ಶಿವಮೊಗ್ಗ (shivamogga), ಆಗಸ್ಟ್ 14: ಶಿವಮೊಗ್ಗ ನಗರದ ಹೊರವಲಯ ಗಾಡಿಕೊಪ್ಪದ ಪುರದಾಳು ಮಾರ್ಗದ ರಿಂಗ್ ರೋಡ್ ನಲ್ಲಿದ್ದ ಅಪರಿಚಿತ ವೃದ್ದ ಮಹಿಳೆಯೋರ್ವರಿಗೆ, ಇಆರ್’ಎಸ್ಎಸ್ – 112 ಪೊಲೀಸ್ ಸಿಬ್ಬಂದಿಗಳು ನೆರವಾದ ಘಟನೆ ನಡೆದಿದೆ.
ರಿಂಗ್ ರೋಡ್ ನಲ್ಲಿ ವೃದ್ದ ಮಹಿಳೆಯೋರ್ವರು ಓರ್ವರೇ ಇರುವ ಕುರಿತಂತೆ, ಇಆರ್’ಎಸ್ಎಸ್ – 112 ಸಹಾಯವಾಣಿಗೆ ಕರೆ ಬಂದಿದೆ. ಇದರ ಆಧಾರದ ಮೇಲೆ ಇಆರ್’ವಿ ಸಿಬ್ಬಂದಿಗಳಾದ ತುಂಗಾ ನಗರ ಠಾಣೆ ಎಎಸ್ಐ ಚಂದ್ರನಾಯ್ಕ್ ಹಾಗೂ ಎಹೆಚ್’ಸಿ ಮಂಜುನಾಥ್ ಅವರು ಸ್ಥಳಕ್ಕೆ ತೆರಳಿದ್ದರು.
ಈ ವೇಳೆ ಮಹಿಳೆಯು ತನ್ನ ಊರು ಹೊಳಲ್ಕೆರೆ ಎಂದಷ್ಟೆ ಮಾಹಿತಿ ನೀಡಿದ್ದರು. ಅವರ ಮಗಳ ಬಗ್ಗೆ ಮಾಹಿತಿ ನೀಡಿದ್ದರು. ಇದರ ಹೊರತಾಗಿ ಬೇರೆ ಯಾವುದೇ ವಿವರ ನೀಡಿರಲಿಲ್ಲ. ಸದರಿ ಮಾಹಿತಿ ಆಧಾರದ ಮೇಲೆ ಹೊಳಲ್ಕೆರೆ ಪೊಲೀಸ್ ಠಾಣೆಗೆ ಸದರಿ ವೃದ್ದೆಯ ಪೋಟೋವನ್ನು ರವಾನಿಸಿ, ವಾರಸುದಾರರ ಪತ್ತೆಗೆ ನೆರವಾಗುವಂತೆ ಸಿಬ್ಬಂದಿಗಳು ಕೋರಿದ್ದರು.
ವೃದ್ದೆಯ ವಾರಸುದಾರರ ವಿವರ ಪತ್ತೆಯಾಗಿತ್ತು. ಮಗಳೊಂದಿಗೆ ವೃದ್ದೆಯನ್ನು ಕಳುಹಿಸಿ ಕೊಡುವಲ್ಲಿ ಸಿಬ್ಬಂದಿಗಳು ಯಶಸ್ವಿಯಾಗಿದ್ದರು. ಇಆರ್’ಎಸ್ಎಸ್ – 112 ಪೊಲೀಸ್ ಸಿಬ್ಬಂದಿಗಳ ಕರ್ತವ್ಯ ನಿಷ್ಠೆ ಹಾಗೂ ಸಮಯ ಪ್ರಜ್ಞೆಗೆ ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸಿದೆ.
Shimoga: ERSS–112 staff assist elderly woman on Ring Road! | Shimoga, August 14: An incident occurred on the Ring Road near Gadikoppa in the outskirts of Shimoga city, where ERSS–112 police staff came to the aid of an unidentified elderly woman.
A call was received on the ERSS–112 helpline reporting that an elderly woman was alone on the Ring Road. Acting on this, ERV staff ASI Chandranayak from Tunga Nagar Police Station and H.C. Manjunath rushed to the spot.
At the time, the woman only mentioned that her native place was Holalkere and gave some information about her daughter. She did not provide any other details. Based on this limited information, the staff sent her photo to the Holalkere Police Station requesting assistance in tracing her family.
The woman’s family details were successfully traced. The staff reunited her with her daughter. The district police department praised the ERSS–112 staff for their dedication and timely action.

