fake galic made with cement ದಂಧೆಕೋರರ ಕರಾಮತ್ತು : ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ..!

cement garlic | ದಂಧೆಕೋರರ ಕರಾಮತ್ತು : ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ..!

ಮಹಾರಾಷ್ಟ್ರ (maharashtra) ಆ. 19: ಆಹಾರ ವಸ್ತುಗಳಲ್ಲಿ ಕಲಬೆರಕೆ (adulteration in food items) ತಡೆಗೆ ಸರ್ಕಾರಗಳು ಏನೆಲ್ಲ ಕ್ರಮಕೈಗೊಂಡರೂ, ಕಲಬೆರಕೆ (adulteration) ದಂಧೆಗೆ ಮಾತ್ರ ಕಡಿವಾಣ ಬಿದ್ದಿಲ್ಲ. ದುಬಾರಿ ಆಹಾರ ಪದಾರ್ಥಗಳಿಗೆ ಕಲಬೆರಕೆ ಮಾಡಿ ಮಾರಾಟ ಮಾಡುವುದು ಅವ್ಯಾಹತವಾಗಿ ಮುಂದುವರಿದಿದೆ.

ಇದಕ್ಕೆ ಹೊಸ ಸೇರ್ಪಡೆ ಎಂಬಂತೆ, ದಂಧೆಕೋರರು ಸಿಮೆಂಟ್ ನಿಂದ ಬೆಳ್ಳುಳ್ಳಿ ಪ್ರತಿಕೃತಿ ತಯಾರಿಸಿ (fake garlic made with cement), ಅದಕ್ಕೆ ಬಿಳಿ ಬಣ್ಣ ಹಚ್ಚಿ ಅಸಲಿ ಬೆಳ್ಳುಳ್ಳಿ (orginal garlic) ಜೊತೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ!

ಪ್ರಸ್ತುತ ಬೆಳ್ಳುಳ್ಳಿ (garlic) ಬೆಲೆ ಕೆಜಿಗೆ 300 ರಿಂದ 350 ರೂಪಾಯಿಗೆ ಏರಿಕೆಯಾಗಿದೆ. ಸದ್ಯಕ್ಕೆ ಬೆಲೆ ಇಳಿಕೆಯ ಲಕ್ಷಣಗಳಿಲ್ಲವಾಗಿದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ದಂಧೆಕೋರರು, ಅಸಲಿ ಬೆಳ್ಳುಳ್ಳಿಗೆ ಥೇಟ್ ಬೆಳ್ಳುಳ್ಳಿಯಂತೆ ಗೋಚರವಾಗುವ ಸಿಮೆಂಟ್ ನಿಂದ ತಯಾರಿಸಿದ ಬೆಳ್ಳುಳ್ಳಿಗಳನ್ನು ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದಾರೆ.

ಮಹಾರಾಷ್ಟ್ರದ (maharashtra) ಅಕೋಲಾ ಜಿಲ್ಲೆಯಲ್ಲಿ ಸಿಮೆಂಟ್ ಬೆಳ್ಳುಳ್ಳಿ ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ. ಇದಕ್ಕೆ ಸಂಬಂಧಿಸಿದ ವೀಡಿಯೋ (video) ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (viral) ಆಗಿದೆ.

ನಕಲಿ ಸಿಮೆಂಟ್ ಬೆಳ್ಳುಳ್ಳಿಗಳಿಂದ ಹೆಚ್ಚು ತೂಕ ಬರುತ್ತದೆ. ಇದರಿಂದ ಸಾಕಷ್ಟು ಲಾಭವಾಗಲಿದೆ ಎಂಬ ದುರುದ್ದೇಶದಿಂದ ಅಸಲಿ ಬೆಳ್ಳುಳ್ಳಿಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಮಹಾರಾಷ್ಟ್ರದ ಅಕೋಲಾದಲ್ಲಿ (akola) ಮಾರಾಟಕ್ಕಿಟ್ಟಿದ್ದ ನೈಜ ಬೆಳ್ಳುಳ್ಳಿಯಲ್ಲಿ ನಕಲಿ ಸಿಮೆಂಟ್ ಬೆಳ್ಳುಳ್ಳಿಗಳು ಕೂಡ ಪತ್ತೆಯಾಗಿವೆ. ಗ್ರಾಹಕರಿಗೆ ಅಸಲಿ – ನಕಲಿ ಬೆಳ್ಳುಳ್ಳಿ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಮನೆಗೆ ಕೊಂಡೊಯ್ದು ಬಳಕೆ ಮುಂದಾದಗಲೇ ವ್ಯತ್ಯಾಸ ಗೋಚರವಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Lake water entered the fields in Shimoga's Bommanakatte! ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ಗದ್ದೆಗಳಿಗೆ ನುಗ್ಗಿದ ಕೆರೆ ನೀರು! Previous post shimoga | ಶಿವಮೊಗ್ಗ – ಬೊಮ್ಮನಕಟ್ಟೆಯಲ್ಲಿ ಗದ್ದೆಗಳಿಗೆ ನುಗ್ಗಿದ ಕೆರೆ ನೀರು!
siddaramaiah | The CM filed an application to the High Court questioning the prosecution Can't be finished politically : Siddu | ಪ್ರಾಸಿಕ್ಯೂಷನ್ ಪ್ರಶ್ನಿಸಿ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿದ ಸಿಎಂ | ರಾಜಕೀಯವಾಗಿ ಮುಗಿಸಲು ಆಗಲ್ಲ : ಸಿದ್ದು ಗುಡುಗು! Next post siddaramaiah | ಪ್ರಾಸಿಕ್ಯೂಷನ್ ಪ್ರಶ್ನಿಸಿ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿದ ಸಿಎಂ | ‘ರಾಜಕೀಯವಾಗಿ ಮುಗಿಸಲು ಆಗಲ್ಲ’ : ಸಿದ್ದು ಗುಡುಗು! |