shimoga | Shimoga: India - New Zealand Test cricket observer Sadananda H.S. Recruitment ಶಿವಮೊಗ್ಗ : ಭಾರತ – ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್ ವೀಕ್ಷಕರಾಗಿ ಸದಾನಂದ ಹೆಚ್.ಎಸ್. ನೇಮಕ

shimoga | ಶಿವಮೊಗ್ಗ : ಭಾರತ – ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್ ವೀಕ್ಷಕರಾಗಿ ಸದಾನಂದ ಹೆಚ್.ಎಸ್. ನೇಮಕ

ಶಿವಮೊಗ್ಗ (shivamogga), ಅ. 14: ಪುಣೆಯಲ್ಲಿ ಅ. 24 ರಿಂದ 28 ರವರೆಗೆ ನಡೆಯಲಿರುವ, ಭಾರತ – ನ್ಯೂಜಿಲೆಂಡ್ ತಂಡದ ನಡುವಿನ 2 ಟೆಸ್ಟ್ ಪಂದ್ಯದ ವೀಕ್ಷಕರನ್ನಾಗಿ, ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ (ksca) ಶಿವಮೊಗ್ಗ ವಲಯದ ಸಂಚಾಲಕರಾದ ಸದಾನಂದ ಹೆಚ್. ಎಸ್. ಅವರನ್ನು ನೇಮಿಸಲಾಗಿದೆ.

ಈ ಸಂಬಂಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆದೇಶ ಹೊರಡಿಸಿದೆ. ಸದಾನಂದ ಹೆಚ್ ಎಸ್ ಅವರು ಕ್ರಿಕೆಟ್ ಬೆಳವಣಿಗೆಗೆ ಸಲ್ಲಿಸಿದ ಅವಿಸ್ಮರಣೀಯ ಸೇವೆ ಗುರುತಿಸಿ, ಭಾರತ – ನ್ಯೂಜಿಲೆಂಡ್ ನಡುವಿನ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ವೀಕ್ಷಕರನ್ನಾಗಿ ನೇಮಿಸಲಾಗಿದೆ.

‘ಸದಾನಂದ ಹೆಚ್ ಎಸ್ ಅವರು ಕ್ರಿಕೆಟ್ ಆಟಗಾರರಾಗಿದ್ದರು.  ಹಾಗೆಯೇ ಕೆ.ಎಸ್.ಸಿ.ಎ ನಲ್ಲಿ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದರು. ಜೆಎನ್ಎನ್’ಸಿಇ ಕಾಲೇಜ್ ನಲ್ಲಿ ದೈಹಿಕ ಶಿಕ್ಷಣ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ಸದ್ಯ ಕೆ.ಎಸ್.ಸಿ.ಎ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ವಲಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕ್ರಿಕೆಟ್ ಕ್ಷೇತ್ರದಲ್ಲಿನ ಅವರ ಸೇವೆ ಗುರುತಿಸಿ ಬಿಸಿಸಿಐ (bcci) ಸಂಸ್ಥೆಯು, ಭಾರತ – ನ್ಯೂಜಿಲೆಂಡ್ ತಂಡದ ನಡುವೆ ನಡೆಯಲಿರುವ 2 ಟೆಸ್ಟ್ ಪಂದ್ಯದ ವೀಕ್ಷಕರನ್ನಾಗಿ ನೇಮಿಸಿರುವುದು ನಿಜಕ್ಕೂ ಅಭಿನಂದನೀಯ‘ ಎಂದು ಮಾಜಿ ಕಾರ್ಪೋರೇಟರ್ ಐಡಿಯಲ್ ಗೋಪಿ (ideal gopi) ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Karnataka State Cricket Academy Shimoga Zone Coordinator Sadananda HS has been appointed as the observer for the 2nd Test match between India and New Zealand to be held in Pune.

Shimoga - Contaminated drinking water : What is the serious allegation of Hitr Raksha Forum? ಶಿವಮೊಗ್ಗ – ಕಲುಷಿತ ಕುಡಿಯುವ ನೀರು ಪೂರೈಕೆ : ಹಿತರಕ್ಷಣಾ ವೇದಿಕೆಯ ಗಂಭೀರ ಆರೋಪವೇನು? Previous post shimoga | ಶಿವಮೊಗ್ಗ – ಕಲುಷಿತ ಕುಡಿಯುವ ನೀರು : ಹಿತರಕ್ಷಣಾ ವೇದಿಕೆಯ ಗಂಭೀರ ಆರೋಪವೇನು?
shimoga rain | Heavy rain with thunderstorms in many places of Shimoga city and taluk! Next post shimoga rain | ಶಿವಮೊಗ್ಗ : ಬೆಳ್ಳಂಬೆಳಿಗ್ಗೆ ಹಿಂಗಾರು ಮಳೆ ಅಬ್ಬರ..!