Shimoga: Farmer's Association's outrage against the finance that locked the house! shimoga : ಮನೆಗೆ ಬೀಗ ಹಾಕಿದ್ದ ಫೈನಾನ್ಸ್ ವಿರುದ್ದ ರೈತ ಸಂಘದ ಆಕ್ರೋಶ!

shimoga : ಮನೆಗೆ ಬೀಗ ಹಾಕಿದ್ದ ಫೈನಾನ್ಸ್ ವಿರುದ್ದ ರೈತ ಸಂಘದ ಆಕ್ರೋಶ!

ಶಿವಮೊಗ್ಗ (shivamogga), ಫೆ. 26: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಅಗರದಹಳ್ಳಿ ಗ್ರಾಮದಲ್ಲಿ ಖಾಸಗಿ ಫೈನಾಸ್ಸ್ ಸಂಸ್ಥೆಯೊಂದು, ಸಾಲ ಮರು ಪಾವತಿಸದ ವ್ಯಕ್ತಿಯೋರ್ವರ ಕುಟುಂಬಕ್ಕೆ ಸೇರಿದ ಎರಡು ಮನೆಗಳ ಬಾಗಿಲಿಗೆ ಕಳೆದ ಎರಡು ತಿಂಗಳ ಹಿಂದೆ ನೋಟೀಸ್ ಅಂಟಿಸಿ, ಬೀಗ ಹಾಕಿದ್ದ ಘಟನೆ ಬೆಳಕಿಗೆ ಬಂದಿದೆ.

ಕೂಲಿ ಕಾರ್ಮಿಕ ಚೌಡಪ್ಪ ಹಾಗೂ ಅವರ ಸಹೋದರನಿಗೆ ಸೇರಿದ ಮನೆಗಳಿಗೆ ಫೈನಾನ್ಸ್ ಸಂಸ್ಥೆ ಬೀಗ ಹಾಕಿದೆ. ಇದಕ್ಕೆ ರೈತ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಭದ್ರಾವತಿ ನಗರದಲ್ಲಿರುವ ಫೈನಾನ್ಸ್ ಸಂಸ್ಥೆಯ ಕಚೇರಿ ಎದುರು ಫೆ. 25 ರಂದು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದೆ. ತಕ್ಷಣವೇ ಮನೆಗಳ ಬಾಗಿಲಿಗೆ ಅಂಟಿಸಿರುವ ನೋಟೀಸ್ ಹಾಗೂ ಬೀಗ ತೆರವುಗೊಳಿಸುವಂತೆ ಆಗ್ರಹಿಸಿದೆ.

ಚೌಡಪ್ಪ ಅವರು ಎರಡು ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. 9 ಕಂತುಗಳನ್ನು ಪಾವತಿಸಿದ್ದಾರೆ. ಉಳಿದ ಹಣ ವಸೂಲಿ ಮಾಡಲು ಫೈನಾನ್ಸ್ ಸಂಸ್ಥೆಯುವರ ಚೌಡಪ್ಪ ಹಾಗೂ ಅವರ ಸಹೋದರನಿಗೆ ಸೇರಿದ ಎರಡು ಗುಡಿಸಲುಗಳ ಬಾಗಿಲುಗಳಿಗೆ ಬೀಗ ಹಾಕಿತ್ತು. ಮತ್ತೊಂದೆಡೆ, ಫೈನಾನ್ಸ್ ನವರ ಕಿರುಕುಳ ತಾಳಲರಾದೆ ಚೌಡಪ್ಪ ಅವರು ಪತ್ನಿಯೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ರೈತ ಸಂಘ ಆರೋಪಿಸಿದೆ.

ತಕ್ಷಣವೇ ಜಿಲ್ಲಾಡಳಿತ ಸಾಲ ವಸೂಲಾತಿ ನೆಪದಲ್ಲಿ ಬಡವರಿಗೆ ತೊಂದರೆ ಕೊಡುತ್ತಿರುವ ಮೈಕ್ರೋ ಫೈನಾನ್ಸ್ ಗಳ ವಿರುದ್ದ ಶಿಸ್ತುಕ್ರಮ ಜರುಗಿಸಬೇಕು. ದಬ್ಬಾಳಿಕೆಗೆ ಕಡಿವಾಣ ಹಾಕಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಪ್ರತಿಭಟನೆಯಲ್ಲಿ ರೈತ ಸಂಘಟನೆಯ ಕಾರ್ಯಾಧ್ಯಕ್ಷರಾದ ಯಶವಂತರಾವ್ ಘೋರ್ಪಣೆ, ಮುಖಂಡರಾದ ಹಿರಿಯಣ್ಣಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಡಿ ವಿ, ವೀರೇಶ್, ಚಂದ್ರಪ್ಪ, ರಂಗಪ್ಪ, ಹಂಚಿನಸಿದ್ದಾಪುರ ವೀರೇಶ್, ತಿಮ್ಮಣ್ಣ ಮೊದಲಾದವರಿದ್ದರು.

Shimoga, February 26: In Agaradahalli village of Bhadravati taluk of Shimoga district, an incident has come to light that two months ago, a private finance company pasted notices on the doors of two houses belonging to the family of a person who had not repaid the loan and locked them.

The houses belonging to laborer Chaudappa and his brother have been locked by the finance company. The Farmers’ Union has expressed great indignation over this. In this regard, they protested in front of the office of the finance institution in Bhadravati city on February 25 and expressed their outrage. The notices pasted on the doors of the houses and the locks have been demanded to be removed immediately.

shimoga | Shimoga: Lion Safari's only male tiger dies - what is the reason? shimoga | ಶಿವಮೊಗ್ಗ : ಲಯನ್ ಸಫಾರಿಯ ಏಕೈಕ ಗಂಡು ಹುಲಿ ಸಾವು – ಕಾರಣವೇನು? Previous post shimoga | ಶಿವಮೊಗ್ಗ : ಲಯನ್ ಸಫಾರಿಯ ಏಕೈಕ ಗಂಡು ಹುಲಿ ಸಾವು – ಕಾರಣವೇನು?
shimoga | ಶಿವಮೊಗ್ಗ : ಹೊನ್ನಾವರದ ಕತಗಾಲದ ಬಳಿ ಆಹಾರವಿಲ್ಲದೆ ನಿತ್ರಾಣಗೊಂಡಿದ್ದ ಕಪ್ಪು ಚಿರತೆ ಮರಿಯ ಸಂರಕ್ಷಣೆ! Next post shimoga | ಶಿವಮೊಗ್ಗ : ಹೊನ್ನಾವರದ ಕತಗಾಲದ ಬಳಿ ಆಹಾರವಿಲ್ಲದೆ ನಿತ್ರಾಣಗೊಂಡಿದ್ದ ಕಪ್ಪು ಚಿರತೆ ಮರಿಯ ಸಂರಕ್ಷಣೆ!