thirthahalli | ತೀರ್ಥಹಳ್ಳಿ : ನಕಲಿ ಬಂಗಾರ ವಂಚಕರ ಗ್ಯಾಂಗ್ ನಿಂದ ಆಂಧ್ರ ವ್ಯಾಪಾರಿಗೆ ಲಕ್ಷಾಂತರ ರೂ. ದೋಖಾ!
ತೀರ್ಥಹಳ್ಳಿ (thirthahalli), ಜ. 24: ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ನಕಲಿ ಬಂಗಾರ ವಂಚಕರ ಗ್ಯಾಂಗ್, ಆಂಧ್ರಪ್ರದೇಶದ ವ್ಯಾಪಾರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ನಡೆದಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಂಧ್ರಪ್ರದೇಶ ರಾಜ್ಯದ ಕಡಪ ಜಿಲ್ಲೆಯ ನಿವಾಸಿ ಶ್ರೀನಿವಾಸ (54) ವಂಚನೆಗೊಳಗಾದ ವ್ಯಕ್ತಿಯಾಗಿದ್ದಾರೆ. 20 ಲಕ್ಷ ನಗದು ಹಾಗೂ ಮೊಬೈಲ್ ಫೋನ್ ನನ್ನು ವಂಚಕರು ಅಪಹರಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಏನೀದು ಪ್ರಕರಣ? : ಶ್ರೀನಿವಾಸ್ ಅವರಿಗೆ ಬಳ್ಳಾರಿ ಜಿಲ್ಲೆಯಲ್ಲಿ, ಓರ್ವ ಯುವಕ ಹಾಗೂ ಮಧ್ಯ ವಯಸ್ಕ ವ್ಯಕ್ತಿ ಪರಿಯಚಯವಾಗಿದ್ದರು. ತಮಗೆ ಹಳೇಯ ಕಾಲದ ಬಂಗಾರದ ನಾಣ್ಯಗಳು ಸಿಕ್ಕಿವೆ. ಇವುಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದೆವೆ ಎಂದು ತಿಳಿಸಿದ್ದರು.
ಅದರಂತೆ ಸ್ಯಾಂಪಲ್ ಎಂದು ಎರಡು ಅಸಲಿ ಬಂಗಾರದ ನಾಣ್ಯಗಳನ್ನು, ಶ್ರೀನಿವಾಸ್ ಅವರಿಗೆ ವಂಚಕರು ನೀಡಿದ್ದರು. ಪರಿಶೀಲನೆ ವೇಳೆ ಅಸಲಿ ಬಂಗಾರವಾಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ವಂಚಕರ ಮಾತು ನಿಜವೆಂದು ನಂಬಿದ್ದರು.
ವಂಚಕರ ಸೂಚನೆಯಂತೆ, ಬಂಗಾರ ಖರೀದಿಗಾಗಿ ತಮ್ಮ ಊರಿನಿಂದ ಜ. 22 ರಂದು ಶ್ರೀನಿವಾಸ್ ಅವರು ತೀರ್ಥಹಳ್ಳಿಗೆ ಆಗಮಿಸಿದ್ದರು. ಪಟ್ಟಣದ ಹೊರವಲಯ ಆಗುಂಬೆ ರಸ್ತೆಯ ನಿರ್ಜನ ಪ್ರದೇಶಕ್ಕೆ ವಂಚಕರು ಅವರನ್ನು ಕರೆಯಿಸಿಕೊಂಡಿದ್ದರು.
ಈ ವೇಳೆ 4 ಕೆಜಿ ನಕಲಿ ಬಂಗಾರದ ನಾಣ್ಯಗಳನ್ನು ವಂಚಕರು ಶ್ರೀನಿವಾಸ್ ಅವರಿಗೆ ನೀಡಿದ್ದರು. ಜೊತೆಗೆ ಅವರ ಬಳಿಯಿದ್ದ ಮೊಬೈಲ್ ಫೋನ್ ನನ್ನು ಕೂಡ ಕಿತ್ತುಕೊಂಡು ಪರಾರಿಯಾಗಿದ್ದರು. ತದನಂತರ ಪರಿಶೀಲನೆ ವೇಳೆ ನಕಲಿ ಬಂಗಾರ ಎಂಬುವುದು ಗೊತ್ತಾಗಿತ್ತು.
ಮೋಸ ಹೋಗಿರುವುದನ್ನು ಅರಿತ ಶ್ರೀನಿವಾಸ್ ಅವರು ತೀರ್ಥಹಳ್ಳಿ ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Thirthahalli, January. 24: A gang of fake gold fraudsters operating in Shimoga district cheated a businessman from Andhra Pradesh of lakhs of rupees. A case has been registered in this regard at the Theerthahalli Police Station.
Srinivasa (54), a resident of Kadapa district of Andhra Pradesh state, is the complainant person. It is stated in the complaint given to the police that the fraudsters stole 20 lakh cash and a mobile phone and fled.
Realizing that he was cheated, Srinivas reached the Tirthahalli police station and lodged a complaint. The police have registered a case and are continuing the investigation.
