ದೇಶದ ಮೊಟ್ಟಮೊದಲ ಸೂರ್ಯ ಅಧ್ಯಯನದ ಆದಿತ್ಯಾ ಎಲ್ – 1 ಉಪಗ್ರಹದ ಯಶಸ್ವಿ ಉಡಾವಣೆ : ಇಸ್ರೋ ಸಂಸ್ಥೆಯ ಮತ್ತೊಂದು ಸಾಧನೆ!

ದೇಶದ ಮೊಟ್ಟಮೊಟದಲ ಸೂರ್ಯ ಅಧ್ಯಯನದ ಆದಿತ್ಯಾ ಎಲ್ - 1 ಉಪಗ್ರಹದ ಯಶಸ್ವಿ ಉಡಾವಣೆ : ಇಸ್ರೋ ಸಂಸ್ಥೆಯ ಮತ್ತೊಂದು ಸಾಧನೆ!

ಶ್ರೀಹರಿಕೋಟಾ ( ಆಂಧ್ರಪ್ರದೇಶ), ಸೆ. 2 : ಇತ್ತೀಚೆಗಷ್ಟೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡರ್ ನ್ನು ಯಶಸ್ವಿಯಾಗಿ ಇಳಿಸಿ ಇಡೀ ವಿಶ್ವದ ಮೆಚ್ಚುಗೆಗೆ ಪಾತ್ರವಾಗಿರುವ ಭಾರತದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸಂಸ್ಥೆಯು, ಇದೀಗ ದೇಶದ ಮೊಟ್ಟಮೊದಲ ಸೂರ್ಯ ಅಧ್ಯಯನ ಯೋಜನೆಯ ಆದಿತ್ಯಾ ಎಲ್ – 1 ಉಪಗ್ರಹವನ್ನು ಅತ್ಯಂತ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ದೇಶದ ಮೊಟ್ಟಮೊಟದಲ ಸೂರ್ಯ ಅಧ್ಯಯನದ ಆದಿತ್ಯಾ ಎಲ್ - 1 ಉಪಗ್ರಹದ ಯಶಸ್ವಿ ಉಡಾವಣೆ : ಇಸ್ರೋ ಸಂಸ್ಥೆಯ ಮತ್ತೊಂದು ಸಾಧನೆ!

ಶನಿವಾರ ಬೆಳಿಗ್ಗೆ 11 ಗಂಟೆ 50 ನಿಮಿಷಕ್ಕೆ ಸರಿಯಾಗಿ ಆಂಧ್ರಪ್ರದೇಶ ರಾಜ್ಯದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣೆ ಕೇಂದ್ರದ ಲಾಂಚ್ ಪ್ಯಾಡ್ ನಿಂದ ಉಪಗ್ರಹ ಉಡಾವಣೆಗೊಳಿಸಲಾಗಿದೆ. ಆದಿತ್ಯ ಎಲ್ – 1 ಭಾರತದ ಮೊಟ್ಟಮೊದಲ ಸೌರ ಬಾಹ್ಯಾಕಾಶ ವೀಕ್ಷಣಾಲಯವಾಗಿದೆ. ಈ ಉಪಗ್ರಹವನ್ನು ಇಸ್ರೋದ ಪಿಎಸ್ಎಲ್’ವಿ – ಸಿ57 ಉಡಾವಣಾ ವಾಹಕದ ಮೂಲಕ ಉಡಾವಣೆ ಮಾಡಲಾಗುತ್ತಿದೆ.

ದೇಶದ ಮೊಟ್ಟಮೊಟದಲ ಸೂರ್ಯ ಅಧ್ಯಯನದ ಆದಿತ್ಯಾ ಎಲ್ - 1 ಉಪಗ್ರಹದ ಯಶಸ್ವಿ ಉಡಾವಣೆ : ಇಸ್ರೋ ಸಂಸ್ಥೆಯ ಮತ್ತೊಂದು ಸಾಧನೆ!

ಆದಿತ್ಯ ಎಲ್ – 1 ಉಪಗ್ರಹವು ಸೂರ್ಯನ ವಿವರವಾದ ಅಧ್ಯಯನ ಮಾಡಲಿದೆ. ಸೂರ್ಯನು ಭೂಮಿಯಿಂದ 1.5 ಮಿಲಿಯನ್ ಕಿಮೀ ದೂರದಲ್ಲಿದ್ದು, ಈ ದೂರವನ್ನು ಆದಿತ್ಯಾ ಎಲ್ 1 ಉಪಗ್ರಹವು ಸುಮಾರು ನಾಲ್ಕು ತಿಂಗಳ ಅವಧಿಯಲ್ಲಿ ಕ್ರಮಿಸಿ ತನ್ನ ನಿಗದಿತ ಕಕ್ಷೆ ತಲುಪುವ ಸಾಧ್ಯತೆಯಿದೆ.

ದೇಶದ ಮೊಟ್ಟಮೊಟದಲ ಸೂರ್ಯ ಅಧ್ಯಯನದ ಆದಿತ್ಯಾ ಎಲ್ - 1 ಉಪಗ್ರಹದ ಯಶಸ್ವಿ ಉಡಾವಣೆ : ಇಸ್ರೋ ಸಂಸ್ಥೆಯ ಮತ್ತೊಂದು ಸಾಧನೆ!

ಉಪಗ್ರಹವು ಏಳು ವಿಭಿನ್ನ ಪೇಲೋಡ್ ಗಳನ್ನು ಕೊಂಡೊಯ್ದಿದೆ. ಸೂರ್ಯನ ಬೆಳಕು ವಿಶ್ಲೇಷಣೆ, ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳ ಅಳೆಯುವ ಪೆಲೋಡ್ ಗಳಾಗಿವೆ. ಒಂದು ಪೆಲೋಡ್ ಪ್ರತಿ ನಿಮಿಷಕ್ಕೆ ಸೂರ್ಯನ ಒಂದು ಪೋಟೋ ಕ್ಲಿಕ್ಕಿಸಲಿದೆ. 24 ಗಂಟೆಗಳ ಅವಧಿಯಲ್ಲಿ 1440 ಪೋಟೋ ಕ್ಲಿಕ್ಕಿಸಿ, ನಿಯಂತ್ರಣ ಕೇಂದ್ರಕ್ಕೆ ರವಾನಿಸುವ ಸಾಮರ್ಥ್ಯ ಹೊಂದಿದ್ದಾಗಿದೆ. ಮಿಕ್ಕ 6 ಪೆಲೋಡ್ ಗಳು ಇನ್ನಿತರ ವೈಜ್ಞಾನಿಕ ಸಂಶೋಧನೆ ನಡೆಸಲಿವೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *