ಎಕ್ಸ್ಪ್ರೆಸ್ ಬಸ್ ಮೂಲಕ ಮತದಾನ ಪ್ರಕ್ರಿಯೆ ಕುರಿತಂತೆ ಜಾಗೃತಿ : ಶಿವಮೊಗ್ಗ ಜಿಲ್ಲಾಡಳಿತದ ವಿನೂತನ ಪ್ರಯೋಗ!
ಮತದಾನ ಕೇಂದ್ರ ಹೇಗಿರಲಿದೆ, ಅಲ್ಲಿರುವ ವ್ಯವಸ್ಥೆಗಳೇನು, ಮತಯಂತ್ರ ಹಾಗೂ ವಿವಿ ಪ್ಯಾಟ್ ಗಳ ಕಾರ್ಯನಿರ್ವಹಣೆ, ವೋಟರ್ ಹೆಲ್ಫಲೈನ್ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಹಲವು ಮಾಹಿತಿ ಒಳಗೊಂಡ ವಿಶೇಷ ‘ಸ್ವೀಪ್ ಎಕ್ಸ್ಪ್ರೆಸ್’ ಬಸ್ ವೊಂದನ್ನು ಶಿವಮೊಗ್ಗ ಜಿಲ್ಲಾಡಳಿತ ಸಿದ್ದಪಡಿಸಿದೆ.
ಈ ಬಸ್ ಮೇ 9 ರವರೆಗೆ ಜಿಲ್ಲೆಯಾದ್ಯಂತ ಸಂಚರಿಸಲಿದೆ. ಮತದಾನದ ಕುರಿತಂತೆ ಜಾಗೃತಿ ಮೂಡಿಸಲಿದೆ. ವಿಶೇಷವಾಗಿ ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಪ್ರದೇಶಗಳಲ್ಲಿ ಈ ಬಸ್ ಹೆಚ್ಚಿನದಾಗಿ ಸಂಚರಿಸಲಿದೆ.
ಎಕ್ಸ್‌ಪ್ರೆಸ್ ಬಸ್ ಮೂಲಕ ಮತದಾನ ಪ್ರಕ್ರಿಯೆ ಕುರಿತಂತೆ ಜಾಗೃತಿ : ಶಿವಮೊಗ್ಗ ಜಿಲ್ಲಾಡಳಿತದ ವಿನೂತನ ಪ್ರಯೋಗ! Read More
