shikaripura news | ಶಿಕಾರಿಪುರ : ಕಾಂಗ್ರೆಸ್ ಪಕ್ಷದಿಂದ ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮ

Shikaripura: A program was organized by the Congress Party to offer Bagina (ritual offering) at the Anjanapura Reservoir.

ಶಿಕಾರಿಪುರ (shikaripura), ಆಗಸ್ಟ್ 13: ರಾಜಕೀಯ ಜಂಜಾಟದ ಮಧ್ಯೆ ಪ್ರಕೃತಿಯನ್ನು ಪೂಜೆ ಮಾಡುವ ಸದಾವಕಾಶವು ಲಭಿಸಿದೆ. ಇದೊಂದು ಸಂತಸಕೊಡುವ ದಿನ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಆರ್ ಪ್ರಸನ್ನಕುಮಾರ್ ಹೇಳಿದರು.

ಬುಧವಾರ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಅಂಜನಾಪುರ ಜಲಾಶಯಕ್ಕೆ ಬಾಗಿನ ಕೊಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕಾರಿಪುರ ತಾಲೂಕಿನ ನೀರಾವರಿಗೆ ಆದ್ಯತೆ ನೀಡಿ ಮೊದಲು 250 ಕೋಟಿ ಅನುದಾನ ನೀಡಿದ್ದು ಅಂದಿನ ಕಾಂಗ್ರೆಸ್ ಸರ್ಕಾರ.

ಇವತ್ತು ಶಿಕಾರಿಪುರ ತಾಲೂಕಿನ ಜನತೆ ಪುಣ್ಯವಂತರು. ನಾಡಿನಾದ್ಯಂತ ಬರಗಾಲ ಆವರಿಸಿದರೂ ಇಲ್ಲಿನ ಎರಡು ಜಲಾಶಯಗಳಾದ ಅಂಜನಾಪುರ ಮತ್ತು ಅಂಬ್ಲಿಗೊಳ ಜಲಾಶಯಗಳು ತುಂಬಿದೆ ಎಂದರು.

ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾಗಿದ್ದ ಕಾಲದಲ್ಲಿ ಮೊದಲ ಬಾರಿಗೆ ಹಸಿವು ಮುಕ್ತ ಕರ್ನಾಟಕ ಎಂಬ ಘೋಷಣೆಯೊಂದಿಗೆ ಬಡವರ ಕಲ್ಯಾಣಕ್ಕಾಗಿ ಅನ್ನಭಾಗ್ಯ ಯೋಜನೆಯನ್ನು ತಂದರು, ನಾಡಿನ ಮಹಿಳೆಯರಿಗಾಗಿ ಜಾರಿಗೆ ತಂದ ಯೋಜನೆಗಳು ಅತ್ಯಂತ ಯಶಸ್ವಿಯಾಗಿವೆ. ಕಾಂಗ್ರೆಸ್ ಸರ್ಕಾರ ಯಾವತ್ತೂ ಬಡವರ ಪರವಾದ, ಜನಪರವಾದ ಸರ್ಕಾರ ಎಂದು ಸಾಕ್ಷೀಕರಿಸಿದೆ ಎಂದರು.

ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷ ಯಾವತ್ತೂ ರೈತ ರಪರವಾದ ಪಕ್ಷ, ಸ್ವಾತಂತ್ರ್ಯಪೂರ್ವದಲ್ಲಿ ಮೈಸೂರು ಮಹಾರಾಜರು ಅಂಜನಾಪುರ ಜಲಾಶಯ ಸೇರಿದಂತೆ ನಾಡಿನ ಬಹುತೇಕ ಜಲಾಶಯಗಳನ್ನು ನಿರ್ಮಾಣಮಾಡಿದ್ದಾರೆ. ಬಹುತೇಕ ಆಣೆಕಟ್ಟುಗಳು ಕಾಂಗ್ರೆಸ್ ಪಕ್ಷದ ಅವಧಿಯಲ್ಲಿಯೇ ನಿರ್ಮಾಣ ಮಾಡಿದವು. ನಮ್ಮ ತಾಲೂಕಿನ ಎರಡೂ ಜಲಾಶಯಗಳು ತುಂಬಿರುವುದು ರೈತರಲ್ಲಿ ಸಂತಸ ತಂದಿದೆ ಎಂದರು.

ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಕೆ ಪಿ ಎಂ ಸಿ ಪ್ರಧಾನ ಕಾರ್ಯದರ್ಶಿ ಪುಷ್ಪ ಶಿವಕುಮಾರ್ ಮಾತನಾಡಿ,  ನಮ್ಮ ದೇಶದ ಸಂಸ್ಕೃತಿ ನಮಗೆ ಹೆಮ್ಮೆ. ಹೆಣ್ಣು ಮಕ್ಕಳ  ಹಬ್ಬ,  ಮನೆ ಮಗಳಿಗೆ ಗೌರವಿಸಿದಂತೆ ನಾವು ಗಂಗಾಮಾತೆಗೆ ಬಾಗಿನ ಕೊಡುವ  ಸೌಭಾಗ್ಯ ನಮಗೆ ದೊರಕಿರುವದು ನಮ್ಮ ಪೂರ್ವಜನ್ಮದ ಪುಣ್ಯದ ವಿಶೇಷವಾಗಿದೆ ಎಂದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳದ ಶಿವರಾಂ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಕೃತಿಯ ಮುಂದೆ ಯಾವ ಅಧಿಕಾರ, ಅಂತಸ್ತು, ಗರ್ವ ಉಳಿಯುವುದಿಲ್ಲಾ ಎಂಬುದನ್ನು ನೆನಪು ಮಾಡಿಕೊಳ್ಳಬೇಕು. ಬಾಗಿನ ಅರ್ಪಿಸಲು ದೊಡ್ಡ ಮಟ್ಟದಲ್ಲಿ ಮಹಿಳೆಯರು ಆಗಮಿಸಿರುವುದು ಸಂತಸವಾಗಿದೆ ಎಂದರು. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ  ಶ್ವೇತಾ ಬಂಡಿ, ಪುರಸಭೆ ಸದಸ್ಯ ಉಳ್ಳಿ ದರ್ಶನ್, ಕೆಡಿಪಿ ಸದಸ್ಯ ರಾಘವೇಂದ್ರ ನಾಯ್ಕ,ಪ್ರಧಾನ ಕಾರ್ಯದರ್ಶಿ ಕೃಷ್ಣಜಿರಾವ್, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಸುವರ್ಣಮ್ಮ, ನಗರ ಯೂತ್ ಅಧ್ಯಕ್ಷ ರೋಷನ್,ಮುಖಂಡರಾದ   ಎನ್ ವಿ ಈರೇಶ್, ಬಡಗಿ ಫಾಲಾಕ್ಷಪ್ಪ, ನಗರದ ಮಾಲತೇಶ್, ಮಂಜಾನಾಯ್ಕ ಸೇರಿದಂತೆ ಸ್ಥಳೀಯ ಗ್ರಾ.ಪಂ. ಸದಸ್ಯರು ಹಾಗೂ ಪಕ್ಷದ ವಿವಿಧ ಘಟಕದ ಮುಖಂಡರುಗಳು ಈ ಸಂದರ್ಭ ಹಾಜರಿದ್ದರು.

Shikaripura: A program was organized by the Congress Party to offer Bagina (ritual offering) at the Anjanapura Reservoir.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *