ಬೆಂಗಳೂರು, ಅಕ್ಟೋಬರ್ 13: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಹೆಚ್ಚಳದ ನಿರ್ಧಾರವನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪು, ಹಲವು ತಲೆಮಾರುಗಳಿಂದ ಸಮಾನ ಅವಕಾಶ ವಂಚಿತವಾಗಿದ್ದ ಶೋಷಿತ ಸಮುದಾಯಗಳ ಘನತೆಯ ಬದುಕಿನ ಕನಸಿಗೆ ಘಾಸಿಯುಂಟುಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತಂತೆ ಅಕ್ಟೋಬರ್ 13 ರಂದು ಅವರು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ನ್ಯಾಯಾಲಯದ ತೀರ್ಪಿನ ಬಗ್ಗೆ ಗೌರವವನ್ನು ವ್ಯಕ್ತಪಡಿಸುತ್ತಲೇ, ಸಾಮಾಜಿಕ ನ್ಯಾಯದ ವಿಚಾರದಲ್ಲಿ ಅಂದಿನ ಬಿಜೆಪಿ ಸರ್ಕಾರವು ಪೂರ್ವ ತಯಾರಿ ಇಲ್ಲದೆ ಅವಸರದಲ್ಲಿ ಮೀಸಲಾತಿ ಹೆಚ್ಚಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮಾಡಿರುವ ಅನ್ಯಾಯವನ್ನು ಖಂಡಿಸುತ್ತೇನೆ.
ಸುಪ್ರೀಂ ಕೋರ್ಟ್ ಇಂದಿರಾ ಸಹಾನಿ ಪ್ರಕರಣದಲ್ಲಿ ಒಟ್ಟು ಮೀಸಲಾತಿಯು ಶೇ. 50 ರ ಮಿತಿಯನ್ನು ಮೀರಬಾರದು ಎಂದು ನೀಡಿದ್ದ ತೀರ್ಪಿನ ಅರಿವಿದ್ದರೂ, ಬಿಜೆಪಿ ಸರ್ಕಾರ 2023 ರ ವಿಧಾನಸಭಾ ಚುನಾವಣೆಗೂ ಮುನ್ನ ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ. 15 ರಿಂದ ಶೇ. 17 ಕ್ಕೆ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿಯನ್ನು ಶೇ. 3 ರಿಂದ ಶೇ. 7 ಕ್ಕೆ ಹೆಚ್ಚಿಸಿದ್ದು ಈಗಿನ ಅವಾಂತರಕ್ಕೆ ಕಾರಣ ಎಂದು ದೂರಿದ್ದಾರೆ.
ಮೀಸಲಾತಿ ಹೆಚ್ಚಳಕ್ಕೆ ಸೂಕ್ತ ಸಾಂವಿಧಾನಿಕ ರಕ್ಷಣೆಯನ್ನು ನೀಡದೆ ಆತುರವಾಗಿ ಜಾರಿ ಮಾಡಿದ್ದೇಕೆ? ಸಾಮಾಜಿಕ ನ್ಯಾಯದ ಪಾಲನೆಗಿಂತ ಚುನಾವಣಾ ಲಾಭವೇ ಬಿಜೆಪಿಗೆ ಮುಖ್ಯವಾಗಿತ್ತೆ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಚಿಸಲಾಗಿದ್ದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ಮೀಸಲಾತಿ ಹೆಚ್ಚಳಕ್ಕೆ ಅಗತ್ಯವಾದ ಬುನಾದಿಯನ್ನು ಒದಗಿಸಿತ್ತು. ಮೀಸಲಾತಿ ಹೆಚ್ಚಳದ ಬೇಡಿಕೆಯ ಈಡೇರಿಕೆಯಾಗಿದ್ದು ಯಾವುದೇ ಪಕ್ಷದ ರಾಜಕೀಯ ಔದಾರ್ಯದಿಂದ ಅಲ್ಲ. ಬದಲಾಗಿ ಅವಕಾಶ ವಂಚಿತ ಸಮುದಾಯಗಳ ದಶಕಗಳ ಹೋರಾಟದ ಫಲವಾಗಿ ಬಂದಿದ್ದಾಗಿದೆ.
ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವ ಕಾರಣವನ್ನೊಡ್ಡಿ, ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9 ನೇ ಶೆಡ್ಯೂಲ್ ಗೆ ಸೇರಿಸುವ ಕರ್ನಾಟಕದ ಮನವಿಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಹಾಗಾಗಿ ಈಗ ಕೇಂದ್ರ ಸರ್ಕಾರವು ಮೀಸಲಾತಿ ಹೆಚ್ಚಳದ ವಿಚಾರವಾಗಿ ಸಾಂವಿಧಾನಿಕ ಪರಿಹಾರ ಏನು ಎಂಬುದನ್ನು ಕೂಡ ಸ್ಪಷ್ಟಪಡಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.
ಅಹಿಂದ ವರ್ಗಗಳಾದ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರಿಗೆ ಸೂಕ್ತ ಮೀಸಲಾತಿ ಸೌಲಭ್ಯ ದೊರೆತು, ಅವರು ಸಮಾಜದ ಮುಖ್ಯವಾಹಿನಿಗೆ ಬರಬೇಕು, ಇದರಲ್ಲಿ ಯಾವುದೇ ರಾಜಿಯಿಲ್ಲ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯಿಲ್ಲದೆ ರಾಜಕೀಯ ಪ್ರಜಾಪ್ರಭುತ್ವ ಅಪೂರ್ಣ ಎನ್ನುವುದು ನನ್ನ ದೃಢ ನಂಬಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಮೀಸಲಾತಿ ಎಂಬುದು ದಾನವಲ್ಲ. ಇದು ಅನಾದಿ ಕಾಲದ ಅನ್ಯಾಯವನ್ನು ಸರಿಪಡಿಸಲು ಮತ್ತು ಶೋಷಿತ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯವನ್ನು ಕಲ್ಪಿಸಲು ಇರುವ ಒಂದು ಸಾಂವಿಧಾನಿಕ ಸಾಧನವಾಗಿದೆ.
ಕೇಂದ್ರ ಸರ್ಕಾರವು ಶೇ. 50 ರ ಮಿತಿಗೆ ಜೋತುಬೀಳದೆ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಿ ಅದನ್ನು ಸಂವಿಧಾನದ 9 ನೇ ಶೆಡ್ಯೂಲ್ ಸೇರಿಸಿ ರಕ್ಷಣೆ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹೆಚ್ಚಿಸಲಾದ ಮೀಸಲಾತಿಯನ್ನು ಅದೇ ಪ್ರಮಾಣದಲ್ಲಿ ಉಳಿಸಲು ಹಾಗೂ ನ್ಯಾಯಾಲಯದ ಆದೇಶದಿಂದ ತೊಂದರೆಗೀಡಾಗುವ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ಹಿತವನ್ನು ಕಾಪಾಡಲು ಕರ್ನಾಟಕ ಸರ್ಕಾರವು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು.
ಸಾಮಾಜಿಕ ನ್ಯಾಯಕ್ಕಾಗಿನ ಹೋರಾಟವನ್ನು ಕೇವಲ ಚುನಾವಣಾ ಸಮಯದ ಘೋಷಣೆಗಳಿಗೆ ಸೀಮಿತಗೊಳಿಸಬಾರದು. ಇದಕ್ಕೆ ರಾಜಕೀಯ ಬದ್ಧತೆ, ಸಾಂವಿಧಾನಿಕ ಹೊಣೆಗಾರಿಕೆ ಮತ್ತು ಶಾಶ್ವತ ಸಾಂವಿಧಾನಿಕ ಸುಧಾರಣೆಯ ಅಗತ್ಯವಿದೆ.
ಕೇವಲ ಪ್ರಾತಿನಿಧ್ಯದ ಭರವಸೆ ನೀಡುವುದು ನಮ್ಮ ಉದ್ದೇಶವಲ್ಲ, ಬದಲಾಗಿ ಮುಂದಿನ ಪೀಳಿಗೆಗೆ ಘನತೆಯ ಬದುಕನ್ನು ಕಟ್ಟಿಕೊಳ್ಳಲು ಸೂಕ್ತ ಪ್ರಾತಿನಿಧ್ಯ ಹಾಗೂ ಸಮಾನ ಅವಕಾಶವನ್ನು ಭದ್ರಪಡಿಸುವುದಾಗಿದೆ ಎಂದು ಸಿದ್ದರಾಮಯ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
What did former CM Siddaramaiah say regarding the High Court order quashing the hike in SC/ST reservation?
Shivamogga, October 13: Former Chief Minister Siddaramaiah stated that the Karnataka High Court’s verdict quashing the decision to increase reservation for Scheduled Castes and Scheduled Tribes has dealt a blow to the aspirations of a dignified life for exploited communities that have been deprived of equal opportunities for generations. He issued a statement regarding this on October 13.

