news update | ದೆಹಲಿ ಎಐಸಿಸಿ ಕಚೇರಿಯಲ್ಲಿ ಭದ್ರಾವತಿಯ ಬಿ ವಿ ಶ್ರೀನಿವಾಸ್ ಗೆ ಶಿವಮೊಗ್ಗ ಕಾಂಗ್ರೆಸ್ ಮುಖಂಡರಿಂದ ಸನ್ಮಾನ

ದೆಹಲಿ, ಜುಲೈ 23: ನವದೆಹಲಿಯ ಎಐಸಿಸಿ (AICC) ಪ್ರಧಾನ ಕಚೇರಿ ಇಂದಿರಾ ಭವನದಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದ ನೂತನ ಮುಖ್ಯ ಸಂಘಟಕರಾದ ಬಿ.ವಿ. ಶ್ರೀನಿವಾಸ್ ಅವರನ್ನು ಶಿವಮೊಗ್ಗದ ಕಾಂಗ್ರೆಸ್ ಮುಖಂಡರ ನಿಯೋಗ ಭೇಟಿಯಾಗಿ ಶುಭಾಶಯಗಳನ್ನು ಸಲ್ಲಿಸಿ ಅಭಿನಂದಿಸಿತು.
ಸೇವೆ, ಶಿಸ್ತು, ತ್ಯಾಗ ಮತ್ತು ಸಮರ್ಪಣೆಯ ಮೌಲ್ಯಗಳನ್ನು ಒಳಗೊಂಡ ಕಾಂಗ್ರೆಸ್ ಸೇವಾದಳವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟುವಲ್ಲಿ ಅವರ ನಾಯಕತ್ವ ಮಹತ್ವದ ಪಾತ್ರವಹಿಸಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ರಾಜ್ಯ ಜವಳಿ ನಿಗಮದ ಅಧ್ಯಕ್ಷರಾದ ಚೇತನ್ ಕೆ ಗೌಡ ತಿಳಿಸಿದ್ದಾರೆ.
ಬಿ ವಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ದೇಶದಾದ್ಯಂತ ಸೇವಾದಳದ ಸಂಘಟನೆ ಇನ್ನಷ್ಟು ಸದೃಢಗೊಂಡು, ಯುವ ಕಾರ್ಯಕರ್ತರಿಗೆ ಹೊಸ ಉತ್ಸಾಹ ಮತ್ತು ದಿಕ್ಕು ದೊರೆಯಲಿದೆ ಎಂದು ಯುವ ಮುಖಂಡ ಸಿ ಜಿ ಮಧುಸೂದನ್ ಹೇಳಿದ್ದಾರೆ.
ಬಿ.ವಿ. ಶ್ರೀನಿವಾಸ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಅವರ ಮುಂದಿನ ಜವಾಬ್ದಾರಿಗಳಿಗೆ ಶುಭಾಶವಾಗಲಿ ಎಂದು ಯುವ ಮುಖಂಡ ಶ್ರೀಜಿತ್ ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ಪಲ್ಲವಿ, ಆದರ್ಶ್ ಮೊದಲಾದವರಿದ್ದರು.
Bhadravati’s B.V. Srinivas felicitated by Shivamogga Congress leaders at Delhi AICC office
Delhi, July 23: A delegation of Congress leaders from Shivamogga met B.V. Srinivas, the new chief organizer of the Indian National Congress Seva Dal, at the AICC headquarters in Indira Bhavan in New Delhi, and congratulated him.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *