shimoga news | ಶಿವಮೊಗ್ಗ : ಸಚಿವ ಸೋಮಣ್ಣ ಕಾರಿಗೆ ಮುತ್ತಿಗೆ – ಯುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ದ ಎಫ್ಐಆರ್!

Shivamogga: Minister Somanna's car besieged – FIR against Youth Congress workers! | Shivamogga, October 13: An FIR has been registered at the Doddapete Police Station against workers of the Shivamogga Youth Congress unit. They had surrounded the car in which Union Railway Minister V. Somanna was traveling, raising slogans and attempting to display black flags.

ಶಿವಮೊಗ್ಗ (shivamogga), ಅಕ್ಟೋಬರ್ 13: ಕೇಂದ್ರ ರೈಲ್ವೆ ಸಚಿವ ವಿ ಸೋಮಣ್ಣ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ದಿಡೀರ್ ಘೋಷಣೆ ಕೂಗುತ್ತಾ ಮುತ್ತಿಗೆ ಹಾಕಿ, ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನಿಸಿದ ಶಿವಮೊಗ್ಗದ ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತರ ವಿರುದ್ದ ದೊಡ್ಡಪೇಟೆ ಠಾಣೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಯುವ ಕಾಂಗ್ರೆಸ್ ಘಟಕದ ಮುಖಂಡರಾದ ಚರಣ್ ಬೊಮ್ಮನಕಟ್ಟೆ, ಗಿರೀಶ್, ಬಾಲಾಜಿ, ಅಶ್ವತ್, ಅನಂತ್ ಬಂಗೇರ, ಹರ್ಷಿತ್ ಗೌಡ, ಶಿವು ಮಲವಗೊಪ್ಪ, ರವಿ ಕಾಟಿಕೆರೆ, ಚಂದ್ರೋಜಿ,

ಆಕಾಶ್, ಆದಿತ್ಯ ಸೀಗೆಹಟ್ಟಿ, ವಿಜಯ್ ನವುಲೆ, ಪ್ರವೀಣ್ ಹರಮಘಟ್ಟ, ತೌಫಿಕ್, ನಿಖಿಲ್, ವಿಷ್ಣು, ರವಿ, ಶಿವರಾಜ್ ಹಾಗೂ ಇತರೆ ಐದಾರು ಜನ ಯುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದೆ ವೇಳೆ ಬಿ ಎಸ್ ಚನ್ನಬಸಪ್ಪ ಸನ್ಸ್ ಬಟ್ಟೆ ಅಂಗಡಿ ಮ್ಯಾನೇಜರ್ ವಿರುದ್ದವೂ ಪೊಲೀಸರು ದೂರು ದಾಖಲಿಸಿದ್ದಾರೆ.

ಏನೀದು ಘಟನೆ? : ಶಿವಮೊಗ್ಗದ ಬಿ ಹೆಚ್ ರಸ್ತೆಯ ವಿನಾಯಕ ಪಾರೇಖ ಮಹಲ್ ನಲ್ಲಿ ಬಿ ಎಸ್ ಚನ್ನಬಸಪ್ಪ ಅಂಡ್ ಸನ್ಸ್ ಬಟ್ಟೆ ಅಂಗಡಿ ಉದ್ಘಾಟನಾ ಸಮಾರಂಭಕ್ಕೆ ಕೇಂದ್ರ ರೈಲ್ವೆ ಸಚಿವ ವಿ ಸೋಮಣ್ಣ ಕಾರಿನಲ್ಲಿ ಆಗಮಿಸುತ್ತಿದ್ದರು.

ಈ ವೇಳೆ ಎಸ್ಐಆರ್ ಪರಿಷ್ಕರಣೆ ವಿವಾದ ಹಾಗೂ ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಲು ಯುವ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಸೋಮಣ್ಣರ ಕಾರಿಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿದ್ದರು. ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರು.

ಮತ್ತೊಂದೆಡೆ, ಬಟ್ಟೆ ಅಂಗಡಿ ಉದ್ಘಾಟನಾ ಕಾರ್ಯಕ್ರಮಕ್ಕೆ ಗಣ್ಯರು ಆಗಮಿಸುವ ಹಾಗೂ ಸೂಕ್ತ ಭದ್ರತಾ ವ್ಯವಸ್ಥೆ ಮಾಡುವಂತೆ ಕೋರಿ ಬಟ್ಟೆ ಅಂಗಡಿ ಮ್ಯಾನೇಜರ್ ಅವರು ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ.

ಸಚಿವರಿಗೆ ಅಡ್ಡಿ ಪಡಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಬಟ್ಟೆ ಅಂಗಡಿ ಮ್ಯಾನೇಜರ್ ವಿರುದ್ದವೂ ದೊಡ್ಡಪೇಟೆ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರಿನ ಮೇರಿಗೆ ಎಫ್ಐಆರ್ ದಾಖಲಿಸಿದ್ದಾರೆ.

Shivamogga: Minister Somanna’s car besieged – FIR against Youth Congress workers! | Shivamogga, October 13: An FIR has been registered at the Doddapete Police Station against workers of the Shivamogga Youth Congress unit. They had surrounded the car in which Union Railway Minister V. Somanna was traveling, raising slogans and attempting to display black flags.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *