Linganamakki Reservoir water level reaches 1807 feet: Second warning from KPCL! 1807 ಅಡಿಗೆ ತಲುಪಿದ ಲಿಂಗನಮಕ್ಕಿ ಜಲಾಶಯ ನೀರಿನ ಮಟ್ಟ : ಕೆಪಿಸಿಎಲ್ ನಿಂದ ಎರಡನೇ ವಾರ್ನಿಂಗ್!

1807 ಅಡಿಗೆ ತಲುಪಿದ ಲಿಂಗನಮಕ್ಕಿ ಜಲಾಶಯ ನೀರಿನ ಮಟ್ಟ : ಕೆಪಿಸಿಎಲ್ ನಿಂದ ಎರಡನೇ ವಾರ್ನಿಂಗ್!

ಶಿವಮೊಗ್ಗ, ಜು. 27: ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣದಿಂದ, ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ (hydro power generating station) ಲಿಂಗನಮಕ್ಕಿ ಜಲಾಶಯದ (linganamakki dam) ಒಳಹರಿವಿನಲ್ಲಿ ನಿರಂತರವಾಗಿ ಏರಿಕೆ ಕಂಡುಬರಲಾರಂಭಿಸಿದೆ. ಡ್ಯಾಂ ಭರ್ತಿಗೆ ಇನ್ನೂ 12 ಅಡಿ ನೀರು ಬೇಕಾಗಿದೆ.

ಜಲಾಶಯ ಗರಿಷ್ಠ ಮಟ್ಟಕ್ಕೆ (maximum level) ಬರುತ್ತಿರುವುದರಿಂದ, ಕೆಪಿಸಿಎಲ್ (karnataka power corporation limited) ಸಂಸ್ಥೆಯು ನದಿ ಪಾತ್ರದ ಜನರಿಗೆ  ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಿದೆ. ಎರಡನೇ ಹಂತದ ನೋಟೀಸ್ ಹೊರಡಿಸಿದೆ.

ಜು. 27 ರ ಶನಿವಾರದ ಮಾಹಿತಿಯಂತೆ, ಲಿಂಗನಮಕ್ಕಿ ಡ್ಯಾಂನ ಒಳಹರಿವು (inflow) 74,600 ಕ್ಯೂಸೆಕ್ ಗೆ ಏರಿಕೆಯಾಗಿದೆ. ನೀರಿನ ಮಟ್ಟ 1807 (ಗರಿಷ್ಠ ಮಟ್ಟ : 1819) ಅಡಿಯಿದೆ.

ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಹಾಗೂ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ (heavy to heavy rainfall) ಮುಂದುವರಿದಿರುವುದರಿಂದ, ಯಾವುದೇ ಸಂದರ್ಭದಲ್ಲಿ ಡ್ಯಾಂ ಗರಿಷ್ಠ ಮಟ್ಟ ತಲುಪಲಿದೆ. ಡ್ಯಾಂ ಭದ್ರತೆ ದೃಷ್ಟಿಯಿಂದ ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರಬಿಡಬೇಕಾಗುತ್ತದೆ (outflow).

ಈ ಹಿನ್ನೆಲೆಯಲ್ಲಿ ಅಣೆಕಟ್ಟಿಯ (dam) ಕೆಳದಂಡೆ ಹಾಗೂ ನದಿ ಪಾತ್ರದಲ್ಲಿ ವಾಸಿಸುತ್ತಿರುವ ನಾಗರೀಕರು ಎಚ್ಚರಿಕೆಯಿಂದಿರಬೇಕು. ನದಿಗೆ ಜಾನುವಾರುಗಳನ್ನು ಬಿಡಬಾರದು. ನದಿ ಪಾತ್ರದ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು. ಹಾಗೆಯೇ ಪ್ರವಾಸಿಗರು ಅನಗತ್ಯವಾಗಿ ನದಿಗೆ ಇಳಿಯಬಾರದು ಎಂದು ಕೆಪಿಸಿಎಲ್ (kpcl) ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Huge amount of water out of Tunga Dam! ತುಂಗಾ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಹೊರಕ್ಕೆ! Previous post ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿ ಭದ್ರಾ ಜಲಾಶಯ ಭರ್ತಿಗೆ ಕೇವಲ 8 ಅಡಿ ಬಾಕಿ..!
Huge amount of water out of Tunga Dam! ತುಂಗಾ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಹೊರಕ್ಕೆ! Next post ತುಂಗಾ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಹೊರಕ್ಕೆ!