shimoga | Shimoga: Eye check-up camp successfully held at Gadikoppa ಶಿವಮೊಗ್ಗ : ಗಾಡಿಕೊಪ್ಪದಲ್ಲಿ ಯಶಸ್ವಿಯಾಗಿ ನಡೆದ ಕಣ್ಣಿನ ತಪಾಸಣೆ ಶಿಬಿರ

shimoga | ಶಿವಮೊಗ್ಗ : ಗಾಡಿಕೊಪ್ಪದಲ್ಲಿ ಯಶಸ್ವಿಯಾಗಿ ನಡೆದ ಕಣ್ಣಿನ ತಪಾಸಣೆ ಶಿಬಿರ

ಶಿವಮೊಗ್ಗ (shivamogga), ಸೆ. 22: ಶಿವಮೊಗ್ಗ ನಗರದ ಗಾಡಿಕೊಪ್ಪದ (gadikoppa) ಸರ್ಕಾರಿ ಶಾಲೆ ಆವರಣದಲ್ಲಿ ಸೆ. 22 ರ ಭಾನುವಾರ ನಾಗರೀಕರಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರ (free eye test camp) ಹಮ್ಮಿಕೊಳ್ಳಲಾಗಿತ್ತು.

ಚಂದ್ರೋದಯ ಸ್ವಸಹಾಯ ಸಂಘ ಹಾಗೂ ಉದಯ ರವಿ ಮಹಿಳಾ ಸ್ವಸಹಾಯ ಸಂಘ ಮತ್ತು ಉಡುಪಿಯ ನೇತ್ರ ಜ್ಯೋತಿ ಚಾರಿಟಬಲ್ ಟ್ರಸ್ಟ್, ಮಲ್ನಾಡ್ ಪ್ರಸಾದ್ ನೇತ್ರಾಲಯ, ಶಿವಮೊಗ್ಗದ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ತಪಾಸಣಾ ಶಿಬಿರ ನಡೆಯಿತು. ಸ್ಥಳೀಯರು ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳ ನೂರಾರು ಜನರು ಶಿಬಿರದ ಸದುಪಯೋಗ ಪಡೆದುಕೊಂಡರು.

ಚಂದ್ರೋದಯ ಸ್ವಸಹಾಯ ಸಂಘ ಹಾಗೂ ಉದಯ ರವಿ ಮಹಿಳಾ ಸ್ವಸಹಾಯ ಸಂಘಗಳು ನಿಯಮಿತವಾಗಿ ನಾಗರೀಕರಿಗೆ ಅನುಕೂಲವಾಗುವ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿವೆ. ಸಂಘಗಳ ಜನಪರ ಕಾರ್ಯಚಟುವಟಿಕೆಗಳು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

bhadravati minor girl missing case | The body of a young woman was found in Bhadra canal! ಭದ್ರಾವತಿ – ಯುವತಿ ನಾಪತ್ತೆ ಪ್ರಕರಣ : ಭದ್ರಾ ನಾಲೆಯಲ್ಲಿ ಪತ್ತೆಯಾದ ಯುವತಿಯ ಶವ! Previous post bhadravati minor girl missing case | ಭದ್ರಾ ನಾಲೆಯಲ್ಲಿ ಪತ್ತೆಯಾದ ಯುವತಿಯ ಶವ!
'Do not neglect the disease of alzheimer'sdisease' : Dr. Advice from Kiran SK ‘ಮರೆವಿನ ಕಾಯಿಲೆಯ ಬಗ್ಗೆ ನಿರ್ಲಕ್ಷ್ಯ ಬೇಡ’ : ಡಾ. ಕಿರಣ್ ಎಸ್ ಕೆ ಸಲಹೆ Next post shimoga | health news | ‘ಮರೆವಿನ ಕಾಯಿಲೆಯ ಬಗ್ಗೆ ನಿರ್ಲಕ್ಷ್ಯ ಬೇಡ’ : ಡಾ. ಕಿರಣ್ ಎಸ್ ಕೆ ಸಲಹೆ