ಶಿವಮೊಗ್ಗ, ಮೇ 19: ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಕೆ ಮಾಡುವುದಾಗಿ, ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆ ವೇಳೆ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಇದೀಗ ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಾರಂಭಿಸಿದೆ. ಈ ನಡುವೆ ರಾಜ್ಯದ ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ವಿವಿಧೆಡೆ ವಿದ್ಯುತ್ ಬಿಲ್ ಪಾವತಿಗೆ ಕೆಲ ನಾಗರೀಕರು ನಿರಾಕರಿಸುತ್ತಿದ್ದಾರೆ. ಕೆಲವೆಡೆ ಮೀಟರ್ ರೀಡರ್ ಗಳನ್ನು ಹಳ್ಳಿಗಳ ಒಳಗೆ ಗ್ರಾಮಸ್ಥರು ಬಿಟ್ಟುಕೊಳ್ಳುತ್ತಿಲ್ಲ ಎಂಬ ವರದಿಗಳು ಬರುತ್ತಿವೆ. ಇದೀಗ ಶಿವಮೊಗ್ಗ ಜಿಲ್ಲೆಯ ಕೆಲ ಗ್ರಾಮಗಳ ಗ್ರಾಮಸ್ಥರು ಕೂಡ, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ವಿದ್ಯುತ್ ಬಿಲ್ ಏಕೆ ಕೊಡಬೇಕು?’ ಎಂದು ಮೆಸ್ಕಾಂ ಸಿಬ್ಬಂದಿಗಳನ್ನು ಪ್ರಶ್ನಿಸುತ್ತಿರುವ ಮಾಹಿತಿಗಳು ಕೇಳಿಬರಲಾರಂಭಿಸಿದೆ.

ಕಾಂಗ್ರೆಸ್ ಅಧಿಕಾರಕ್ಕೆ – ವಿದ್ಯುತ್ ಬಿಲ್ ಪಾವತಿ : ನಾಗರೀಕರ ಪ್ರಶ್ನೆಗಳ ಸುರಿಮಳೆಗೆ ಮೆಸ್ಕಾಂ ಸಿಬ್ಬಂದಿಗಳು ಸುಸ್ತೋ ಸುಸ್ತು!

ಶಿವಮೊಗ್ಗ, ಮೇ 19: ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಕೆ ಮಾಡುವುದಾಗಿ, ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆ ವೇಳೆ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಇದೀಗ ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಾರಂಭಿಸಿದೆ.

ಈ ನಡುವೆ ರಾಜ್ಯದ ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ವಿವಿಧೆಡೆ ವಿದ್ಯುತ್ ಬಿಲ್ ಪಾವತಿಗೆ ಕೆಲ ನಾಗರೀಕರು ನಿರಾಕರಿಸುತ್ತಿದ್ದಾರೆ. ಕೆಲವೆಡೆ ಮೀಟರ್ ರೀಡರ್ ಗಳನ್ನು ಹಳ್ಳಿಗಳ ಒಳಗೆ ಗ್ರಾಮಸ್ಥರು ಬಿಟ್ಟುಕೊಳ್ಳುತ್ತಿಲ್ಲ ಎಂಬ ವರದಿಗಳು ಬರುತ್ತಿವೆ.

ಕಾಂಗ್ರೆಸ್ ಅಧಿಕಾರಕ್ಕೆ – ವಿದ್ಯುತ್ ಬಿಲ್ ಪಾವತಿ : ನಾಗರೀಕರ ಪ್ರಶ್ನೆಗಳ ಸುರಿಮಳೆಗೆ ಮೆಸ್ಕಾಂ ಸಿಬ್ಬಂದಿಗಳು ಸುಸ್ತೋ ಸುಸ್ತು! Read More
ಊಟದ ವಿಚಾರಕ್ಕೆ ನಡೆಯಿತು ಡಬ್ಬಲ್ ಮರ್ಡರ್..!

ಊಟದ ವಿಚಾರಕ್ಕೆ ನಡೆಯಿತು ಡಬ್ಬಲ್ ಮರ್ಡರ್..!

ತೀರ್ಥಹಳ್ಳಿ, ಮೇ 18: ತೀರ್ಥಹಳ್ಳಿಯಲ್ಲಿ ನಡೆದ ಕೂಲಿ ಕಾರ್ಮಿಕರಿಬ್ಬರ ಡಬ್ಬಲ್ ಮರ್ಡರ್ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಊಟದ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಮಿಕರಲ್ಲಿ ಉಂಟಾದ ಗಲಾಟೆಯೇ, ಹತ್ಯೆಗೆ ಕಾರಣವಾಗಿರುವ ಅಂಶ ಬೆಳಕಿಗೆ ಬಂದಿದೆ!

ದಾವಣಗೆರೆ ಜಿಲ್ಲೆಯ ರಾಜಣ್ಣ (58) ಹತ್ಯೆ ಆರೋಪಿಯಾಗಿದ್ದಾನೆ. ಬೀರೇಶ್ (35) ಹಾಗೂ ಮಂಜುನಾಥ್ (46) ಕೊಲೆಗೀಡಾದ ಕೂಲಿ ಕಾರ್ಮಿಕರಾಗಿದ್ದಾರೆ. ಇವರೆಲ್ಲರು ದಾವಣಗೆರೆಯವರಾಗಿದ್ದಾರೆ. ಟೈಲ್ಸ್ ಕೆಲಸ ಮಾಡುವುದಕ್ಕಾಗಿ ತೀರ್ಥಹಳ್ಳಿಗೆ ಆಗಮಿಸಿದ್ದರು.

ಊಟದ ವಿಚಾರಕ್ಕೆ ನಡೆಯಿತು ಡಬ್ಬಲ್ ಮರ್ಡರ್..! Read More
‘ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ’ : ಸಿದ್ದರಾಮಯ್ಯ ಹೇಳಿಕೆ

‘ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ’ : ಸಿದ್ದರಾಮಯ್ಯ ಹೇಳಿಕೆ

ಬೆಂಗಳೂರು, ಮೇ 18: ‘ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ’ ಎಂದು ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.

ಗುರುವಾರ ಮಧ್ಯಾಹ್ನ ಸಿದ್ದರಾಮಯ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಸಂದೇಶ ಹಾಕಿದ್ದಾರೆ. ‘ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಜೊತೆಗೆ, ‘ನಮ್ಮ ಎಲ್ಲ ಗ್ಯಾರೆಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ’ ಎಂದು ಟ್ವಿಟರ್ ಸಂದೇಶದಲ್ಲಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ಭರವಸೆ ನೀಡಿದ್ದಾರೆ.

‘ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ’ : ಸಿದ್ದರಾಮಯ್ಯ ಹೇಳಿಕೆ Read More
ಶಿವಮೊಗ್ಗ, ಮೇ 18: ರಾತ್ರಿ ವೇಳೆ ನಿರ್ಜನ ಪ್ರದೇಶಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಹಾಗೂ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪದ ಮೇರೆಗೆ, ಪೊಲೀಸರು 11 ಜನರನ್ನು ವಶಕ್ಕೆ ಪಡೆದ ಘಟನೆ ಗುರುವಾರ ರಾತ್ರಿ ಶಿವಮೊಗ್ಗ ನಗರದಲ್ಲಿ ನಡೆದಿದೆ. ತುಂಗಾ ನಗರ ಠಾಣೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಠಾಣಾ ವ್ಯಾಪ್ತಿಯ ಸೂಳೇಬೈಲು, ಮದಾರಿಪಾಳ್ಯ, ಎಂ.ಆರ್.ಎಸ್. ವೃತ್ತ, ಪ್ರಿಯಾಂಕ ಲೇಔಟ್, ವಡ್ಡಿನಕೊಪ್ಪ ಸುತ್ತಮುತ್ತಲಿನ ಸ್ಥಳಗಳಲ್ಲಿ ವಿಶೇಷ ಗಸ್ತು ನಡೆಸಲಾಗಿದೆ. ಒಟ್ಟಾರೆ 11 ಜನರನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದಾರೆ. ಸದರಿ ವ್ಯಕ್ತಿಗಳ ಪೂರ್ವಾಪರ ಪರಿಶೀಲಿಸಿದ್ದಾರೆ. ಜೊತೆಗೆ 8 ಲಘು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ನಿರ್ಜನ ಪ್ರದೇಶಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರು ಪೊಲೀಸ್ ವಶಕ್ಕೆ!

ಶಿವಮೊಗ್ಗ, ಮೇ 18: ರಾತ್ರಿ ವೇಳೆ ನಿರ್ಜನ ಪ್ರದೇಶಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಹಾಗೂ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪದ ಮೇರೆಗೆ, ಪೊಲೀಸರು 11 ಜನರನ್ನು ವಶಕ್ಕೆ ಪಡೆದ ಘಟನೆ ಗುರುವಾರ ರಾತ್ರಿ ಶಿವಮೊಗ್ಗ ನಗರದಲ್ಲಿ ನಡೆದಿದೆ.

ತುಂಗಾ ನಗರ ಠಾಣೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಠಾಣಾ ವ್ಯಾಪ್ತಿಯ ಸೂಳೇಬೈಲು, ಮದಾರಿಪಾಳ್ಯ, ಎಂ.ಆರ್.ಎಸ್. ವೃತ್ತ, ಪ್ರಿಯಾಂಕ ಲೇಔಟ್, ವಡ್ಡಿನಕೊಪ್ಪ ಸುತ್ತಮುತ್ತಲಿನ ಸ್ಥಳಗಳಲ್ಲಿ ವಿಶೇಷ ಗಸ್ತು ನಡೆಸಲಾಗಿದೆ.

ಒಟ್ಟಾರೆ 11 ಜನರನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದಾರೆ. ಸದರಿ ವ್ಯಕ್ತಿಗಳ ಪೂರ್ವಾಪರ ಪರಿಶೀಲಿಸಿದ್ದಾರೆ. ಜೊತೆಗೆ 8 ಲಘು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ನಿರ್ಜನ ಪ್ರದೇಶಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರು ಪೊಲೀಸ್ ವಶಕ್ಕೆ! Read More
ತೀರ್ಥಹಳ್ಳಿಯಲ್ಲಿ ಡಬ್ಬಲ್ ಮರ್ಡರ್ : ಕೂಲಿಕಾರ್ಮಿಕರಿಬ್ಬರ ಬರ್ಬರ ಹತ್ಯೆ!

ತೀರ್ಥಹಳ್ಳಿಯಲ್ಲಿ ಡಬ್ಬಲ್ ಮರ್ಡರ್ : ಕೂಲಿ ಕಾರ್ಮಿಕರಿಬ್ಬರ ಬರ್ಬರ ಹತ್ಯೆ!

ತೀರ್ಥಹಳ್ಳಿ, ಮೇ 18: ತೀರ್ಥಹಳ್ಳಿ ಪಟ್ಟಣದಲ್ಲಿ ಕೂಲಿಕಾರ್ಮಿಕರಿಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಗುರುವಾರ   ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.

ದಾವಣಗೆರೆ ಜಿಲ್ಲೆಯ ಮಂಜಪ್ಪ (45) ಹಾಗೂ ಬೀರಪ್ಪ (46) ಕೊಲೆಗೀಡಾದ ಕೂಲಿ ಕಾರ್ಮಿಕರೆಂದು ಗುರುತಿಸಲಾಗಿದೆ. ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿಯ ವಿಠ್ಠಲನಗರಕ್ಕೆ ಹೋಗುವ ರಸ್ತೆಯಲ್ಲಿನ ಪುತ್ತಿಗೆ ಮಠ ಸಮೀಪದ, ನಿರ್ಮಾಣ ಹಂತದಲ್ಲಿರುವ ವಿಶ್ವಕರ್ಮ ಸಮುದಾಯ ಭವನದೊಳಗೆ ಕೊಲೆ ನಡೆದಿದೆ.

ತೀರ್ಥಹಳ್ಳಿಯಲ್ಲಿ ಡಬ್ಬಲ್ ಮರ್ಡರ್ : ಕೂಲಿ ಕಾರ್ಮಿಕರಿಬ್ಬರ ಬರ್ಬರ ಹತ್ಯೆ! Read More
ದೆಹಲಿ/ಬೆಂಗಳೂರು, ಮೇ 17: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ತಯಾರಿಯಲ್ಲಿರುವ ಕಾಂಗ್ರೆಸ್ ಪಕ್ಷದಲ್ಲಿ, ಮುಖ್ಯಮಂತ್ರಿ ಆಯ್ಕೆ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ. ಟಿ-20 ಕ್ರಿಕೆಟ್ ಮ್ಯಾಚ್ ನಷ್ಟೆ ರೋಚಕತೆ ಕೆರಳಿಸಿದ್ದು, ಕ್ಷಣಕ್ಕೊಂದು ತಿರುವು ಪಡೆದುಕೊಳ್ಳಲಾರಂಭಿಸಿದೆ! ಸಿಎಂ ಹುದ್ದೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ತಮ್ಮ ನಿಲುವಿಗೆ ಅಂಟಿಕೊಂಡಿರುವುದು, ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ವರಿಷ್ಠರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಜೊತೆ ಪ್ರತ್ಯೇಕವಾಗಿ ಹಲವು ಸುತ್ತಿನ ಸಭೆ ನಡೆಸಿದ್ದಾರೆ. ಅಭಿಪ್ರಾಯ ಆಲಿಸಿದ್ದಾರೆ. ಜೊತೆಗೆ ಅಧಿಕಾರ ಹಂಚಿಕೆ ಸೂತ್ರಗಳನ್ನು ಮುಂದಿಟ್ಟಿದ್ದಾರೆ. ‘ಮೊದಲ ಅವಧಿಯ ಸಿಎಂ ಹುದ್ದೆ ತಮಗೆ ನೀಡಬೇಕು..’ ಎಂದು ಈ ಇಬ್ಬರೂ ನಾಯಕರು ಪಟ್ಟು ಹಿಡಿದಿದ್ದಾರೆ. ಯಾರೊಬ್ಬರು ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿಲ್ಲ. ಇದು ವರಿಷ್ಠರಿಗೆ ಕಗ್ಗಂಟಾಗಿ ಪರಿಣಮಿಸುವಂತೆ ಮಾಡಿದೆ.

ಯಾರಾಗಲಿದ್ದಾರೆ ಸಿಎಂ..? : ಸಿದ್ದರಾಮಯ್ಯ – ಡಿ.ಕೆ.ಶಿವಕುಮಾರ್ ನಡುವೆ ಮುಂದುವರಿದ ಹಗ್ಗಜಗ್ಗಾಟ!

ದೆಹಲಿ/ಬೆಂಗಳೂರು, ಮೇ 17: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ತಯಾರಿಯಲ್ಲಿರುವ ಕಾಂಗ್ರೆಸ್ ಪಕ್ಷದಲ್ಲಿ, ಮುಖ್ಯಮಂತ್ರಿ ಆಯ್ಕೆ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ. ಟಿ-20 ಕ್ರಿಕೆಟ್ ಮ್ಯಾಚ್ ನಷ್ಟೆ ರೋಚಕತೆ ಕೆರಳಿಸಿದ್ದು, ಕ್ಷಣಕ್ಕೊಂದು ತಿರುವು ಪಡೆದುಕೊಳ್ಳಲಾರಂಭಿಸಿದೆ!

ಸಿಎಂ ಹುದ್ದೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ತಮ್ಮ ನಿಲುವಿಗೆ ಅಂಟಿಕೊಂಡಿರುವುದು, ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.

ಯಾರಾಗಲಿದ್ದಾರೆ ಸಿಎಂ..? : ಸಿದ್ದರಾಮಯ್ಯ – ಡಿ.ಕೆ.ಶಿವಕುಮಾರ್ ನಡುವೆ ಮುಂದುವರಿದ ಹಗ್ಗಜಗ್ಗಾಟ! Read More
ಶಿವಮೊಗ್ಗ, ಮೇ 10: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಶಿವಮೊಗ್ಗ ಜಿಲ್ಲೆಯಾದ್ಯಂತ ಜಾನುವಾರುಗಳಲ್ಲಿ ಕಂದುರೋಗ ನಿಯಂತ್ರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಶಿವಯೋಗಿ ಬಿ ಯಲಿ ತಿಳಿಸಿದ್ದಾರೆ. ಕಂದುರೋಗವು ಪ್ರಾಣಿಜನ್ಯರೋಗವಾಗಿದ್ದು, ರಾಸುಗಳಲ್ಲಿ ಈ ರೋಗದಿಂದ ಗರ್ಭ ಧರಿಸಿದ ಹಸುಗಳು 6 ತಿಂಗಳ ನಂತರ ಕಂದು ಹಾಕಬಹುದು. ಅವುಗಳ ಗರ್ಭ ಸ್ರಾವದಿಂದ ಮತ್ತು ಹಸಿ ಹಾಲನ್ನು ಹಾಗೆಯೇ ಉಪಯೋಗಿಸುವುದರಿಂದ ರೋಗವು ಮನುಷ್ಯರಿಗೂ ಹರಡಬಹುದು. ಸದರಿ ರೋಗವು ಮನುಷ್ಯರಿಗೆ ಬಂದರೆ ಸಂತಾನೋತ್ಪತ್ತಿ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ಕಂದುರೋಗ (ಬ್ರುಸೆಲೋಸಿಸ್) ದ ವಿರುದ್ಧ ಲಸಿಕೆ ಹಾಕಿಸಿ ಜಾನುವಾರುಗಳ ರಕ್ಷಣೆಗೆ ಪಶು ವೈದ್ಯಕೀಯ ಇಲಾಖೆ ಮನವಿ

ಶಿವಮೊಗ್ಗ, ಮೇ 10: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಶಿವಮೊಗ್ಗ ಜಿಲ್ಲೆಯಾದ್ಯಂತ ಜಾನುವಾರುಗಳಲ್ಲಿ ಕಂದುರೋಗ ನಿಯಂತ್ರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಶಿವಯೋಗಿ ಬಿ ಯಲಿ ತಿಳಿಸಿದ್ದಾರೆ.

ಕಂದುರೋಗವು ಪ್ರಾಣಿಜನ್ಯರೋಗವಾಗಿದ್ದು, ರಾಸುಗಳಲ್ಲಿ ಈ ರೋಗದಿಂದ ಗರ್ಭ ಧರಿಸಿದ ಹಸುಗಳು 6 ತಿಂಗಳ ನಂತರ ಕಂದು ಹಾಕಬಹುದು. ಅವುಗಳ ಗರ್ಭ ಸ್ರಾವದಿಂದ ಮತ್ತು  ಹಸಿ  ಹಾಲನ್ನು ಹಾಗೆಯೇ ಉಪಯೋಗಿಸುವುದರಿಂದ ರೋಗವು ಮನುಷ್ಯರಿಗೂ ಹರಡಬಹುದು. ಸದರಿ ರೋಗವು ಮನುಷ್ಯರಿಗೆ ಬಂದರೆ ಸಂತಾನೋತ್ಪತ್ತಿ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ಕಂದುರೋಗ (ಬ್ರುಸೆಲೋಸಿಸ್) ದ ವಿರುದ್ಧ ಲಸಿಕೆ ಹಾಕಿಸಿ ಜಾನುವಾರುಗಳ ರಕ್ಷಣೆಗೆ ಪಶು ವೈದ್ಯಕೀಯ ಇಲಾಖೆ ಮನವಿ Read More
ಸಂಪೂರ್ಣ ನಿಗೂಢವಾಗಿ ಪರಿಣಮಿಸಿದ್ದ ಯುವತಿಯ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. ಮುಂಬೈನಲ್ಲಿ ಕ್ರೈಸ್ತ ಸನ್ಯಾನಿಸಿಯಾಗಲು ಹಾಗೂ ಪೋಷಕರಿಂದ ಹಣ ಪಡೆಯುವ ಉದ್ದೇಶದಿಂದ, ಸ್ವತಃ ಯುವತಿಯೇ ಕಿಡ್ನ್ಯಾಪ್ ಕಥೆ ಸೃಷ್ಟಿಸಿದ್ದು ಬೆಳಕಿಗೆ ಬಂದಿದೆ! ಹಣಕ್ಕಾಗಿ ಯುವತಿಯ ಕಿಡ್ನ್ಯಾಪ್ ಮಾಡಲಾಗಿದೆ ಎಂಬ ದೂರು, ಶಿವಮೊಗ್ಗ ಪೊಲೀಸರ ನಿದ್ದೆಗೆಡಿಸಿತ್ತು ಸಿನಿಮೀಯ ಶೈಲಿಯಲ್ಲಿ ಪ್ರಕರಣದ ತನಿಖೆ ನಡೆಸಿದ್ದಾರೆ. ಇನ್ನೇನು ಹುಬ್ಬಳ್ಳಿಯಿಂದ ಮುಂಬೈಗೆ ಬಸ್ ಏರಲು ಸಿದ್ದವಾಗಿ ನಿಂತಿದ್ದ ಯುವತಿಯನ್ನು ಪತ್ತೆ ಹಚ್ಚಿ ಶಿವಮೊಗ್ಗಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂಬೈನಲ್ಲಿ ಕ್ರೈಸ್ತ ಸನ್ಯಾಸಿನಿಯಾಗಲು ‘ಕಿಡ್ನ್ಯಾಪ್’ ಕಥೆ ಸೃಷ್ಟಿಸಿದ ಯುವತಿ..!

ಶಿವಮೊಗ್ಗ, ಮೇ 16: ಸಂಪೂರ್ಣ ನಿಗೂಢವಾಗಿ ಪರಿಣಮಿಸಿದ್ದ, ಯುವತಿಯ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. ಮುಂಬೈನಲ್ಲಿ ಕ್ರೈಸ್ತ ಸನ್ಯಾನಿಸಿಯಾಗಲು ಹಾಗೂ ಪೋಷಕರಿಂದ ಹಣ ಪಡೆಯುವ ಉದ್ದೇಶದಿಂದ, ಸ್ವತಃ ಯುವತಿಯೇ ಕಿಡ್ನ್ಯಾಪ್ ಕಥೆ ಸೃಷ್ಟಿಸಿದ್ದು ಬೆಳಕಿಗೆ ಬಂದಿದೆ..!

ಹಣಕ್ಕಾಗಿ ಯುವತಿಯ ಕಿಡ್ನ್ಯಾಪ್ ಮಾಡಲಾಗಿದೆ ಎಂಬ ದೂರು, ಶಿವಮೊಗ್ಗ ಪೊಲೀಸರ ನಿದ್ದೆಗೆಡಿಸಿತ್ತು. ಸಿನಿಮೀಯ ಶೈಲಿಯಲ್ಲಿ ಪ್ರಕರಣದ ತನಿಖೆ ನಡೆಸಿದ್ದಾರೆ. ಇನ್ನೇನು ಹುಬ್ಬಳ್ಳಿಯಿಂದ ಮುಂಬೈಗೆ ಬಸ್ ಏರಲು ಸಿದ್ದವಾಗಿ ನಿಂತಿದ್ದ ಯುವತಿಯನ್ನು, ಪತ್ತೆ ಹಚ್ಚಿ ಶಿವಮೊಗ್ಗಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂಬೈನಲ್ಲಿ ಕ್ರೈಸ್ತ ಸನ್ಯಾಸಿನಿಯಾಗಲು ‘ಕಿಡ್ನ್ಯಾಪ್’ ಕಥೆ ಸೃಷ್ಟಿಸಿದ ಯುವತಿ..! Read More
ಶಿವಮೊಗ್ಗ, ಮೇ 15: ಹಣಕ್ಕಾಗಿ ಯುವತಿಯೋರ್ವಳನ್ನು ದುಷ್ಕರ್ಮಿಗಳು ಅಪಹರಿಸಿರುವ ಘಟನೆ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಕುರಿತಂತೆ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ರಂಜಿತಾ ಬಿ (22) ಕಿಡ್ನ್ಯಾಪ್ ಆದ ಯುವತಿ ಎಂದು ಗುರುತಿಸಲಾಗಿದೆ. ಮೇ 14 ರಂದು ಸಂಜೆ 5 ಗಂಟೆ ರಾತ್ರಿ 9.30 ರ ನಡುವೆ ಯುವತಿಯ ಕಿಡ್ನ್ಯಾಪ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಮೊಗ್ಗ : ಹಣಕ್ಕಾಗಿ ಯುವತಿಯ ಅಪಹರಣ – ನಿಗೂಢವಾದ ಪ್ರಕರಣ!

ಶಿವಮೊಗ್ಗ, ಮೇ 15: ಹಣಕ್ಕಾಗಿ ಯುವತಿಯೋರ್ವಳನ್ನು ದುಷ್ಕರ್ಮಿಗಳು ಅಪಹರಿಸಿರುವ ಘಟನೆ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆ ಕುರಿತಂತೆ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ರಂಜಿತಾ ಬಿ (22) ಕಿಡ್ನ್ಯಾಪ್ ಆದ ಯುವತಿ ಎಂದು ಗುರುತಿಸಲಾಗಿದೆ. ಮೇ 14 ರಂದು ಸಂಜೆ 5 ಗಂಟೆ ರಾತ್ರಿ 9.30 ರ ನಡುವೆ ಯುವತಿಯ ಕಿಡ್ನ್ಯಾಪ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಮೊಗ್ಗ : ಹಣಕ್ಕಾಗಿ ಯುವತಿಯ ಅಪಹರಣ – ನಿಗೂಢವಾದ ಪ್ರಕರಣ! Read More
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಸೇರಿದ ಅಡಕೆ ತೋಟದಲ್ಲಿ ಪುನುಗು ಬೆಕ್ಕು ಸಾಯಿಸಿ ವಾಮಾಚಾರ! ‘ಕುಟುಂಬದವರಿಗೆ ಕೆಡಕುಂಟು ಮಾಡಲು ವಿರೋಧಿಗಳಿಂದ ಮಾಟಮಂತ್ರ’ – ಬಿ.ವೈ.ರಾಘವೇಂದ್ರ ಆರೋಪ ಶಿಕಾರಿಪುರ, ಮೇ 15: ಶಿಕಾರಿಪುರ ತಾಲೂಕಿನ ಬಂಡಿಭೈರನಹಳ್ಳಿ ಮಜಿರೆ ಸಿದ್ದಾಪುರ ಗ್ರಾಮದಲ್ಲಿರುವ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬಕ್ಕೆ ಸೇರಿದ ಅಡಕೆ ತೋಟದಲ್ಲಿ ವಾಮಾಚಾರ ನಡೆಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ! ಈ ಸಂಬಂಧ ತೋಟದದಲ್ಲಿ ಕಾರ್ಯನಿರ್ವಹಿಸುವ ಎಸ್.ಕೆ.ರಮೇಶ್ ಅವರು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್.ಐ.ಆರ್. ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಘಟನೆ ಹಿನ್ನೆಲೆ: ಮೇ 11 ರಂದು ರಾತ್ರಿ ಸರಿಸುಮಾರು 10 ಗಂಟೆಯಿಂದ 10.30 ರೊಳಗೆ ವಾಮಾಚಾರ ನಡೆಸಲಾಗಿದೆ. ಪುನಗು ಬೆಕ್ಕನ್ನು ಸಾಯಿಸಿ ತೋಟದಲ್ಲಿ ಗುಂಡಿ ತೆಗೆದು ಹೂಳಲಾಗಿದೆ. ಅದರ ಮೇಲೆ ಹೂವು ಮತ್ತೀತರ ಪೂಜಾ ಸಾಮಗ್ರಿಗಳನ್ನು ಹಾಕಲಾಗಿದೆ. ಅಂದು ರಾತ್ರಿಯೇ ವಾಮಾಚಾರ ನಡೆದಿರುವ ವಿಷಯ ಬಿ.ಎಸ್.ಯಡಿಯೂರಪ್ಪರ ಕುಟುಂಬ ಸದಸ್ಯರಿಗೆ ಗೊತ್ತಾಗಿದೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಸೇರಿದ ಅಡಕೆ ತೋಟದಲ್ಲಿ ಪುನುಗು ಬೆಕ್ಕು ಸಾಯಿಸಿ ವಾಮಾಚಾರ!

ಶಿಕಾರಿಪುರ, ಮೇ 15: ಶಿಕಾರಿಪುರ ತಾಲೂಕಿನ ಬಂಡಿಭೈರನಹಳ್ಳಿ ಮಜಿರೆ ಸಿದ್ದಾಪುರ ಗ್ರಾಮದಲ್ಲಿರುವ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬಕ್ಕೆ ಸೇರಿದ ಅಡಕೆ ತೋಟದಲ್ಲಿ ವಾಮಾಚಾರ ನಡೆಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ!

ಈ ಸಂಬಂಧ ತೋಟದದಲ್ಲಿ ಕಾರ್ಯನಿರ್ವಹಿಸುವ ಎಸ್.ಕೆ.ರಮೇಶ್ ಅವರು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್.ಐ.ಆರ್. ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಘಟನೆ ಹಿನ್ನೆಲೆ: ಮೇ 11 ರಂದು ರಾತ್ರಿ ಸರಿಸುಮಾರು 10 ಗಂಟೆಯಿಂದ 10.30 ರೊಳಗೆ ವಾಮಾಚಾರ ನಡೆಸಲಾಗಿದೆ. ಪುನಗು ಬೆಕ್ಕನ್ನು ಸಾಯಿಸಿ ತೋಟದಲ್ಲಿ ಗುಂಡಿ ತೆಗೆದು ಹೂಳಲಾಗಿದೆ. ಅದರ ಮೇಲೆ ಹೂವು ಮತ್ತೀತರ ಪೂಜಾ ಸಾಮಗ್ರಿಗಳನ್ನು ಹಾಕಲಾಗಿದೆ. ಅಂದು ರಾತ್ರಿಯೇ ವಾಮಾಚಾರ ನಡೆದಿರುವ ವಿಷಯ ಬಿ.ಎಸ್.ಯಡಿಯೂರಪ್ಪರ ಕುಟುಂಬ ಸದಸ್ಯರಿಗೆ ಗೊತ್ತಾಗಿದೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಸೇರಿದ ಅಡಕೆ ತೋಟದಲ್ಲಿ ಪುನುಗು ಬೆಕ್ಕು ಸಾಯಿಸಿ ವಾಮಾಚಾರ! Read More