
shimoga | hindu mahasabha ganapati | ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಶಾಂತಿಯುತ : ನಿಟ್ಟುಸಿರು ಬಿಟ್ಟ ಪೊಲೀಸ್ ಇಲಾಖೆ!
ಶಿವಮೊಗ್ಗ (shivamogga), ಸೆ. 18: ಅಪಾರ ಜನಸ್ತೋಮದ ನಡುವೆ, ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ((hindu mahasabha ganapati procession) ಶಾಂತಿಯುತವಾಗಿ ಪೂರ್ಣಗೊಂಡಿದೆ. ಇದು ಪೊಲೀಸ್ ಇಲಾಖೆಯನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ.
ಸೆ. 17 ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ, ಭೀಮೇಶ್ವರ ದೇವಾಲಯ (bheemeshwara temple) ಆವರಣದಿಂದ ಗಣಪತಿ ಮೆರವಣಿಗೆ ಆರಂಭಗೊಂಡಿತ್ತು. ಸೆ. 18 ರ ಮುಂಜಾನೆ ಸರಿಸುಮಾರು 4. 15 ಗಂಟೆಗೆ ಭೀಮೇಶ್ವರ ದೇವಾಲಯ ಸಮೀಪದ ತುಂಗಾ ನದಿ (tunga river) ಯಲ್ಲಿ ಗಣೇಶಮೂರ್ತಿಯ ವಿಸರ್ಜನೆ ಮಾಡಲಾಗಿದೆ.
ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆಗೆ, ಪೊಲೀಸ್ ಇಲಾಖೆ (police department) ಯ ಅಭೂತಪೂರ್ವ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು. ವ್ಯಾಪಕ ಕಟ್ಟೆಚ್ಚರವಹಿಸಿತ್ತು. ಭದ್ರತಾ ಕಾರ್ಯಕ್ಕೆ ಕ್ರಿಪ್ರ ಕಾರ್ಯಾಚರಣೆ ಪಡೆ ಮಾತ್ರವಲ್ಲದೆ, ಹೊರ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸರನ್ನು ಬಳಕೆ ಮಾಡಲಾಗಿತ್ತು. ಸಾವಿರಾರು ಪೊಲೀಸರನ್ನು ನಿಯೋಜಿಸಿತ್ತು.
ಹಾಗೆಯೇ ಸುಗಮ – ಶಾಂತಿಯುತ ಮೆರವಣಿಗೆಗಾಗಿ ಕಳೆದ ಹಲವು ದಿನಗಳ ಕಾಲ, ಶಿವಮೊಗ್ಗ ನಗರದಲ್ಲಿ ಶಾಂತಿ ಸಮಿತಿ ಸಭೆ ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರ ಪಥ ಸಂಚಲನ ಕೂಡ ನಡೆಸಲಾಗಿತ್ತು.
ಪೊಲೀಸ್ ಇಲಾಖೆಯ ಅವಿರತ ಶ್ರಮದ ಕಾರಣದಿಂದ, ಭಾರೀ ಜನಸ್ತೋಮದ ನಡುವೆಯೂ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ವೇಳೆ ಯಾವುದೇ ಗೊಂದಲ – ಗಡಿಬಿಡಿಗೆ ಆಸ್ಪದವಾಗಿಲ್ಲ. ಶಾಂತಿಯುತವಾಗಿ ನಡೆಯುವಂತಾಯಿತು.
ಎಸ್ಪಿ ಸಂತಸ : ಗಣಪತಿ ಮೆರವಣಿಗೆಯು ಶಾಂತಿಯುತವಾಗಿ ಪೂರ್ಣಗೊಂಡಿರುವುದಕ್ಕೆ, ಜಿಲ್ಲಾ ರಕ್ಷಣಾಧಿಕಾರಿ (shimoga sp) ಜಿ.ಕೆ.ಮಿಥುನ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ‘ಮೆರವಣಿಗೆ ಬಂದೋಬಸ್ತ್ ನಲ್ಲಿ ಭಾಗಿಯಾದ ಎಲ್ಲ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳಿಗೆ ಹಾಗೂ ಇದಕ್ಕೆ ಸಹಕಾರ ನೀಡಿದ ಸಮಾಜದ ಎಲ್ಲ ವರ್ಗದವರಿಗೆ ಧನ್ಯವಾದ ಅರ್ಪಿಸುವುದಾಗಿ’ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಸೆ. 18 ರಂದು ವ್ಯಾಟ್ಸಾಪ್ ಸಂದೇಶ (whatsapp message) ದಲ್ಲಿ ತಿಳಿಸಿದ್ದಾರೆ.