shimoga | Shimoga : MLA Sharada Pooryanaik Khadak warning to DDPI! ಶಿವಮೊಗ್ಗ : ಡಿಡಿಪಿಐಗೆ ಶಾಸಕಿ ಶಾರದಾ ಪೂರ್ಯಾನಾಯ್ಕ್ ಖಡಕ್ ವಾರ್ನಿಂಗ್!

shimoga | ಶಿವಮೊಗ್ಗ : ಡಿಡಿಪಿಐಗೆ ಶಾಸಕಿ ಶಾರದಾ ಪೂರ್ಯನಾಯ್ಕ್ ಖಡಕ್ ವಾರ್ನಿಂಗ್!

ಶಿವಮೊಗ್ಗ (shivamogga), ನ. 30: ಸರ್ಕಾರಿ ಶಾಲೆಯಿಂದ ಶಿಕ್ಷಕರೊಬ್ಬರ ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ, ಶಾಸಕಿ ಶಾರದಾ ಪೂರ್ಯನಾಯ್ಕ್ ಅವರು ನ. 30 ರ ಶನಿವಾರ ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಕಚೇರಿ ಆವರಣದಲ್ಲಿಯೇ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಡಿಡಿಪಿಐ) ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.  

ಇದೇ ವೇಳೆ ಗ್ರಾಮಸ್ಥರು ಕೂಡ ಡಿಡಿಪಿಐ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಶಿಕ್ಷಕರ ವರ್ಗಾವಣೆ ರದ್ದುಗೊಳಿಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಕಾರಣವೇನು? : ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಮ್ಮೆಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಸುಮಾರು 82 ಮಕ್ಕಳು ಅಭ್ಯಾಸ  ನಡೆಸುತ್ತಿದ್ದಾರೆ. ಮೂವರು ಶಿಕ್ಷಕರಿದ್ದರು. ಇತ್ತೀಚೆಗೆ ಸದರಿ ಶಾಲೆಯ ಶಿಕ್ಷಕರೋರ್ವರನ್ನು ದಿಢೀರ್ ವರ್ಗಾವಣೆಗೊಳಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಿದೆ. ಶಿಕ್ಷಕರ ವರ್ಗಾವಣೆ ರದ್ಧುಗೊಳಿಸುವಂತೆ ಮನವಿ ಮಾಡಿದ ಹೊರತಾಗಿಯೂ ಶಿಕ್ಷಣ ಇಲಾಖೆ ಕ್ರಮಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶಾಸಕಿ ಶಾರದಾ ಪೂರ್ಯನಾಯ್ಕ್ ಅವರ ಮೊರೆ ಹೋಗಿದ್ದರು.

ನ. 30 ರಂದು ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಆಯೋಜಿತವಾಗಿದ್ದ ಕೆಡಿಪಿ ಸಭೆಯಲ್ಲಿ ಭಾಗಿಯಾಗಲು ಆಗಮಿಸಿದ್ದ ಶಾರದಾ ಪೂರ್ಯನಾಯ್ಕ್ ಅವರು ಕಚೇರಿ ಆವರಣದಲ್ಲಿ ಎದುರಾದ ಡಿಡಿಪಿಐ ಅವರಿಗೆ ಎಮ್ಮೆಹಟ್ಟಿ ಸರ್ಕಾರಿ ಶಾಲೆ ಶಿಕ್ಷಕರ ವರ್ಗಾವಣೆ ಕುರಿತಂತೆ ಪ್ರಶ್ನಿಸಿದರು.

ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಮಕ್ಕಳಿಗೆ ಅನಾನುಕೂಲವಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕು. ವಿಳಂಬಕ್ಕೆ ಆಸ್ಪದವಾಗದಂತೆ ಅಗತ್ಯ ಶಿಕ್ಷಕರ ನಿಯೋಜನೆ ಮಾಡಬೇಕು ಎಂದು ಖಡಕ್ ಸೂಚನೆ ನೀಡಿದರು.

ಇದೇ ವೇಳೆ ಶಾಸಕರ ಜೊತೆಗಿದ್ದ ಎಮ್ಮೆಹಟ್ಟಿ ಗ್ರಾಮಸ್ಥರು ಕೂಡ ಶಾಲೆಗೆ ಅಗತ್ಯ ಶಿಕ್ಷಕರ ನಿಯೋಜಿಸಿ ಶಾಲೆ ಉಳಿಸಬೇಕು ಎಂದು ಡಿಡಿಪಿಐ, ಬಿಇಓಗೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಮ್ಮೆಹಟ್ಟಿ ಗ್ರಾಮದ ನಿವಾಸಿಗಳಾದ ವೈ ಎನ್ ಕೃಷ್ಣಪ್ಪ, ಬಸವರಾಜ್, ಹನುಮಂತ, ಮಲ್ಲೇಶಪ್ಪ, ಹರೀಶ್, ಶಂಕರ್, ರಾಜು, ಎಲ್ಲಪ್ಪ, ತಾರಾ, ಶೃತಿ, ಶ್ವೇತಾ ಸೇರಿದಂತೆ ಮೊದಲಾದವರಿದ್ದರು.

Regarding the issue of transfer of a teacher from a government school, an incident took place on Saturday where MLA Sharada Pooryanaik expressed his displeasure against the Deputy Director of Public Education Department (DDPI) at Shimoga Zilla Panchayat office premises.

Shimoga: Barbaric murder of rowdy in broad daylight! Previous post shimoga | ಶಿವಮೊಗ್ಗ : ಹಾಡಹಗಲೇ ರೌಡಿಯ ಬರ್ಬರ ಕೊಲೆ!
Adhere to High Command's decision – Minister Madhu Bangarappa ಹೈಕಮಾಂಡ್ ನಿರ್ಧಾರಕ್ಕೆ ಬದ್ಧ – ಸಚಿವ ಮಧು ಬಂಗಾರಪ್ಪ Next post madhu bangarappa | ‘ಹೈಕಮಾಂಡ್ ನಿರ್ಧಾರಕ್ಕೆ ಬದ್ಧ’ – ಸಚಿವ ಮಧು ಬಂಗಾರಪ್ಪ