
ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಮಳೆಯ ಆರ್ಭಟ : ಚಕ್ರಾದಲ್ಲಿ ಅತ್ಯಧಿಕ 325 ಮಿ.ಮೀ. ಮಳೆ!
ಶಿವಮೊಗ್ಗ (shivamogga), ಜು. 27: ಜಿಲ್ಲೆಯ ಪಶ್ಚಿಮಘಟ್ಟ (western ghat) ಪ್ರದೇಶ ವ್ಯಾಪ್ತಿಗಳಲ್ಲಿ ಅಕ್ಷರಶಃ ವರ್ಷಧಾರೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ..! (heavy to heavy rainfall) ಹೌದು. ಕಡಿಮೆಯಾಗಿದ್ದ ಮಳೆಯ ತೀವ್ರತೆ ಮತ್ತೆ ಚುರುಕುಗೊಂಡಿದೆ. ಧಾರಾಕಾರ ವರ್ಷಧಾರೆಯಾಗುತ್ತಿದೆ. ಜನಜೀವನ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ.
ಹೊಸನಗರ ತಾಲೂಕಿನಲ್ಲಿ (hosanagara taluk) ಮಳೆ ಅಬ್ಬರ ಮುಂದುವರಿದಿದೆ. ಚಕ್ರಾ (chakra) ಪ್ರದೇಶದಲ್ಲಿ ಭಾರೀ ವರ್ಷಧಾರೆಯಾಗುತ್ತಿದ್ದು (rainfall), ಕಳೆದ 24 ಗಂಟೆ ಅವಧಿಯಲ್ಲಿ ಅತ್ಯದಿಕ 325 ಮಿಲಿ ಮೀಟರ್ (ಮಿ.ಮೀ. millimeter) ಮಳೆಯಾಗಿದೆ. ಇದು ಘಟ್ಟ ಪ್ರದೇಶದಲ್ಲಿನ ಮುಸಲಧಾರೆ (rain) ತೀವ್ರತೆಗೆ ಸಾಕ್ಷಿಯಾಗಿದೆ.
ಶನಿವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ, ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಘಟ್ಟ ಪ್ರದೇಶಗಳಾದ ಮಾಸ್ತಿಕಟ್ಟೆಯಲ್ಲಿ (masthikatte) 205 ಮಿ.ಮೀ., ಯಡೂರು (yadur) 200 ಮಿ.ಮೀ., ಮಾಣಿಯಲ್ಲಿ (mani) 185 ಮಿ.ಮೀ., ಸಾವೇಹಕ್ಲುವಿನಲ್ಲಿ (savehakklu) 139 ಮಿ.ಮೀ ವರ್ಷಧಾರೆಯಾಗಿದೆ.
ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಮುಂದುವರಿದಿರುವುದರಿಂದ, ಜಲಮೂಲಗಳ ನೀರಿನ ಹರಿವಿನಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ನದಿ (riever), ಕೆರೆಕಟ್ಟೆ, ಹಳ್ಳಕೊಳ್ಳಗಳು ಮೈದುಂಬಿ ಹರಿಯಲಾರಂಭಿಸಿವೆ.
ಜು. 27 ರಂದು ರಜೆ : ಭಾರೀ ಮಳೆ (heavy rainfall) ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜು. 27 ರ ಶನಿವಾರ ಹೊಸನಗರ, ಸಾಗರ, ತೀರ್ಥಹಳ್ಳಿ ಹಾಗೂ ಸೊರಬ ತಾಲೂಕು ವ್ಯಾಪ್ತಿಯ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ (announcement of holiday for schools and colleges) ಮಾಡಲಾಗಿದೆ.