ಶಿವಮೊಗ್ಗ, ಡಿ. 30: ಶಿವಮೊಗ್ಗ ನಗರದ ವೀರಭದ್ರ ಟಾಕೀಸ್ ಬಳಿ ನಿಲ್ಲಿಸಿದ್ದ ಈಚರ್ ಲಾರಿಯೊಂದರಲ್ಲಿ, ಸರಿಸುಮಾರು 30-40 ವರ್ಷ ವಯಸ್ಸಿನ ಪುರುಷನೋರ್ವನ ಮೃತದೇಹ ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಮೃತರ ಹೆಸರು, ವಿಳಾಸ, ವಾರಸುದಾರರ ಮಾಹಿತಿ ತಿಳಿದುಬಂದಿಲ್ಲ. ಸುಮಾರು 5.3 ಅಡಿ ಎತ್ತರ, ಸಾಧಾರಣ ಮೈಕಟ್ಟು ಹೊಂದಿದ್ದು ಶವವು ಭಾಗಶಃ ಕೊಳೆತು ಹೋಗಿರುವುದರಿಂದ ಮುಖದ ಚಹರೆ ಗುರುತು ಸಿಗುತ್ತಿಲ್ಲ.
ಉಳಿದಂತೆ ಮೃತರ ಮೈಮೇಲೆ ಮಾಸಲು ಬಣ್ಣದ ಟೀ ಶರ್ಟ್, ಕಪ್ಪು ಪ್ಯಾಂಟ್ ಧರಿಸಿರುವುದು ಕಂಡುಬಂದಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆ ದೂ.ಸಂ.: 08182-261415 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಸಬ್ ಇನ್ಸ್ ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

