ನಿರುದ್ಯೋಗಿಗಳಿಗೆ ಮಾಸಾಶನ ನೀಡುವ ಯುವನಿಧಿ ಯೋಜನೆಗೆ ಆನ್‍ಲೈನ್ ಅರ್ಜಿ ಆಹ್ವಾನ

3000 Rs for Graduate 1500 Rs for Diploma Online Application Invitation for Youth Fund Scheme ಪದವೀಧರರಿಗೆ 3000 ರೂ ಡಿಪ್ಲೊಮಾ 1500 ರೂ ನೀಡುವ ಯುವನಿಧಿ ಯೋಜನೆಗೆ ಆನ್ಲೈನ್ ಅರ್ಜಿ ಆಹ್ವಾನ

ಶಿವಮೊಗ್ಗ (shivamogga), ಜು. 22: ಕರ್ನಾಟಕ ಸರ್ಕಾರದ ಯುವನಿಧಿ (yuvanidhi) ಯೋಜನೆಗೆ ನೋಂದಣೆ ಚಾಲ್ತಿಯಲ್ಲಿದ್ದು, ಅರ್ಹರು ಸೇವಾ ಸಿಂಧು ಪೋರ್ಟಲ್ (seva sindhu portal) ಮೂಲಕ ಆನ್‍ಲೈನ್ ನೋಂದಣಿ (online registration through seva sindhu portal) ಆಹ್ವಾನಿಸಿದೆ.

2022-23ನೇ ಹಾಗೂ ನಂತರದ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ (ವೃತ್ತಿಪರ ಸೇರಿದಂತೆ) ಹಾಗೂ ಯಾವುದೇ ಡಿಪ್ಲೊಮಾ (diploma) ಪಡೆದು ನಿರುದ್ಯೋಗಿಯಾಗಿರುವ (unemployed) ಅರ್ಹರು ಯುವನಿಧಿ ಯೋಜನೆಯ ಮೂಲಕ ಪ್ರತಿ ತಿಂಗಳು ರೂ. 3000/- (ಪದವೀಧರ ನಿರುದ್ಯೋಗಿಗಳು) ಹಾಗೂ ರೂ. 1500/- (ಡಿಪ್ಲೋಮಾ/diploma ಪಡೆದ ನಿರುದ್ಯೋಗಿಗಳು) ನೇರ ನಗದು ಬ್ಯಾಂಕ್ ಖಾತೆಗೆ (direct cash to bank account) ಜಮಾ ಮಾಡಲಾಗುವುದು. 

ಯುವನಿಧಿ ಯೋಜನೆಯ (yuvanidhi) ಫಲಾನುಭವಿಗಳು ಪ್ರತಿ ತಿಂಗಳು  ಗ್ರಾಮ ಒನ್, ಶಿವಮೊಗ್ಗ ಒನ್  ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ಲಾಗಿನ್ ಆಗಿ ಸ್ವಯಂ ಘೋಷಣೆ ನೀಡಬೇಕು.  ಸ್ವಯಂ ಘೋಷಣೆ ನೀಡದಿದ್ದಲ್ಲಿ ಆ ತಿಂಗಳು ನೇರ ನಗದು ಖಾತಗೆ ಜಮಾ ಆಗುವುದಿಲ್ಲ.

ಆದ್ದರಿಂದ ಫಲಾನುಭವಿಗಳು (beneficiaries) ತಪ್ಪದೇ ಸೇವಾಸಿಂಧು ಪೋರ್ಟಲ್‍ನಲ್ಲಿ ಆನ್‍ಲೈನ್ ಮೂಲಕ ಸ್ವಯಂ ಘೋಷಣೆ ಮಾಡುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ (employment officer) ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಸಾಗರ ರಸ್ತೆ, 2ನೇ ತಿರುವು, ಗುತ್ಯಪ್ಪ ಕಾಲೋನಿ ಶಿವಮೊಗ್ಗ (shimoga), ದೂ.ಸಂ.:08182-255293 ನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →