ಶಿವಮೊಗ್ಗ (shivamogga), ಅ. 9: ಶಿವಮೊಗ್ಗ ತಾಲೂಕಿನ ಯಡವಾಲ – ಹಿಟ್ಟೂರು ನಡುವಿನ ರಸ್ತೆಯಲ್ಲಿ, ಕೆರೆ ನೀರಿನಲ್ಲಿ ಬೈಕ್ ಸಮೇತ ಚಾಲಕ ಕೊಚ್ಚಿ ಹೋದ ಘಟನಾ ಸ್ಥಳಕ್ಕೆ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಅ. 9 ರ ಸಂಜೆ ಭೇಟಿಯಿತ್ತು ಪರಿಶೀಲನೆ ನಡೆಸಿದರು.
ಈ ವೇಳೆ ಸ್ಥಳೀಯ ಗ್ರಾಮಸ್ಥರು ರಸ್ತೆ ಅವ್ಯವಸ್ಥೆ ಕುರಿತಂತೆ ಸಂಸದರ ಗಮನ ಸೆಳೆದರು. ಭಾರೀ ಮಳೆಯಾದ ವೇಳೆ ರಸ್ತೆ ಮೇಲೆಯೇ ಹಳ್ಳದ ನೀರು ಹರಿದು ಹೋಗುತ್ತಿದ್ದು, ಜನ – ವಾಹನ ಸಂಚಾರ ದುಸ್ತರವಾಗುತ್ತಿದೆ. ಅಪಾಯಗಳು ಸಂಭವಿಸುತ್ತಿವೆ ಎಂದು ಅಹವಾಲು ತೋಡಿಕೊಂಡರು.
ಸ್ಥಳದಿಂದಲೇ ಮೊಬೈಲ್ ಫೋನ್ ಮೂಲಕ ಪಿಡಬ್ಲ್ಯೂಡಿ ಇಲಾಖೆ ಎಂಜಿನಿಯರ್ ಗಳ ಜೊತೆ ಮಾತನಾಡಿದ ಸಂಸದರು, ಸದರಿ ಸ್ಥಳದಲ್ಲಿನ ರಸ್ತೆ ಅವ್ಯವಸ್ಥೆ ಸರಿಪಡಿಸಬೇಕು. ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ಸಾಂತ್ವನ : ನೀರಿನಲ್ಲಿ ಕೊಚ್ಚಿ ಹೋದ ಇಕ್ಬಾಲ್ ಕುಟುಂಬದವರಿಗೆ ಸಂಸದರು ಸಾಂತ್ವನ ಹೇಳಿದರು. ಆಡಳಿತದಿಂದ ಎಲ್ಲ ರೀತಿಯ ಅಗತ್ಯ ನೆರವಿನ ಹಸ್ತ ಕಲ್ಪಿಸುವ ಭರವಸೆ ನೀಡಿದರು. ಸ್ಥಳದಲ್ಲಿ ನಡೆಯುತ್ತಿದ್ದ ಅಗ್ನಿಶಾಮಕ ದಳದ ಶೋಧ ಕಾರ್ಯಾಚರಣೆ ವೀಕ್ಷಿಸಿ, ಮಾಹಿತಿ ಪಡೆದುಕೊಂಡರು.
ಕೊಚ್ಚಿ ಹೋದ ಬೈಕ್ ಸವಾರ : ಅ. 8 ರ ರಾತ್ರಿ ಬಿದ್ದ ಭಾರೀ ಮಳೆಯಿಂದ ಶಿವಮೊಗ್ಗ ತಾಲೂಕಿನ ಯಡವಾಲ – ಹಿಟ್ಟೂರು ನಡುವಿನ ರಸ್ತೆಯ ಮೇಲೆ ಕೆರೆ ನೀರು ಹರಿಯುತ್ತಿತ್ತು. ಅ. 9 ರ ಮಧ್ಯಾಹ್ನ ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ನಿವಾಸಿ ಇಕ್ಬಾಲ್ (40) ಎಂಬುವರು ಜಲಾವೃತವಾಗಿದ್ದ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ, ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದರು.
On the road between Yadawala and Hittur in Shimoga taluk, Lok Sabha Member B. Y. Raghavendra visited the scene where the driver along with his bike was swept away in the lake water in the evening and conducted an inspection.

