Sagara | Sagar - Sigandur Bridge Inauguration When? What did the MP say? ಸಿಗಂದೂರು ಸೇತುವೆ ಉದ್ಘಾಟನೆ ಯಾವಾಗ? ಸಂಸದರು ಹೇಳಿದ್ದೇನು?

ಸಿಗಂದೂರು ಸೇತುವೆ ಉದ್ಘಾಟನೆ ಯಾವಾಗ? ಸಂಸದರು ಹೇಳಿದ್ದೇನು?

ಸಾಗರ (sagara), ಸೆ. 12: ಸಾಗರ ತಾಲೂಕಿನ ಶರಾವತಿ ಹಿನ್ನೀರು (sharavati back water) ಪ್ರದೇಶದ ಅಂಬಾರಗೊಡ್ಲು – ಕಳಸವಳ್ಳಿ ನಡುವೆ ನಿರ್ಮಿಸಲಾಗುತ್ತಿರುವ ಸೇತುವೆ (siganduru bridge) ಕಾಮಗಾರಿ ಬಿರುಸುಗೊಂಡಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಜನ – ವಾಹನಗಳ ಸಂಚಾರಕ್ಕೆ ಮುಕ್ತಗೊಳ್ಳುವ ಸಾಧ್ಯತೆಯಿದೆ.

ಈ ನಡುವೆ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (mp b y raghavendra) ಅವರು ಕಳೆದ ಮಂಗಳವಾರ ಸೇತುವೆ ಕಾಮಗಾರಿ ವೀಕ್ಷಣೆ ನಡೆಸಿದ್ದಾರೆ. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಕ್ಕೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.

ಅಂಬಾರಗೊಡ್ಲು – ಕಳಸವಳ್ಳಿ (ambaragodlu – kalasavalli) ಸೇತುವೆಯು ಅತ್ಯಂತ ಮಹತ್ವದ್ದಾಗಿದ್ದು, ಐತಿಹಾಸಿಕ ಮೈಲುಗಲ್ಲಾಗಿದೆ. ಈ ಭಾಗದ ನಾಗರೀಕರ ಹಲವು ದಶಕಗಳ ಬೇಡಿಕೆಯಾಗಿದೆ. ಶರಾವತಿ ಮುಳುಗಡೆ ಸಂತ್ರಸ್ತರ ತ್ಯಾಗಕ್ಕೆ ಪ್ರತಿಫಲ ಸಿಕ್ಕಂತಾಗುತ್ತದೆ ಎಂದು ಸಂಸದರು ತಿಳಿಸಿದ್ದಾರೆ.

ಸೇತುವೆ (bridge) ನಿರ್ಮಾಣದಿಂದ ಸಿಗಂದೂರು ಕ್ಷೇತ್ರಕ್ಕೆ (siganduru temple) ಆಗಮಿಸುವ ಭಕ್ತರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ಭಾಗದ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಲಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಈ ಭಾಗದ ಗ್ರಾಮಗಳ ಜನರ ಸುಲಭ ಸಂಚಾರಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಕಾಮಗಾರಿ ಬಿರುಸು : ಅಂಬಾರಗೊಡ್ಲು – ಕಳಸವಳ್ಳಿ (ambaragodlu – kalasavalli) ನಡುವೆ ಸರಿಸುಮಾರು 423 ಕೋಟಿ ರೂ. ವೆಚ್ಚದಲ್ಲಿ, 2. 25 ಕಿ.ಮೀ. ಉದ್ದದ ಕೇಬಲ್ ಆಧಾರಿತ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಕಳೆದ ವರ್ಷವೇ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ ನಾನಾ ಕಾರಣಗಳಿಂದ ಕಾಮಗಾರಿ ವಿಳಂಬವಾಗಿತ್ತು.

shimoga | Shimoga : Health inspector passed away ಶಿವಮೊಗ್ಗ : ಆರೋಗ್ಯ ನಿರೀಕ್ಷಣಾಧಿಕಾರಿ ವಿಧಿವಶ Previous post shimoga | ಶಿವಮೊಗ್ಗ : ಆರೋಗ್ಯ ನಿರೀಕ್ಷಣಾಧಿಕಾರಿ ವಿಧಿವಶ
shimoga | Shimoga: Ragigudda Ganapati's pre-dissolution procession police serpagaval! ಶಿವಮೊಗ್ಗ : ರಾಗಿಗುಡ್ಡ ಗಣಪತಿಗಳ ವಿಸರ್ಜನಾ ಪೂರ್ವ ಮೆರವಣಿಗೆಗೆ ಪೊಲೀಸ್ ಸರ್ಪಗಾವಲು! Next post shimoga | ಶಿವಮೊಗ್ಗ : ರಾಗಿಗುಡ್ಡ ಗಣಪತಿಗಳ ವಿಸರ್ಜನಾ ಪೂರ್ವ ಮೆರವಣಿಗೆಗೆ ಪೊಲೀಸ್ ಸರ್ಪಗಾವಲು!