರು ಯುವಕರನ್ನು ಶಿವಮೊಗ್ಗ ಜಿಲ್ಲೆ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಾಗತಿಬೆಳಗಲು ಗ್ರಾಮದ ಸಮೀಪ ನಡೆದಿದೆ.
ಮಣಿಕಂಠ (19) ಹಾಗೂ ಜೀವನ್ (19) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ನಾಗತಿಬೆಳಗಲು ಗ್ರಾಮದ ತಾಂಡ ಕಡೆಯಿಂದ ಭದ್ರಾವತಿಯೆಡೆಗೆ ಆರೋಪಿಗಳು ಗಾಂಜಾ ಕೊಂಡೊಯುತ್ತಿದ್ದರು.
ಈ ಕುರಿತಂತೆ ಲಭ್ಯವಾದ, ಖಚಿತ ವರ್ತಮಾನದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಜುಲೈ 17 ರಂದು ಘಟನೆ ನಡೆದಿದೆ. ಆರೋಪಿಗಳಿಂದ 65 ಸಾವಿರ ರೂ. ಮೌಲ್ಯದ 1 ಕೆಜಿ 310 ಗ್ರಾಂ ತೂಕದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
Bhadravati Rural Police Operation: Two arrested for transporting ganja! | Bhadravati, July 19: An incident took place near Nagati Belagalu village where two youths were arrested by the Bhadravati Rural Police Station in Shivamogga district on charges of transporting ganja for sale.

