Shimoga: Farmer's Association's outrage against the finance that locked the house! shimoga : ಮನೆಗೆ ಬೀಗ ಹಾಕಿದ್ದ ಫೈನಾನ್ಸ್ ವಿರುದ್ದ ರೈತ ಸಂಘದ ಆಕ್ರೋಶ!
ಶಿವಮೊಗ್ಗ : ಬಲೆಯಲ್ಲಿ ಸಿಲುಕಿಬಿದ್ದ ನಾಗರಹಾವು..! ಶಿವಮೊಗ್ಗ, ಫೆ 7: ಮನೆ ಮುಂಭಾಗದ ಹೂವಿನ ಗಿಡಗಳ ಬೇಲಿಗೆ ರಕ್ಷಣೆಗೆಂದು ಹಾಕಿದ್ದ ಮೀನಿನ ಬಲೆಗೆ ನಾಗರಹಾವೊಂದು ಸಿಲುಕಿ ಬಿದ್ದ ಘಟನೆ, ಫೆಬ್ರವರಿ 7 ರಂದು ಶಿವಮೊಗ್ಗ ನಗರದ ಹೊರವಲಯ ಗೋಂಧಿಚಟ್ನಳ್ಳಿಯಲ್ಲಿ ನಡೆದಿದೆ. ನಾಗೇಂದ್ರ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ಹೂವಿನ ಗಿಡಗಳ ರಕ್ಷಣೆಗೆಂದು ಬೇಲಿಯ ಸುತ್ತಲೂ ಬಲೆ ಹಾಕಲಾಗಿತ್ತು. ಆಕಸ್ಮಿಕವಾಗಿ ಸದರಿ ಬಲೆಗೆ ಬೃಹದಾಕಾರದ ನಾಗರಹಾವು ಹಾವು ಸಿಲುಕಿ ಬಿದ್ದಿದೆ. ಬಲೆಯಲ್ಲಿ ಹಾವು ಸಿಲುಕಿ ಬಿದ್ದು ಸಂಕಷ್ಟ ಪಡುತ್ತಿರುವುದನ್ನು ಗಮನಿಸಿದ ಕುಟುಂಬದವರು, ತಕ್ಷಣವೇ ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕಾಗಮಿಸಿದ ಕಿರಣ್ ಅವರು ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದ್ದಾರೆ. ‘ಕತ್ತರಿಯ ಸಹಾಯದಿಂದ ಬಲೆ ಕತ್ತರಿಸಿ, ಸುಮಾರು 4 ಅಡಿ ಉದ್ದದ ನಾಗರಹಾವನ್ನು ಸುರಕ್ಷಿತವಾಗಿ ಸಂರಕ್ಷಿಸಲಾಯಿತು’ ಎಂದು ಸ್ನೇಕ್ ಕಿರಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
shimoga | What is the warning given by ASP Shimoga for micro finance? shimoga | ಮೈಕ್ರೋ ಫೈನಾನ್ಸ್ ಗಳಿಗೆ ಶಿವಮೊಗ್ಗ ASP ನೀಡಿದ ಎಚ್ಚರಿಕೆಯೇನು?
Harsh notice to moneylenders pawnbrokers finance : warning of strict action if rules are violated! ಲೇವಾದೇವಿಗಾರರು, ಗಿರವಿದಾರರು, ಫೈನಾನ್ಸ್’ಗಳಿಗೆ ಖಡಕ್ ಸೂಚನೆ : ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ!