ನಿರ್ಜನ ಪ್ರದೇಶದಲ್ಲಿ ನೀರಿನ ಗುಂಡಿಗೆ ಬಿದ್ದಿದ್ದ ಎಮ್ಮೆಗಳ ರಕ್ಷಣೆ!

ನಿರ್ಜನ ಪ್ರದೇಶದಲ್ಲಿ ನೀರಿನ ಗುಂಡಿಗೆ ಬಿದ್ದಿದ್ದ ಎಮ್ಮೆಗಳ ರಕ್ಷಣೆ!

ಶಿವಮೊಗ್ಗ, ಆ. 14: ಶಿವಮೊಗ್ಗ ನಗರದ ಹೊರವಲಯ ಸೋಮಿನಕೊಪ್ಪದ ನಿರ್ಜನ ಪ್ರದೇಶದಲ್ಲಿ ಕಳೆದ ಮೂರು ದಿನಗಳ ಹಿಂದೆ ನೀರಿನ ಗುಂಡಿಯೊಂದಕ್ಕೆ ಬಿದ್ದು, ಹೊರಬರಲಾಗದೆ ಸಂಕಷ್ಟ ಪಡುತ್ತಿದ್ದ ಎರಡು ಎಮ್ಮೆಗಳನ್ನು ಭಾನುವಾರ ರಕ್ಷಿಸಿದ ಘಟನೆ ನಡೆದಿದೆ.

ನಿರ್ಜನ ಪ್ರದೇಶದಲ್ಲಿ ನೀರಿನ ಗುಂಡಿಗೆ ಬಿದ್ದಿದ್ದ ಎಮ್ಮೆಗಳ ರಕ್ಷಣೆ!

ಸೋಮಿನಕೊಪ್ಪದ ಜಾನುವಾರು ಪಾಲಕರಾದ ಮುತಾಹೆರ್ ಇಕ್ಬಾಲ್ ಎಂಬುವರಿಗೆ ಈ ಎಮ್ಮೆಗಳು ಸೇರಿದ್ದಾಗಿವೆ. ಕಳೆದ ಮೂರು ದಿನಗಳ ಹಿಂದೆ ಎಂದಿನಂತೆ ಎಮ್ಮೆಗಳನ್ನು ಮೇಯಲು ಬಿಟ್ಟಿದ್ದರು.

ನಿರ್ಜನ ಪ್ರದೇಶದಲ್ಲಿ ನೀರಿನ ಗುಂಡಿಗೆ ಬಿದ್ದಿದ್ದ ಎಮ್ಮೆಗಳ ರಕ್ಷಣೆ!

ಆದರೆ ಇದರಲ್ಲಿ ಎರಡು ಎಮ್ಮೆಗಳು ಸುಮಾರು ಐದಾರು ಅಡಿ ಆಳದ ಗುಂಡಿಗೆ ಬಿದ್ದಿದ್ದವು. ಎಲ್ಲೆಡೆ ಹುಡುಕಿದರೂ ಎಮ್ಮೆಗಳ ಸುಳಿವು ಲಭ್ಯವಾಗಿರಲಿಲ್ಲ.

ಭಾನುವಾರ ಎಮ್ಮೆಗಳ ಹುಡುಕಾಟದಲ್ಲಿದ್ದ ಮುತಾಹೇರ್ ಇಕ್ಬಾಲ್ ರವರ ಪುತ್ರ ಶೇಕ್ ಅಯಾಜ್ ಅವರಿಗೆ, ನೀರಿನ ಗುಂಡಿಯಲ್ಲಿ ಎಮ್ಮೆಗಳು ಸಿಲುಕಿ ಬಿದ್ದಿರುವುದು ಗಮನಕ್ಕೆ ಬಂದಿದೆ.

ನಿರ್ಜನ ಪ್ರದೇಶದಲ್ಲಿ ನೀರಿನ ಗುಂಡಿಗೆ ಬಿದ್ದಿದ್ದ ಎಮ್ಮೆಗಳ ರಕ್ಷಣೆ!

ತಕ್ಷಣವೇ ಕುಟುಂಬ ಸದಸ್ಯರು ಎರಡು ಎಮ್ಮೆಗಳನ್ನು ಗುಂಡಿಯಿಂದ ಸುರಕ್ಷಿತವಾಗಿ ಹೊರ ತೆಗೆಯುವಲ್ಲಿ ಸಫಲರಾಗಿದ್ದಾರೆ.

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →