4 walls of houses collapsed due to heavy rain in Shimoga! ಶಿವಮೊಗ್ಗದಲ್ಲಿ ಭಾರೀ ಮಳೆಗೆ 4 ಮನೆಗಳ ಗೋಡೆ ಕುಸಿತ!

ಶಿವಮೊಗ್ಗದಲ್ಲಿ ಭಾರೀ ಮಳೆಗೆ 4 ಮನೆಗಳ ಗೋಡೆ ಕುಸಿತ!

ಶಿವಮೊಗ್ಗ (shivamogga), ಜು. 18: ಶಿವಮೊಗ್ಗ ನಗರದಲ್ಲಿ ಮುಂಗಾರು ಮಳೆ (monsoon rain) ಮುಂದುವರಿದಿದೆ. ತಡರಾತ್ರಿಯಿಂದ ಧಾರಾಕಾರ ವರ್ಷಧಾರೆಯಾಗುತ್ತಿದೆ (heavy rainfall). ಈ ನಡುವೆ ನಗರದ ಹೊರವಲಯ ಪುರಲೆಯಲ್ಲಿ (purle) ನಾಲ್ಕು ಮನೆಗಳ ಗೋಡೆಗಳು ಗುರುವಾರ ಮುಂಜಾನೆ ಕುಸಿದು ಬಿದ್ದ (wall collapse of houses) ಘಟನೆ ನಡೆದಿದೆ.

‘ಅವಿನಾಶ್, ಚೌಡೇಶ, ರೂಪ ಚಂದ್ರಪ್ಪ, ರಘು ಎಂಬುವರಿಗೆ ಮನೆಗಳು (houses) ಸೇರಿದ್ದಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಮನೆಗಳಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ ಪೀಠೋಪಕರಣ, ಎಲೆಕ್ಟ್ರಾನಿಕ್ ಉಪಕರಣಗಳು (Furniture, electronic appliances) ಸೇರಿದಂತೆ ಮನೆಗಳಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ (Items damaged)’ ಎಂದು ಸ್ಥಳೀಯ ಮುಖಂಡರೂ ಆದ ವಕೀಲ ಶೋಭರಾಜ್ ಅವರು ಮಾಹಿತಿ ನೀಡಿದ್ದಾರೆ.

ಮನೆಗಳ ಗೋಡೆ ಕುಸಿತಕ್ಕೊಳಗಾದವರು ಕಡುಬಡವರಾಗಿದ್ದಾರೆ (poor). ಮನೆಗಳ ಗೋಡೆ ಕುಸಿತದಿಂದ ತೊಂದರೆಗೆ ಸಿಲುಕುವಂತಾಗಿದೆ. ತಕ್ಷಣವೇ ಜಿಲ್ಲಾಡಳಿತ (district administration) ಸಂತ್ರಸ್ತರಿಗೆ (victims) ನೆರವು ಕಲ್ಪಿಸಬೇಕು. ಪರಿಹಾರ ಬಿಡುಡೆ ಮಾಡುವುದರ ಜೊತೆಗೆ, ಸೂಕ್ತ ಆಶ್ರಯದ ವ್ಯವಸ್ಥೆ ಮಾಡಬೇಕು ಎಂದು ಶೋಭರಾಜ್ ಆಗ್ರಹಿಸಿದ್ದಾರೆ.

ಭೇಟಿ : ಮನೆಗಳ ಗೋಡೆ ಕುಸಿತ ಸ್ಥಳಕ್ಕೆ ಮುಖಂಡ ಕೆ.ಇ.ಕಾಂತೇಶ್ (k e kantesh) ಅವರು ಭೇಟಿಯಿತ್ತು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮುಖಂಡ ಶೋಭರಾಜ್, ತಿಮ್ಮೇಗೌಡ್ರು, ರಂಗಸ್ವಾಮಿ, ನವೀನ್ ಸೇರಿದಂತೆ ಮೊದಲಾದವರಿದ್ದರು.

heavy rain in shimoga district : bhadra dam 4 Linganamakki dam 3 feet water in a single day! ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆ : ಒಂದೇ ದಿನದಲ್ಲಿ ಭದ್ರಾ ಡ್ಯಾಂಗೆ 4 ಲಿಂಗನಮಕ್ಕಿಗೆ 3 ಅಡಿ ನೀರು! Previous post ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆ : ಒಂದೇ ದಿನದಲ್ಲಿ ಭದ್ರಾ ಡ್ಯಾಂಗೆ 4, ಲಿಂಗನಮಕ್ಕಿಗೆ 3 ಅಡಿ ನೀರು!
'High alert in Tunga riverside areas!' - Shimoga Corporation Commissioner Kavita Yogappanavar ‘ತುಂಗಾ ನದಿ ತೀರದ ಪ್ರದೇಶಗಳಲ್ಲಿ ಹೈ ಅಲರ್ಟ್!’ – ಶಿವಮೊಗ್ಗ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ Next post ‘ತುಂಗಾ ನದಿ ತೀರದ ಪ್ರದೇಶಗಳಲ್ಲಿ ಹೈ ಅಲರ್ಟ್!’ – ಶಿವಮೊಗ್ಗ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್