shimoga rain | Heavy rain with thunderstorms in many places of Shimoga city and taluk!

shimoga rain | ಶಿವಮೊಗ್ಗ : ಬೆಳ್ಳಂಬೆಳಿಗ್ಗೆ ಹಿಂಗಾರು ಮಳೆ ಅಬ್ಬರ..!

ಶಿವಮೊಗ್ಗ (shivamogga), ಅ. 15: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ, ಕಳೆದ ಕೆಲ ದಿನಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಹಿಂಗಾರು ಮಳೆ ಚುರುಕುಗೊಂಡಿದೆ. ಹಲವೆಡೆ ಧಾರಾಕಾರ ವರ್ಷಧಾರೆಯಾಗುತ್ತಿದೆ. ಇದರಿಂದ ಕೆರೆಕಟ್ಟೆಗಳು ಮತ್ತೆ ಕೋಡಿ ಬಿದ್ದು ಹರಿಯಲಾರಂಭಿಸಿದೆ.

ಈ ನಡುವೆ ಶಿವಮೊಗ್ಗ ನಗರದಲ್ಲಿ ಅ. 15 ರ ಮಂಗಳವಾರ ಮುಂಜಾನೆಯಿಂದ ನಿರಂತರ ಮಳೆಯಾಗುತ್ತಿದೆ. ಆಗಾಗ್ಗೆ ಭಾರೀ ಮಳೆ ಸುರಿಯುತ್ತಿದೆ.  ಇದರಿಂದ ಬೆಳಿಗ್ಗೆಯ ಕೆಲಸಕಾರ್ಯಗಳಿಗೆ ತೆರಳುವ ನಾಗರೀಕರಿಗೆ ತೀವ್ರ ಅನಾನುಕೂಲವಾಗಿದೆ.

ಶಿವಮೊಗ್ಗ ತಾಲೂಕಿನ ಹಲವೆಡೆಯು ಬೆಳಿಗ್ಗೆಯಿಂದ ವ್ಯಾಪಕ ವರ್ಷಧಾರೆಯಾಗುತ್ತಿರುವ ವರದಿಗಳು ಬಂದಿವೆ. ಈಗಾಗಲೇ ಮುಂಗಾರು ಮಳೆ ವೇಳೆ ಬಿದ್ದ ಧಾರಾಕಾರ ಮಳೆಗೆ, ಕೆರೆಕಟ್ಟೆಗಳು ಭರ್ತಿಯಾಗಿದ್ದವು. ಇದೀಗ ಹಿಂಗಾರು ಅಬ್ಬರಕ್ಕೆ ಮತ್ತೆ ಕೆರೆಕಟ್ಟೆಗಳು ಗರಿಷ್ಠ ಮಟ್ಟ ತಲುಪಿ, ಕೋಡಿ ಬಿದ್ದು ಹರಿಯಲಾರಂಭಿಸಿವೆ.

ಮುನ್ಸೂಚನೆ : ಮತ್ತೊಂದೆಡೆ, ಹವಾಮಾನ ಇಲಾಖೆಯು ಬುಧವಾರದಿಂದ ಮತ್ತೆ ಭಾರೀ ಮಳೆ ಮುಂದುವರಿಯುವ ಮುನ್ಸೂಚನೆ ನೀಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅ. 18 ರಂದು ಧಾರಾಕಾರ ವರ್ಷಧಾರೆ ಸಾಧ್ಯತೆಯಿದೆ ಎಂದು ತಿಳಿಸಿದೆ. ಈ ಸಂಬಂಧ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

ರೈತರಿಗೆ ಸಂಕಷ್ಟ : ಪ್ರಸ್ತುತ ಮಳೆಯು ರೈತರಿಗೆ ಕಭೀ ಖುಷಿ, ಕಭೀ ಗಮ್ ಎನ್ನುವಂತಾಗಿದೆ. ಭತ್ತದ ಬೆಳೆಗೆ ಮಳೆ ವರವಾಗಿ ಪರಿಣಮಿಸಿದೆ. ಆದರೆ ಈಗಾಗಲೇ ಕಟಾವಿಗೆ ಬಂದಿರುವ ಮೆಕ್ಕೆಜೋಳ ಸೇರಿದಂತೆ ಮತ್ತೀತರ ಬೆಳೆಗಳಿಗೆ ಹೊರೆಯಾಗಿದೆ. ಬೆಳೆ ಹಾಳಾಗುವ ಆತಂಕದಲ್ಲಿ ರೈತರಿದ್ದಾರೆ.

As a result of the drop in air pressure in the Arabian Sea, post monsoon rains have intensified in Shimoga district for the past few days. It is becoming torrential in many places. Due to this, the lakes have started flowing again. Meanwhile, it has been raining continuously since Tuesday morning in Shimoga city. Frequent heavy rains. This has caused severe inconvenience to the citizens going to their morning work.

shimoga | Shimoga: India - New Zealand Test cricket observer Sadananda H.S. Recruitment ಶಿವಮೊಗ್ಗ : ಭಾರತ – ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್ ವೀಕ್ಷಕರಾಗಿ ಸದಾನಂದ ಹೆಚ್.ಎಸ್. ನೇಮಕ Previous post shimoga | ಶಿವಮೊಗ್ಗ : ಭಾರತ – ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್ ವೀಕ್ಷಕರಾಗಿ ಸದಾನಂದ ಹೆಚ್.ಎಸ್. ನೇಮಕ
Job fair on February 24 in Shimoga city: Reputed companies participate shimoga | ಶಿವಮೊಗ್ಗ ನಗರದಲ್ಲಿ ಫೆ. 24 ರಂದು ಉದ್ಯೋಗ ಮೇಳ : ಪ್ರತಿಷ್ಠಿತ ಕಂಪನಿಗಳು ಭಾಗಿ Next post bengaluru job fair | ಅ. 20 ಕ್ಕೆ ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ