shimoga rain news | ಶಿವಮೊಗ್ಗ : ಲಿಂಗನಮಕ್ಕಿ, ತುಂಗ, ಭದ್ರಾ ಡ್ಯಾಂಗಳ ಒಳಹರಿವಿನಲ್ಲಿ ಇಳಿಕೆ

Further reduction in the inflow of Linganamakki, Tunga, Bhadra reservoirs! ಲಿಂಗನಮಕ್ಕಿ ತುಂಗಾ ಭದ್ರಾ ಜಲಾಶಯಗಳ ಒಳಹರಿವಿನಲ್ಲಿ ಮತ್ತಷ್ಟು ಇಳಿಕೆ!

ಶಿವಮೊಗ್ಗ (shivamogga), ಆಗಸ್ಟ್ 05: ಮಲೆನಾಡು ಭಾಗದಲ್ಲಿ ಮುಂಗಾರು ಮಳೆಯ ಅಬ್ಬರ ತಗ್ಗಿದೆ. ಮತ್ತೊಂದೆಡೆ, ಜಲಾನಯನ ಪ್ರದೇಶಗಳಲ್ಲಿ ಮಳೆ ಇಳಿಮುಖವಾಗಿರುವುದರಿಂದ ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿಯೂ ಇಳಿಕೆಯಾಗಿದೆ.

ಆಗಸ್ಟ್ 05 ರ ಬೆಳಿಗ್ಗೆ 8 ಗಂಟೆಯ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ ಒಳಹರಿವು 31,848 ಕ್ಯೂಸೆಕ್ ಗೆ ಇದೆ.

2078 ಕ್ಯೂಸೆಕ್ ಹೊರ ಹರಿವಿದೆ. ಡ್ಯಾಂನ ನೀರಿನ ಮಟ್ಟ 1787.20 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 1811.60 ಅಡಿಯಿತ್ತು.

ಭದ್ರಾ ಜಲಾಶಯದ ಒಳಹರಿವು 11,790 ಕ್ಯೂಸೆಕ್ ಇದೆ. 193 ಕ್ಯೂಸೆಕ್ ಹೊರಹರಿವಿದೆ. ಡ್ಯಾಂ ನೀರಿನ ಮಟ್ಟ 165 ಅಡಿ 9 ಇಂಚು (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 181 ಅಡಿ 9 ಇಂಚು ಇತ್ತು.

ತುಂಗಾ ಜಲಾಶಯವು ಈಗಾಗಲೇ ಗರಿಷ್ಠ ಮಟ್ಟ ತಲುಪಿದೆ. ಪ್ರಸ್ತುತ ಡ್ಯಾಂನ ಒಳಹರಿವು 37,412 ಕ್ಯೂಸೆಕ್ ಇದ್ದು, ಒಳಹರಿವಿನಷ್ಟೆ ನೀರನ್ನು ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ಬಿಡಲಾಗುತ್ತಿದೆ.

ಮಳೆ ವಿವರ : ಆಗಸ್ಟ್ 05 ರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ, ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರಮುಖ ಪ್ರದೇಶಗಳಲ್ಲಿ ಬಿದ್ದ ಮಳೆ ವಿವರ ಈ ಮುಂದಿನಂತಿದೆ.

ಮಾಣಿ 93 ಮಿಲಿ ಮೀಟರ್ (ಮಿ.ಮೀ.), ಯಡೂರು 80 ಮಿ.ಮೀ., ಹುಲಿಕಲ್ 109 ಮಿ.ಮೀ., ಮಾಸ್ತಿಕಟ್ಟೆ 81 ಮಿ.ಮೀ., ಚಕ್ರಾ 43 ಮಿ.ಮೀ. ಹಾಗೂ ಸಾವೇಹಕ್ಲುವಿನಲ್ಲಿ 64 ಮಿ.ಮೀ. ಮಳೆಯಾಗಿದೆ.

ಉಳಿದಂತೆ ಶಿವಮೊಗ್ಗ 11.20 ಮಿ.ಮೀ., ಭದ್ರಾವತಿ 9 ಮಿ.ಮೀ., ತೀರ್ಥಹಳ್ಳಿ 27.20 ಮಿ.ಮೀ., ಸಾಗರ 50.90 ಮಿ.ಮೀ., ಶಿಕಾರಿಪುರ 8.90 ಮಿ.ಮೀ., ಸೊರಬ 10.80 ಮಿ.ಮೀ. ಹಾಗೂ ಹೊಸನಗರದಲ್ಲಿ 40.10 ಮಿ.ಮೀ. ಮಳೆಯಾಗಿದೆ.

Shivamogga: Inflows of Linganamakki, Tunga, Bhadra dams decrease | Shivamogga, August 05: The monsoon rains have subsided in the Malnad region. On the other hand, due to the decrease in rainfall in the catchment areas, the inflows of major reservoirs have also decreased.
As of 8 am on August 05, the inflow of Linganamakki dam, the main hydroelectric power generation center of the state, is 31,848 cusecs.
There is an outflow of 2078 cusecs. The water level of the dam is 1787.20 feet (maximum level: 1819). Last year, the water level of the dam was 1811.60 feet on the same day.
The inflow of Bhadra reservoir is 11,790 cusecs. There is an outflow of 193 cusecs. The dam water level is 165 feet 9 inches (maximum level: 186). Last year, the dam water level was 181 feet 9 inches on the same day.
The Tunga reservoir has already reached its maximum level. The current inflow of the dam is 37,412 cusecs, and the water is being released to the Tungabhadra reservoir in Hospet as per the inflow.
Rainfall details: The rainfall details of major areas under the Western Ghats in the district during the last 24 hours ending at 8 am on August 05 are as follows.
Mani 93 millimeters (mm), Yadoor 80 mm, Hulikal 109 mm, Mastikatte 81 mm, Chakra 43 mm and Savehaklu 64 mm. Rainfall has been recorded.
Otherwise, Shivamogga received 11.20 mm, Bhadravati 9 mm, Thirthahalli 27.20 mm, Sagar 50.90 mm, Shikaripura 8.90 mm, Soraba 10.80 mm and Hosanagar received 40.10 mm.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *