ಮಳೆಗಾಲ ಮುನ್ನೆಚ್ಚರಿಕೆ ಕ್ರಮ : ಮುಂದುವರಿದ ಜಿಲ್ಲಾಧಿಕಾರಿಗಳ ಶಿವಮೊಗ್ಗ ಸಿಟಿ ರೌಂಡ್ಸ್..!
ಶಿವಮೊಗ್ಗ, ಮೇ 26: ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ ಆರ್ ಅವರು ಇಂದು ಸಹ ನಗರ ಹಾಗೂ ಹೊರವಲಯದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಮಳೆಯಿಂದ ಸಮಸ್ಯೆ ಎದುರಿಸಬಹುದಾದ ಸ್ಥಳಗಳಿಗೆ ಅಧಿಕಾರಿಗಳೊಂದಿಗೆ ತೆರಳಿ, ಸೂಕ್ತ ಮುಂಜಾಗ್ರತಾ ಕ್ರಮ ಅನುಸರಿಸುವಂತೆ ಸಲಹೆ-ಸೂಚನೆ ನೀಡಿದರು.
ಪಾಲಿಕೆ ವ್ಯಾಪ್ತಿಯ ಎಲ್ಬಿಎಸ್ ನಗರದ ಚಾನಲ್ಗೆ ಭೇಟಿ ನೀಡಿ, ಚಾನಲ್ನಲ್ಲಿರುವ ಗಿಡಗಂಟಿ, ಕಸ ತೆಗೆಸಬೇಕು. ಇಲ್ಲವಾದಲ್ಲಿ ಮಳೆ ನೀರು ಸರಾಗವಾಗಿ ಹರಿಯದೇ ನೀರು ಹೊರಗೆ ನುಗ್ಗುವ ಸಂಭವವಿದ್ದು, ನೀರು ಸರಾಗವಾಗಿ ಹರಿಯಲು ಅನುವಾಗುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ತಿಳಿಸಿದರು.
ಮಳೆಗಾಲ ಮುನ್ನೆಚ್ಚರಿಕೆ ಕ್ರಮ : ಮುಂದುವರಿದ ಜಿಲ್ಲಾಧಿಕಾರಿಗಳ ಶಿವಮೊಗ್ಗ ಸಿಟಿ ರೌಂಡ್ಸ್..! Read More
