
actor darshan case | ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ ಕುರಿತಂತೆ ಸಿಎಂ ಹೇಳಿದ್ದೇನು?
ಬೆಂಗಳೂರು (bengaluru), ಆ. 27: ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ (actor darshan) ರನ್ನು ಬಳ್ಳಾರಿ ಜೈಲಿ (bellary jail) ಗೆ ಸ್ಥಳಾಂತರಿಸುವ ಬಗ್ಗೆ, ಪೊಲೀಸ್ ಇಲಾಖೆ (police dept) ತೀರ್ಮಾನ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (cm siddaramaiah) ಅವರು ತಿಳಿಸಿದರು.
ಅವರು ಇಂದು ಬೆಂಗಳೂರಿನಲ್ಲಿ (bengaluru) ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲ್ (parappana agrahara jail) ನಲ್ಲಿ ನಟ ದರ್ಶನ್ (actor darshan) ಗೆ, ವಿಶೇಷ ಸೌಲಭ್ಯ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ 9 ಜನರನ್ನು ಅಮಾನತ್ತು (suspended) ಮಾಡಲಾಗಿದೆ ಎಂದು ಹೇಳಿದ್ದಾರೆ.
ಪ್ರಕರಣಕ್ಕೆಸಂಬಂಧಿಸಿದಂತೆ ತನಿಖೆ (enquiry) ಕೈಗೊಂಡಿದ್ದು, ವರದಿ ಆಧಾರದ ಮೇಲೆ ತಪ್ಪೆಸಗಿರುವ ಇನ್ನಷ್ಟು ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ವಶಕ್ಕೆ ಸಾಧ್ಯತೆ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ (chitradurga renukaswami murder case) ದಲ್ಲಿ ನಟ ದರ್ಶನ್ (darshan) ಹಾಗೂ ಸಹಚರರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದಾರೆ.
ಇತ್ತೀಚೆಗೆ ದರ್ಶನ್ ಅವರು ಜೈಲ್ ನಲ್ಲಿ ರೌಡಿ ಶೀಟರ್ ಗಳೊಂದಿಗೆ ಟೀ ಕುಡಿಯುತ್ತಾ, ಸಿಗರೇಟ್ ಸೇದುತ್ತಿರುವ ಪೋಟೋವೊಂದು ವೈರಲ್ (darshan jail photo) ಆಗಿತ್ತು. ನಂತರ ದರ್ಶನ್ ಅವರು ಮೊಬೈಲ್ ಪೋನ್ (video call) ಮೂಲಕ, ವೀಡಿಯೋ ಕಾಲ್ ನಲ್ಲಿ ವ್ಯಕ್ತಿಯೋರ್ವರೊಂದಿಗೆ ಮಾತನಾಡಿದ್ದ ವೀಡಿಯೋ (video) ಕೂಡ ಹೊರ ಬಂದಿತ್ತು.
ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿತ್ತು. ಗೃಹ ಮಂತ್ರಿ (home minister) ಪರಮೇಶ್ವರ್ ಅವರು ಜೈಲ್ (parappana jail) ಗೆ ಭೇಟಿಯಿತ್ತು ಪರಿಶೀಲಿಸಿದ್ದರು. ಕರ್ತವ್ಯಲೋಪದ ಆರೋಪದ ಮೇರೆಗೆ 9 ಅಧಿಕಾರಿಗಳನ್ನು ಅಮಾನತ್ತುಗೊಳಿಸಲಾಗಿತ್ತು. ತನಿಖೆಗೆ ಆದೇಶಿಸಿದ್ದರು.
ಈ ಕುರಿತಂತೆ ದರ್ಶನ್ (darshan) ವಿರುದ್ದ ಪ್ರಕರಣ ದಾಖಲಾಗಿದೆ. ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.