ಹಕ್ಕುಪತ್ರ ನೀಡಲು ಆಗ್ರಹಿಸಿ ಮಾ. 20 ರಿಂದ ಅನಿರ್ದಿಷ್ಟಾವಧಿ ಧರಣಿ : ಚುನಾವಣೆ ಬಹಿಷ್ಕಾರದ ಎಚ್ಚರಿಕೆ!
ವಾಸದ ಮನೆಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಹೊಸಮನೆ 3 ಮತ್ತು 4 ನೇ ತಿರುವಿನ ದಲಿತ ಸಮುದಾಯದ ನಿವಾಸಿಗಳು, ಮಾ. 20 ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಹಾಗೂ ಮುಂಬರುವ ವಿಧಾನಸಭೆ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ.
ಈ ಸಂಬಂಧ ಭಾನುವಾರ ಸ್ಥಳೀಯ ಯುವ ಮುಖಂಡರಾದ ಮಧುಸೂದನ್, ರಾಮಕುಮಾರ್, ನಿರಂಜನಮೂರ್ತಿ ಆರ್.ಕೆ., ಸುನೀಲ್ ಎನ್., ಅನೂಪ್ ವಿ., ಸತೀಶ್ ಕೆ., ಅಶೋಕ್ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
