The building collapsed due to wind and rain: thousands of farm chickens were trapped! ಗಾಳಿ-ಮಳೆಗೆ ಕುಸಿದು ಬಿದ್ದ ಕಟ್ಟಡ : ಸಿಲುಕಿ ಬಿದ್ದ ಸಾವಿರಾರು ಫಾರಂ ಕೋಳಿಗಳು!

ಗಾಳಿ-ಮಳೆಗೆ ಕುಸಿದು ಬಿದ್ದ ಕಟ್ಟಡ : ಸಿಲುಕಿ ಬಿದ್ದ ಸಾವಿರಾರು ಫಾರಂ ಕೋಳಿಗಳು!

ಶಿವಮೊಗ್ಗ (shivamogga), ಜು. 26: ನಗರದ ಹೊರವಲಯ ಮೋಜಪ್ಪನ ಹೊಸೂರು ಗ್ರಾಮದಲ್ಲಿ ಗಾಳಿ – ಮಳೆಗೆ (rainfall) ಕೋಳಿ ಫಾರಂ ಕಟ್ಟಡವೊಂದು (Poultry farm building) ಕುಸಿದು ಬಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಇಮ್ತಿಯಾಜ್ ಅಹಮದ್ ಎಂಬುವರಿಗೆ ಈ ಕೋಳಿ ಫಾರಂ (poultry farm) ಸೇರಿದ್ದಾಗಿದೆ. ಸುಮಾರು 25 ಅಡಿ ಅಗಲ 250 ಅಡಿ ಉದ್ದದ ಕಟ್ಟಡ ಸಂಪೂರ್ಣ ಧರಾಶಾಹಿಯಾಗಿದೆ. ಸದರಿ ಕೋಳಿ ಫಾರಂನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಕಾರ್ಮಿಕರು ಕೂದಲೆಳೆ ಅಂತರದಲ್ಲಿ ಅನಾಹುತದಿಂದ ಪಾರಾಗಿದ್ಧಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

‘ಸದರಿ ಕಟ್ಟಡದಲ್ಲಿ ಸುಮಾರು 6 ಸಾವಿರ ಕೋಳಿಗಳ ಸಾಕಾಣೆ (Poultry farming) ಮಾಡಲಾಗಿತ್ತು. ಕಟ್ಟಡದ ಅವಶೇಷದಡಿ ಸಾವಿರಾರು ಕೋಳಿಗಳು ಸಿಲುಕಿ ಬಿದ್ದಿವೆ. ಇವುಗಳ ಸಂರಕ್ಷಣೆ ಕಾರ್ಯ ನಡೆಸಲಾಗುತ್ತಿದೆ. ಅಪಾರ ಪ್ರಮಾಣದ ಕೋಳಿಗಳು ಮೃತಪಟ್ಟಿವೆ. ಕಟ್ಟಡದ ವಸ್ತುಗಳೆಲ್ಲ ಹಾನಿಯಾಗಿದೆ.

ಕೋಳಿಗಳ ಬೆಳವಣಿಗೆಗೆ ಬಳಸುವ ಪರಿಕರಗಳು ಮಣ್ಣು ಪಾಲಾಗಿವೆ. ಸರಿಸುಮಾರು 15 ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿದೆ’ ಎಂದು ಕೋಳಿ ಫಾರಂ ಮಾಲೀಕರಾದ ಇಮ್ತಿಯಾಜ್ ಅಹ್ಮದ್ ಅವರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಕೋಟೆಗಂಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ದೂದ್ಯನಾಯ್ಕ್, ಗ್ರಾಮ ಲೆಕ್ಕಾಧಿಕಾರಿ ಪ್ರಭಾಕರ್, ಪಶು ಇಲಾಖೆ ವೈದ್ಯಾಧಿಕಾರ ಬಸವರಾಜ್ ಅವರು ಭೇಟಿಯಿತ್ತು ಪರಿಶೀಲನೆ ನಡೆಸಿದರು.

Sexual assault of a girl: 20 years rigorous imprisonment for two - fine! ಬಾಲಕಿಗೆ ಲೈಂಗಿಕ ದೌರ್ಜನ್ಯ : ಇಬ್ಬರಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ - ದಂಡ! Previous post ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ : ಇಬ್ಬರಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ!
Tribute to police personnel who saved three lives ಮೂರು ಜನರ ಜೀವ ಉಳಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಸನ್ಮಾನ Next post ಮೂರು ಜನರ ಜೀವ ಉಳಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಸನ್ಮಾನ