Harsh notice to moneylenders pawnbrokers finance : warning of strict action if rules are violated! ಲೇವಾದೇವಿಗಾರರು, ಗಿರವಿದಾರರು, ಫೈನಾನ್ಸ್’ಗಳಿಗೆ ಖಡಕ್ ಸೂಚನೆ : ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ!

ಲೇವಾದೇವಿಗಾರರು, ಗಿರವಿದಾರರು, ಫೈನಾನ್ಸ್’ಗಳಿಗೆ ಖಡಕ್ ಸೂಚನೆ : ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ!

ಶಿವಮೊಗ್ಗ, ಜು. 24: ಜಿಲ್ಲೆಯಲ್ಲಿ ಲೇವಾದೇವಿ ವ್ಯವಹಾರ ನಡೆಸುತ್ತಿರುವ ಲೇವಾದೇವಿಗಾರರು, ಗಿರವಿದಾರರು ಮತ್ತು ಹಣಕಾಸು ಸಂಸ್ಥೆಗಳು (moneylenders, pawnbrokers, finance institutions) ವ್ಯವಹಾರ ಸ್ಥಳದ ಕಚೇರಿಯಲ್ಲಿ ಪರವಾನಿಗೆಯನ್ನು (license) ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು (Deputy Registrar of District Co-operative Societies) ಸೂಚಿಸಿದ್ದಾರೆ.

ಕರ್ನಾಟಕ ಲೇವಾದೇವಿ ಅಧಿನಿಯಮ 1961 (karnataka moneylenders act) ರ ಪ್ರಕರಣ 28 ರಡಿ ಸರ್ಕಾರವು ನಿಗದಿಪಡಿಸಿರುವ ಬಡ್ಡಿ ದರ (Interest rate) ಭದ್ರತಾ ಸಾಲಗಳಿಗೆ (Security loan) ವಾರ್ಷಿಕ ಶೇ.14 ರಷ್ಟು, ಭದ್ರತಾ ರಹಿತ ಸಾಲಗಳಿಗೆ (Unsecured loan) ವಾರ್ಷಿಕ ಶೇ. 16 ರಷ್ಟು ಬಡ್ಡಿಯನ್ನು (interest) ಮಾತ್ರ ವಿಧಿಸಬೇಕು ಎಂದು ತಿಳಿಸಿದ್ದಾರೆ.

ಸರ್ಕಾರವು (govt) ನಿಗದಿಪಡಿಸಿದ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿ ದರ ಪಡೆದ ಬಗ್ಗೆ ಪರಿವೀಕ್ಷಣೆಯಲ್ಲಿ (inspection) ಕಂಡುಬಂದಲ್ಲಿ ಅಥವಾ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಸದರಿಯವರ ಮೇಲೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Heavy rains again in areas of Western Ghats: Increased influx of Linganamakki dengue ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಮತ್ತೆ ಮಳೆ ಚುರುಕು : ಲಿಂಗನಮಕ್ಕಿ ಡ್ಯಾಂಗೆ ಹೆಚ್ಚಿದ ಒಳಹರಿವು Previous post ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಮತ್ತೆ ಮಳೆ ಚುರುಕು : ಲಿಂಗನಮಕ್ಕಿ ಡ್ಯಾಂಗೆ ಹೆಚ್ಚಿದ ಒಳಹರಿವು
Shimoga Govt School's heating system stopped at the same speed as it started: Should the Education Minister pay attention ಶಿವಮೊಗ್ಗ ಸರ್ಕಾರಿ ಶಾಲೆಯಲ್ಲಿ ಆರಂಭಗೊಂಡ ವೇಗದಲ್ಲಿಯೇ ಸ್ಥಗಿತಗೊಂಡ ಬಿಸಿಯೂಟ : ಗಮನಹರಿಸುವರೆ ಶಿಕ್ಷಣ ಸಚಿವರು? ವರದಿ : ಬಿ. ರೇಣುಕೇಶ್ reporter : b.renukesha Next post ಆರಂಭಗೊಂಡ ವೇಗದಲ್ಲಿಯೇ ಸ್ಥಗಿತಗೊಂಡ ಬಿಸಿಯೂಟ : ಗಮನಹರಿಸುವರೆ ಶಿಕ್ಷಣ ಸಚಿವರು?