shimoga news | ಶಿವಮೊಗ್ಗ : ಹೋಟೆಲ್, ತಿನಿಸು ಮಳಿಗೆಗಳ ಮೇಲೆ ದಿಡೀರ್ ದಾಳಿ!

Shivamogga, September 29: Surprise raids on hotels and food preparation centers in Shivamogga city led by a team comprising Sub-Divisional Officer (AC) Dr Maitri and Tahsildar Rajiv are continuing.

ಶಿವಮೊಗ್ಗ (shivamogga), ಸೆಪ್ಟೆಂಬರ್ 29: ಶಿವಮೊಗ್ಗ ನಗರದ ಹೋಟೆಲ್ ಸೇರಿದಂತೆ ಆಹಾರ ತಯಾರಿಕಾ ಕೇಂದ್ರಗಳ ಮೇಲೆ, ಉಪ ವಿಭಾಗಾಧಿಕಾರಿ (ಎಸಿ) ಡಾ. ಮೈತ್ರಿ ಹಾಗೂ ತಹಶೀಲ್ದಾರ್ ರಾಜೀವ್ ನೇತೃತ್ವದ ತಂಡ ನಡೆಸುತ್ತಿರುವ ದಿಡೀರ್ ದಾಳಿ ಮುಂದುವರಿದಿದೆ.

ಸೆಪ್ಟೆಂಬರ್ 29 ರಂದು ನಗರದ ನಾಲ್ಕ ಕಡೆ ಅಧಿಕಾರಿಗಳ ತಂಡ ದಿಡೀರ್ ಭೇಟಿಯಿತ್ತು ಆಹಾರದ ಗುಣಮಟ್ಟ, ಸ್ವಚ್ಛತೆ ಪರಿಶೀಲನೆ ನಡೆಸಿತು.

ಬಿ ಹೆಚ್ ರಸ್ತೆಯ ಹೋಟೆಲ್ ತಾಜ್, ಬ್ರೈಟ್ ಹೋಟೆಲ್, ಮಿಳಘಟ್ಟ ರಸ್ತೆಯ ಲಕ್ಷ್ಮೀ ಕಾಂಡಿಮೆಂಟ್ಸ್, ದುರ್ಗಿಗುಡಿ ರಸ್ತೆಯಲ್ಲಿರುವ ಹೋಳಿಗೆ ಮನೆ ಕೇಂದ್ರಗಳಿಗೆ ಅಧಿಕಾರಿಗಳ ತಂಡ ಭೇಟಿಯಿತ್ತು ಪರಿಶೀಲಿಸಿತು.

ದಾಳಿಯ ವೇಳೆ ಅಧಿಕಾರಿಗಳಿಗೆ ಕೇಂದ್ರಗಳಲ್ಲಿ ಕೆಲ ನ್ಯೂನ್ಯತೆಗಳು ಕಂಡುಬಂದಿವೆ. ಇವುಗಳನ್ನು ತಕ್ಷಣವೇ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ರೀತ್ಯ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಅಧಿಕಾರಿಗಳ ತಂಡ ನೀಡಿದೆ. ಇದೆ ವೇಳೆ ಕೆಲವೆಡೆ ಆಹಾರದ ಸ್ಯಾಂಪಲ್ ಗಳನ್ನು ಸಂಗ್ರಹಿಸಿದ್ದು, ಹೆಚ್ಚಿನ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲು ನಿರ್ಧರಿಸಿದೆ.

Shivamogga, September 29: Surprise raids on hotels and food preparation centers in Shivamogga city led by a team comprising Sub-Divisional Officer (AC) Dr  Maitri and Tahsildar Rajiv are continuing.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *