Shimoga - Bike rider who was washed away in the pit: Continued search operation! ಶಿವಮೊಗ್ಗ - ಹಳ್ಳದಲ್ಲಿ ಕೊಚ್ಚಿ ಹೋದ ಬೈಕ್ ಸವಾರ : ಮುಂದುವರಿದ ಶೋಧ ಕಾರ್ಯಾಚರಣೆ!

shimoga | ಶಿವಮೊಗ್ಗ – ಹಳ್ಳದಲ್ಲಿ ಕೊಚ್ಚಿ ಹೋದ ಬೈಕ್ ಸವಾರ : ಮುಂದುವರಿದ ಶೋಧ ಕಾರ್ಯಾಚರಣೆ!

ಶಿವಮೊಗ್ಗ (shivamogga), ಅ. 9: ಶಿವಮೊಗ್ಗ ತಾಲೂಕಿನ ಯಡವಾಲ – ಹಿಟ್ಟೂರು ನಡುವಿನ ರಸ್ತೆಯಲ್ಲಿ, ಕೆರೆ ನೀರಿನಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ಚಾಲಕನ ಶೋಧ ಕಾರ್ಯಾಚರಣೆಯನ್ನು ಅಗ್ನಿಶಾಮಕ ದಳ ಮುಂದುವರಿಸಿದ್ದು, ಇಲ್ಲಿಯವರೆಗೂ ಚಾಲಕನ ಸುಳಿವು ಪತ್ತೆಯಾಗಿಲ್ಲ.

ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ನಿವಾಸಿ ಇಕ್ಬಾಲ್ (40) ನೀರಿನಲ್ಲಿ ಕೊಚ್ಚಿ ಹೋದ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಅ. 9 ರ ಬುಧವಾರ ಮಧ್ಯಾಹ್ನ ಅವರು ಯಡವಾಲ ಕಡೆಯಿಂದ ತಮ್ಮ ಊರಿಗೆ ಬೈಕ್ ನಲ್ಲಿ ತೆರಳುತ್ತಿದ್ದರು.

ಈ ವೇಳೆ ಯಡವಾಲ – ಹಿಟ್ಟೂರು ನಡುವಿನ ರಸ್ತೆ ಮೇಲೆ, ಭಾರೀ ಪ್ರಮಾಣದ ನೀರು ಹರಿಯುತ್ತಿತ್ತು. ಇದರ ನಡುವೆಯೇ ರಸ್ತೆ ದಾಟಲು ಮುಂದಾದ ವೇಳೆ, ನೀರಿನ ಸೆಳೆತಕ್ಕೆ ಸಿಲುಕಿ ಇಕ್ಬಾಲ್ ಅವರು ಕೊಚ್ಚಿ ಹೋಗಿದ್ದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ತಂಡವು ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಸಂಜೆಯವರೆಗೂ ಅವರ ಸುಳಿವು ಲಭ್ಯವಾಗಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಭಾರೀ ಮಳೆ : ಅ. 8 ರ ತಡರಾತ್ರಿವರೆಗೂ ಬಿದ್ದ ಭಾರೀ ಮಳೆಗೆ ಶಿವಮೊಗ್ಗ ತಾಲೂಕಿನ ಹಲವೆಡೆ ಕೆರೆಕಟ್ಟೆಗಳು ಉಕ್ಕಿ ಹರಿಯುತ್ತಿವೆ. ತೋಟ, ಗದ್ದೆಗಳಿಗೂ ನೀರು ನುಗ್ಗಿತ್ತು. ಸಾಕಷ್ಟು ಪ್ರಮಾಣದ ಹಾನಿಯುಂಟಾದ ವರದಿಗಳು ಬಂದಿವೆ.  

On the road between Yaduru and Hittur in Shimoga taluk, the fire brigade continued the search operation for the driver who was washed away along with the bike in the lake water, but till now the clue of the driver has not been found. Iqbal (40), a resident of Chinnikatte of Nyamati taluk, was identified as the bike rider who got swept away in the water. On Wednesday afternoon, he was going from Yadawala to his hometown on a bike.

Shivamogga: Heavy rain accompanied by thunder and lightning! ಶಿವಮೊಗ್ಗ: ಗುಡುಗು ಬಿರುಗಾಳಿ ಸಹಿತ ಭಾರೀ ಮಳೆ! Previous post shimoga rain | ಶಿವಮೊಗ್ಗ : ಹಿಂಗಾರು ಮಳೆ ಆರ್ಭಟ – ಯೆಲ್ಲೋ ಅಲರ್ಟ್ ಮುನ್ಸೂಚನೆ!
On the road between Yadawala and Hittur in Shimoga taluk, Lok Sabha Member B. Y. Raghavendra visited the scene where the driver along with his bike was swept away in the lake water in the evening and conducted an inspection. Next post shimoga | ಶಿವಮೊಗ್ಗ – ಸಂಸದ ಬಿ.ವೈ.ರಾಘವೇಂದ್ರ ಭೇಟಿ : ಅಧಿಕಾರಿಗಳಿಗೆ ಖಡಕ್ ಸೂಚನೆ!